ಸಿಎಂ ವಿಜಯ್​ ನಕಲಿ ಪೆರಿಯಾರಿಸ್ಟ್, ಜ್ಯೋತಿಷ್ಯ ಆಧಾರದ ಮೇಲೆ ಸರ್ಕಾರ ನಡೆಯುತ್ತಿದೆ: ಉದಯನಿಧಿ ಸ್ಟಾಲಿನ್..TVK VS DMK

ಸಿಎಂ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್
ಸಿಎಂ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್
Published on: 
  • ಸತ್ಯಮಂಗಲಂ ಪೊಲೀಸ್ ಠಾಣೆಯಲ್ಲಿ ಯಾಗ ಮಾಡಿದ ವಿರುದ್ಧ ಉದಯನಿಧಿ ಸ್ಟಾಲಿನ್ ಕಿಡಿ.

  • ಸಿಎಂ ವಿಜಯ್ ಸರ್ಕಾರ ಯಾಗ, ಜ್ಯೋತಿಷ್ಯದ ಆಧಾರದ ಮೇಲೆ ನಡೆಯುತ್ತಿದೆ ಎಂದು ಗುಡುಗು.

  • ಸಿಎಂ ಸಿ. ಜೋಸೆಫ್ ವಿಜಯ್ ಪೆರಿಯಾರ್​ ತತ್ವವನ್ನು ತಮಗೆ ಬೇಕಾದಂತೆ ಅಳವಿಡಿಸಿಕೊಳ್ಳುತ್ತಿದ್ದಾರೆ.

ಚೆನ್ನೈ: ಸಿಎಂ ಸಿ. ಜೋಸೆಫ್​ ವಿಜಯ್​ ಒಬ್ಬರು ನಕಲಿ ಪೆರಿಯಾರಿಸ್ಟ್. ಪೆರಿಯಾರ್​ ಅವರ ತತ್ವವನ್ನು ಬೇಕಾದಂತೆ ಆಯ್ದುಕೊಂಡು ಅನುಕರಣೆ ಮಾಡುತ್ತಿದ್ದಾರೆ. ಅವರ ಆಡಳಿತವು ಜ್ಯೋತಿಷ್ಯ, ಜಾತಕ ಹಾಗೂ ಧಾರ್ಮಿಕ ಆಚರಣೆಗಳ ಮೇಲೆ ಅವಲಂಬಿತವಾಗಿದೆ ಎಂದು ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದರು.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಸೆಂಜಿ ಸಮೀಪದ ನಡುಪಟ್ಟು ಗ್ರಾಮದಲ್ಲಿ ಏಳು ವರ್ಷದ ಬಾಲಕಿ ಹೇಮಲತಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಪ್ರಕರಣದಡಿ ತನಿಖೆ ನಡೆಯುತ್ತಿರುವಾಗಲೇ ಸತ್ಯಮಂಗಲಂ ಪೊಲೀಸ್ ಠಾಣೆಯೊಳಗೆ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಗಣಪತಿ ಯಾಗ ನಡೆಸಿದ ವಿರುದ್ಧ ಅವರು ಉದಯನಿಧಿ ಸ್ಟಾಲಿನ್ ಕಿಡಿಕಾರಿದ್ದಾರೆ.

ಜ್ಯೋತಿಷ್ಯ ಆಧಾರದ ಮೇಲೆ ಸರ್ಕಾರ

ಅಪರಾಧಗಳನ್ನು ಬೇಧಿಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕಾದ ಪೊಲೀಸ್ ಇಲಾಖೆ ಮಾಡುತ್ತಿರುವುದು ಏನು?. ಪೊಲೀಸ್ ಠಾಣೆಯೊಳಗೆ ಯಾಗಗಳನ್ನು ಮಾಡುತ್ತಿದ್ದಾರೆ. ಇವರೆಲ್ಲ ತಮ್ಮನ್ನು ಇವರು 'ತತ್ವಬದ್ಧ ಪೆರಿಯಾರಿಸ್ಟ್' ಎಂದು ಕರೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತಮ ಆಡಳಿತ ರೂಪಿಸುವ ಬದಲಿಗೆ, ಜ್ಯೋತಿಷ್ಯ ಮತ್ತು ಧಾರ್ಮಿಕ ವಿಧಿವಿಧಾನಗಳ ಆಧಾರದ ಮೇಲೆ ನಡೆಸಲಾಗುತ್ತಿದೆ. ನಿಜವಾಗಿಯೂ ಹೇಳಬೇಕೆಂದರೆ, ಇಂದು ಈ ಆಡಳಿತ ಕೇವಲ ಜ್ಯೋತಿಷ್ಯ, ಜಾತಕ ಮತ್ತು ಯಾಗಗಳ ಮೇಲೆ ನಡೆಯುತ್ತಿದೆ ಎಂದು ಹೇಳಿದರು.

