ಉತ್ತರ ಪ್ರದೇಶ ಚುನಾವಣೆ: ಸೀಟು ಹಂಚಿಕೆ ಕುರಿತು ನಾಳೆ ಮಹತ್ವದ ಸಭೆ ನಡೆಸಲಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ | Uttar Pradesh

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಸೋಮವಾರ(ನ. 23) ಮಹತ್ವದ ಸಭೆ ನಡೆಸಲಿವೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಚುನಾವಣೆ: ಸೀಟು ಹಂಚಿಕೆ ಕುರಿತು ನಾಳೆ ಮಹತ್ವದ ಸಭೆ ನಡೆಸಲಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ | Uttar Pradesh
Published on: 

ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಸೋಮವಾರ(ನ. 23) ಮಹತ್ವದ ಸಭೆ ನಡೆಸಲಿವೆ ಎಂದು ವರದಿಯಾಗಿದೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್​ಐ ಮಾತನಾಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಸಂಸದ ಇಮ್ರಾನ್ ಮಸೂದ್, ನಾಳೆ ನಮ್ಮದೊಂದು ಎರಡೂ ಪಕ್ಷಗಳ ಜಂಟಿ ಸಭೆಯಿದೆ. ಅದರಲ್ಲಿ ಸೀಟು ಹಂಚಿಕೆ ಸೇರಿ ಎಲ್ಲಾ ಚರ್ಚೆಗಳು ನಡೆಯಲಿವೆ. ಉತ್ತರ ಪ್ರದೇಶದಲ್ಲಿ 'ಇಂಡಿಯಾ' ಮೈತ್ರಿಕೂಟದ ಸರ್ಕಾರ ರಚನೆಯಾಗಬೇಕೆಂಬುದು ನಮ್ಮ ಆಶಯ. ಇದಕ್ಕಾಗಿ, ನಾವು ಉತ್ತಮ ಸಮನ್ವಯದೊಂದಿಗೆ ಚುನಾವಣಾ ಕಣಕ್ಕಿಳಿಯುತ್ತೇವೆ ಎಂದಿದ್ದಾರೆ.

ಕಳೆದ ವಾರ ಕಾಂಗ್ರೆಸ್ ಸೀಟು ಹಂಚಿಕೆ ಚರ್ಚೆಯಲ್ಲಿ ಪರಿಗಣಿಸಲು ತಮ್ಮ 181 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಸಮಾಜವಾದಿ ಪಕ್ಷಕ್ಕೆ ಸಲ್ಲಿಸಿದೆ. ಕಾಂಗ್ರೆಸ್ ಪ್ರಸ್ತಾಪಿಸಿದ 181 ಸ್ಥಾನಗಳಲ್ಲಿ 135 ಸಾಮಾನ್ಯ ಕ್ಷೇತ್ರಗಳು, 45 ಪರಿಶಿಷ್ಟ ಜಾತಿಗಳಿಗೆ (SC) ಮೀಸಲಾಗಿವೆ ಮತ್ತು ಒಂದು ಪರಿಶಿಷ್ಟ ಪಂಗಡಗಳಿಗೆ (ST) ಮೀಸಲು ಕ್ಷೇತ್ರ ಎನ್ನಲಾಗಿದೆ.

Also Read
ಪ್ರಧಾನಿಯಾದ ಬಳಿಕ ಮೊದಲ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಬಾಲೇಂದ್ರ ಶಾ: ನಾಳೆ ಮೋದಿ ಜೊತೆ ಮಾತುಕತೆ | Balendra Shah
ಉತ್ತರ ಪ್ರದೇಶ ಚುನಾವಣೆ: ಸೀಟು ಹಂಚಿಕೆ ಕುರಿತು ನಾಳೆ ಮಹತ್ವದ ಸಭೆ ನಡೆಸಲಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ | Uttar Pradesh

ಇನ್ನೂ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಕುರಿತು ಚರ್ಚಿಸಲು ಸಮಾಜವಾದಿ ಪಕ್ಷ ರಾಮ್ ಗೋಪಾಲ್ ಯಾದವ್ ನೇತೃತ್ವದಲ್ಲಿ ಏಳು ಜನರ ಸಮಿತಿ ರಚಿಸಿದೆ. ಜೊತೆಗೆ ಅದರಲ್ಲಿ ಇಬ್ಬರು ಡೇಟಾ ತಜ್ಞರು ಇದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಸೀಟು ಹಂಚಿಕೆ ಕುರಿತು ಮಾತನಾಡಿದ್ದ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಪಕ್ಷದೊಂದಿಗೆ ನಮ್ಮ ಚರ್ಚೆಗಳು ಮುಂದುವರಿಯುತ್ತವೆ. ನಾವು ಪ್ರತಿಯೊಂದು ಅಂಶವನ್ನು ವಿವರವಾಗಿ ಚರ್ಚಿಸುತ್ತೇವೆ. ಯಾವ ಪಕ್ಷವು ಗೆಲ್ಲುವ ಸ್ಥಿತಿಯಲ್ಲಿದೆ ಎಂಬುದನ್ನು ಎರಡೂ ಪಕ್ಷಗಳು ಜಂಟಿಯಾಗಿ ನಿರ್ಧರಿಸುತ್ತವೆ ಎಂದು ನಾನು ಪುನರುಚ್ಚರಿಸುತ್ತೇನೆ. ಯಾವ ಪಕ್ಷವು ಸ್ಥಾನ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದೆಯೋ ಆ ಪಕ್ಷಕ್ಕೆ ಆ ಸ್ಥಾನವನ್ನು ನೀಡಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).