ಇದರಲ್ಲಿರುವ ರಾಜಕೀಯ ಆಯಾಮವೇನು? ಮೋದಿ ಬಿಜೆಪಿಯವರು, ರೇವಂತ್ ರೆಡ್ಡಿ ಕಾಂಗ್ರೆಸ್‌ನವರು. ಮೋದಿ ಗುಜರಾತ್‌ನವರು, ರೇವಂತ್ ತೆಲಂಗಾಣದವರು. ಅನುಮತಿ ನಿರಾಕರಿಸುವಾಗ ಅವರು ಪ್ರಸ್ತಾಪಿಸಿದ ರಾಜಕೀಯ ಆಯಾಮ ಇದೇನಾ? ಇದು ಸಂಪೂರ್ಣವಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಗುಜರಾತ್ ತೆಲಂಗಾಣದ ವಿರುದ್ಧ ಪಿತೂರಿ ನಡೆಸುತ್ತಿದೆ, ನಾನು ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.