ಬೇಕಾದ ತತ್ವ ಮಾತ್ರ ಅಳವಡಿಸಿಕೊಂಡಿದೆ

ಪೆರಿಯಾರ್ ಸಿದ್ಧಾಂತಕ್ಕೆ ವಿಜಯ್ ಅವರ ಬದ್ಧತೆಯನ್ನು ಪ್ರಶ್ನಿಸಿದ ಉದಯನಿಧಿ, ಸಿಎಂ ವಿಜಯ್​ ಅವರು ಪೆರಿಯಾರ್​ರ ಕೆಲವು ತತ್ವವನ್ನು ಮಾತ್ರ ಅಳವಡಿಸಿಕೊಂಡು ಇನ್ನು ಉಳಿದವುಗಳನ್ನು ನಿರ್ಲಿಕ್ಷ್ಯಿಸುತ್ತಿದ್ದಾರೆ. ಪೆರಿಯಾರ್ ಅವರ ಫೋಟೋ ಬಳಸಿಕೊಂಡು ತಾನು ಪೆರಿಯಾರ್ ಸಿದ್ಧಾಂತದ ಉತ್ತರಾಧಿಕಾರಿ ಎಂದು ನಾಮಕಾವಸ್ಥೆಗೆ ಹೇಳಿಕೊಳ್ಳುತ್ತಿದ್ದಾರೆ. ಕೆಲವು ತತ್ವಗಳನ್ನು ಆಯ್ಕೆಗೆ ಬಿಟ್ಟು, ತಾವು ಕೆಲವೇ ತತ್ವಗಳನ್ನು ಒಪ್ಪಿಕೊಳ್ಳುವುದಾಗಿ ಹೇಳುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವರಿಗೆ ಏನೂ ತಿಳಿಸದಿರುವುದಿಲ್ಲ ಎಂದು ಲೇವಡಿ ಮಾಡಿದರು.

'ನಾವೆಲ್ಲರೂ ನಕಲಿ ಪೂಜಾರಿಗಳನ್ನು ನೋಡಿದ್ದೇವೆ, ಆದರೆ ನೀವೆಂದಾದರೂ ನಕಲಿ ಪೆರಿಯಾರಿಸ್ಟ್ ಅನ್ನು ನೋಡಿದ್ದೀರಾ? ನಕಲಿ ಸಿಎಂ ಅನ್ನು ನೋಡಿದ್ದೀರಾ?' ಎಂದು ಟೀಕಾಪ್ರಹಾರ ನಡೆಸಿದ್ದಾರೆ.

Also Read
ಪೆರಿಯಾರ್ ನಾಲೆಡ್ಜ್​ ವರ್ಲ್ಡ್ ಗ್ರಂಥಾಲಯಕ್ಕೆ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಡಿಎಂಕೆ ವಿರುದ್ಧ ಸಿಎಂ ವಿಜಯ್ ವಾಗ್ದಾಳಿ | CM Vijay
ಸಿಎಂ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್

ಟಿವಿಕೆ ಟಾಂಗ್ ಕೊಟ್ಟಿದ್ದು ಹೀಗೆ

ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಟಿವಿಕೆ, ಯಾರಿಗೂ ತಿಳಿಯದಂತೆ ತಮ್ಮ ಮನೆಗಳ ಒಳಗೆ ಪೂಜೆಗಳನ್ನು ಮಾಡಿದವರು ಯಾರು? ಆದರೆ ಹೊರಗಡೆ ನಾಸ್ತಿಕರು ಮತ್ತು ವಿಚಾರವಾದಿಗಳಂತೆ ನಟಿಸಿದವರು ಯಾರು? ಅಂದು ರಾಜ್ಯ ವಿಧಾನಸಭೆಯಲ್ಲೇ ಪೆರಿಯಾರ್ ಅವರನ್ನು ಅಪಹಾಸ್ಯ ಮತ್ತು ಲೇವಡಿ ಮಾಡಿದವರು ಯಾರು?" ಎಂದು ಟಿವಿಕೆ ತಿರುಗೇಟು ನೀಡಿದೆ.

ವಿಜಯ್ ಅವರ ರಾಜಕೀಯ ನಿಲುವು ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಅವರ ಸರ್ಕಾರ ನಿಭಾಯಿಸುತ್ತಿರುವ ರೀತಿಯ ಕುರಿತು ಡಿಎಂಕೆ ಮತ್ತು ಟಿವಿಕೆ ನಡುವೆ ನಡೆಯುತ್ತಿರುವ ವ್ಯಾಪಕ ರಾಜಕೀಯ ಸಂಘರ್ಷದ ನಡುವೆಯೇ ಈ ವಾಕ್ಸಮರ ನಡೆದಿದೆ.