ಉತ್ತರ ಪ್ರದೇಶ ಚುನಾವಣೆ: 15 ನಿಮಿಷದಲ್ಲೇ ಮುಗಿದ ಕಾಂಗ್ರೆಸ್, ಎಸ್​ಪಿ ಸೀಟು ಹಂಚಿಕೆಯ ಮೊದಲ ಸಭೆ: ನಾಳೆ ಮತ್ತೆ ಸಭೆ | Uttar Pradesh

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ನಾಯಕರು ದೆಹಲಿಯಲ್ಲಿ ಇಂದು(ನ. 23) ಮೊದಲ ಔಪಚಾರಿಕೆ ಸಭೆ ನಡೆಸಿದರು. ಕೇವಲ 15 ನಿಮಿಷಗಳ ಕಾಲ ಸಭೆ ನಡೆದಿದ್ದು, ಯಾವುದೇ ಮಹತ್ವದ ವಿಷಯ ಚರ್ಚೆಯಾಗಿಲ್ಲ ಎನ್ನಲಾಗಿದೆ.
ಉತ್ತರ ಪ್ರದೇಶ ಚುನಾವಣೆ: 15 ನಿಮಿಷದಲ್ಲೇ ಮುಗಿದ ಕಾಂಗ್ರೆಸ್, ಎಸ್​ಪಿ ಸೀಟು ಹಂಚಿಕೆಯ ಮೊದಲ ಸಭೆ: ನಾಳೆ ಮತ್ತೆ ಸಭೆ | Uttar Pradesh
Published on: 

ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ನಾಯಕರು ದೆಹಲಿಯಲ್ಲಿ ಇಂದು(ನ. 23) ಮೊದಲ ಔಪಚಾರಿಕೆ ಸಭೆ ನಡೆಸಿದರು. ಕೇವಲ 15 ನಿಮಿಷಗಳ ಕಾಲ ಸಭೆ ನಡೆದಿದ್ದು, ಯಾವುದೇ ಮಹತ್ವದ ವಿಷಯ ಚರ್ಚೆಯಾಗಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರ ಮನೆಯಲ್ಲಿ ಈ ಸಭೆ ನಡೆದಿದೆ. ಎರಡೂ ಪಕ್ಷಗಳ ತಲಾ ನಾಲ್ವರು ನಾಯಕರು ಭಾಗವಹಿಸಿದ್ದರು. ನಾಳೆ ಮತ್ತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಎಸ್​ಪಿ ನಾಯಕ ರಾಮ್​ಗೋಪಾಲ್ ಯಾದವ್, ಸಭೆ ಬಹಳ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ನಾವು ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿದೆವು, ಮತ್ತು ಶೀಘ್ರದಲ್ಲೇ ಈ ಮೈತ್ರಿಯನ್ನು ಅಂತಿಮಗೊಳಿಸುತ್ತೇವೆ ಮತ್ತು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ನಾವು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಮುಂದಿನ ಸಭೆ ನಾಳೆ ನಡೆಯಲಿದೆ ಎಂದು ಹೇಳಿದ್ದಾರೆ.

Also Read
ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗಿ ಬೆಳದಿದೆ: ಏಷ್ಯಾ ಪವರ್ ಇಂಡೆಕ್ಸ್ ವರದಿಯೇ ಸಾಕ್ಷಿ ಕಿರಣ್ ರಿಜಿಜು | Kiren Rijiju
ಉತ್ತರ ಪ್ರದೇಶ ಚುನಾವಣೆ: 15 ನಿಮಿಷದಲ್ಲೇ ಮುಗಿದ ಕಾಂಗ್ರೆಸ್, ಎಸ್​ಪಿ ಸೀಟು ಹಂಚಿಕೆಯ ಮೊದಲ ಸಭೆ: ನಾಳೆ ಮತ್ತೆ ಸಭೆ | Uttar Pradesh

ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಕೂಡ, ಎರಡೂ ಪಕ್ಷಗಳು ಒಪ್ಪಂದಕ್ಕೆ ಬಂದಿವೆ. ಅವು ಪರಸ್ಪರ ನಂಬಿಕೆ ಹೊಂದಿದ್ದು, ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ವಿಷಯ ಬಹುತೇಕ ಅಂತಿಮಗೊಂಡಿದೆ ಮತ್ತು ಗೌರವಯುತವಾದ ರೀತಿಯಲ್ಲಿ ಒಪ್ಪಂದ ಏರ್ಪಡಲಿದೆ. ಇದು ಬಹಳ ಶೀಘ್ರದಲ್ಲೇ ನಡೆಯಲಿದೆ. ವಿವರಗಳನ್ನು ಪರಸ್ಪರ ಸಮಾಲೋಚಿಸಿ ನಿರ್ಧರಿಸಿದ ನಂತರ, ನಾವು ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ.

ಇನ್ನೂ ಪ್ರತಿಯೊಂದು ಪಕ್ಷವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಅಂತಿಮ ಚರ್ಚೆಯು ಇಂದಿನ ಸಭೆಯಲ್ಲಿ ನಡೆಯುವುದಿಲ್ಲ ಎಂದು ಮೊದಲೇ ತಿಳಿಸಿದ್ದವು. ಆದರೆ, ಮೈತ್ರಿಕೂಟಕ್ಕೆ ಬಲವಾದ ನೆಲೆ ಎಂದು ಪರಿಗಣಿಸಲಾದ ಕನಿಷ್ಠ 60 'ಎ-ದರ್ಜೆ' ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಆಸಕ್ತಿ ಹೊಂದಿದೆ.

ತಮ್ಮ ಆಯ್ಕೆಯ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಯಾವ ಪ್ಲಾನ್ ಮಾಡಿದೆ ಮತ್ತು ಅದಕ್ಕಾಗಿ ಯಾವ ತಂತ್ರವನ್ನು ಬಳಸಲಿದೆ ಎಂಬುದನ್ನು ವಿವರಿಸುವಂತೆ ಕಾಂಗ್ರೆಸ್ ಅನ್ನು ಕೇಳುವುದಾಗಿ ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಬೇಡಿಕೆಗಳು ಮತ್ತು ಪ್ರಸ್ತಾವನೆಗಳ ಕುರಿತು ಸಮಾಜವಾದಿ ಪಕ್ಷವು ಆಂತರಿಕವಾಗಿ ಚರ್ಚಿಸಲಿದೆ ಎನ್ನಲಾಗಿದೆ (ಏಜೆನ್ಸೀಸ್).