ಪ್ರಧಾನಿಯಾದ ಬಳಿಕ ಮೊದಲ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಬಾಲೇಂದ್ರ ಶಾ: ನಾಳೆ ಮೋದಿ ಜೊತೆ ಮಾತುಕತೆ | Balendra Shah

ನೇಪಾಳದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರು ಭಾನುವಾರ(ನ. 22) ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ಪ್ರಧಾನಿಯಾದ ಬಳಿಕ ಮೊದಲ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಬಾಲೇಂದ್ರ ಶಾ:  ನಾಳೆ ಮೋದಿ ಜೊತೆ ಮಾತುಕತೆ | Balendra Shah
Published on: 

ನವದೆಹಲಿ: ನೇಪಾಳದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಲೇಂದ್ರ ಶಾ ಅವರು ಭಾನುವಾರ(ನ. 22) ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿರುವ ಬಾಲೇಂದ್ರ ಶಾ ಅವರು, ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಮೊದಲ ವಿದೇಶ ಪ್ರವಾಸವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಆರ್ಥಿಕ ಸಹಕಾರ, ಸಂಪರ್ಕ ವ್ಯವಸ್ಥೆ, ಇಂಧನ ಯೋಜನೆಗಳು ಹಾಗೂ ದೀರ್ಘಕಾಲದ ರಾಜಕೀಯ ವಿಷಯಗಳ ಕುರಿತು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

Also Read
ಶಾರುಖ್ ಖಾನ್ ವಾಚ್ ಬೆಲೆ 3.49 ಕೋಟಿ ರೂ.! ರಣವೀರ್ ಗಡಿಯಾರದ ಪ್ರೈಸ್​ ಎಷ್ಟು ಗೊತ್ತಾ? | Luxury Watches
ಪ್ರಧಾನಿಯಾದ ಬಳಿಕ ಮೊದಲ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಬಾಲೇಂದ್ರ ಶಾ:  ನಾಳೆ ಮೋದಿ ಜೊತೆ ಮಾತುಕತೆ | Balendra Shah

ನಾಳೆ(ನ. 23) ಶಾ ಅವರು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಉಭಯ ನಾಯಕರು ಭಾರತ-ನೇಪಾಳ ಸಂಬಂಧದ ಸಮಗ್ರ ಅವಲೋಕನ ನಡೆಸಲಿದ್ದು, ಪರಸ್ಪರ ಆಸಕ್ತಿಯ ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ.

ಪ್ರಮುಖವಾಗಿ ಭೈರಹವಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಸಂಯೋಜಿತ ತಪಾಸಣಾ ಕೇಂದ್ರ), ಲೋವರ್ ಅರುಣ್ ಜಲವಿದ್ಯುತ್ ಯೋಜನೆ ಮತ್ತು ನೇಪಾಳ ಪೊಲೀಸ್ ಅಕಾಡೆಮಿ ಸೇರಿವೆ. ವಿದ್ಯುತ್ ಪ್ರಸರಣ ಮಾರ್ಗಗಳು, ನಿರ್ಮಾಣ ಕಾರ್ಯಗಳು ಮತ್ತು ವಿಪತ್ತಿನ ನಂತರದ ಪುನರ್ನಿರ್ಮಾಣದಂತಹ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಕೂಡ ಉಭಯ ದೇಶಗಳು ಚರ್ಚಿಸುವ ಸಾಧ್ಯತೆಯಿದೆ (ಏಜೆನ್ಸೀಸ್).