ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು; ಯಾರಾಗ್ತಾರೆ ದೇವನಾಡಿನ ಅಧಿಪತಿ?Kerala Election Results

ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ (Kerala Election Results) 2026
ಕೇರಳ ವಿಧಾನಸಭಾ ಚುನಾವಣೆ ಫಲಿತಾಂಶ (Kerala Election Results) 2026
Published on
ಕೇರಳ: ಸೋಮವಾರ (ಮೇ.4) ಭಾರತದ ಪಂಚರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೆಲ ರಾಜ್ಯಗಳಲ್ಲಿ ಬಹುಮತದತ್ತ ಪಕ್ಷಗಳು ಹೆಜ್ಜೆ ಇಡುತ್ತಿದ್ದು, ಈಗ ಸಿಎಂ ಪದವಿಗೆ ಕಾದಾಟ ಪ್ರಾರಂಭವಾಗಲಿದೆ.

ಕೇರಳದಲ್ಲಿ ಯುಡಿಎಫ್​ ಸರ್ಕಾರ ಖಚಿತ!

140 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇರಳ (Kerala Election Results) ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​-ಯುಡಿಎಫ್​ ಮೈತ್ರಿಯು 100 ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ನೇತೃತ್ವದ ಎಲ್​ಡಿಎಫ್​ ಕೇವಲ 35 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದು, 10 ವರ್ಷದ ಆಡಳಿತಕ್ಕೆ ಮತದಾರ ಬ್ರೇಕ್​ ಹಾಕಿದ್ದಾರೆ.

ಯಾರಾಗ್ತಾರೆ ಸಿಎಂ?

ಇತ್ತ ಕಾಂಗ್ರೆಸ್​- ಯುಡಿಎಫ್ ಮೈತ್ರಿಯು ಸರ್ಕಾರ ರಚಿಸುವುದು ಬಹುತೇಕ ಖಚಿವಾಗಿದ್ದು, ಈಗ ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಕಳೆದು ಹತ್ತು ವರ್ಷದಿಂದ ಪಿಣರಾಯಿ ಆಡಳಿತವನ್ನು ನೋಡಿ-ನೋಡಿ ಸಾಕಾಗಿರುವ ಪಕ್ಷದ ಹಿರಿಯ ನಾಯಕರು ಈ ಭಾರಿ ಸಿಎಂ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ರೇಸ್‌ನಲ್ಲಿರುವವರು ಇವರೇ ನೋಡಿ!

ರಮೇಶ್ ಚೆನ್ನಿತ್ತಲ

ಹಿರಿಯ ನಾಯಕ ಪಿ.ಜೆ. ಕುರಿಯನ್ ಅವರು ರಮೇಶ್ ಚೆನ್ನಿತ್ತಲ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದರು. ಚೆನ್ನಿತ್ತಲ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದ್ದು ಕುತೂಹಲ ಮೂಡಿಸಿದೆ. ಆದಾಗ್ಯೂ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಚೆನ್ನಿತ್ತಲ ಸ್ಪಷ್ಟಪಡಿಸಿದ್ದಾರೆ.

ವಿ.ಡಿ. ಸತೀಶನ್

ವಿರೋಧ ಪಕ್ಷದ ನಾಯಕರಾಗಿ ಸತೀಶನ್ ಕಾರ್ಯವೈಖರಿಯೇ ಯುಡಿಎಫ್ ಗೆಲುವಿಗೆ ಕಾರಣವಾಗಿದೆ ಎನ್ನುವುದು ಪಕ್ಷದ ಕಾರ್ಯಕರ್ತರ ಮಾತಾಗಿದೆ. ಎರ್ನಾಕುಲಂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಸತೀಶನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಅಭಿಯಾನವು ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಕೆ.ಸಿ. ವೇಣುಗೋಪಾಲ್

ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ. ಸುಧಾಕರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಸಿರುವುದು ಕಣವನ್ನು ಮತ್ತಷ್ಟು ರಂಗೇರಿಸಿದೆ. ವೇಣುಗೋಪಾಲ್ ನಾಯಕತ್ವವನ್ನು ಉಮ್ಮನ್ ಚಾಂಡಿ ಮತ್ತು ಎ.ಕೆ. ಆಂಟನಿಯಂತಹ ದೈತ್ಯ ನಾಯಕರಿಗೆ ಹೋಲಿಸಲಾಗುತ್ತಿದೆ. ಆದರೆ ಈ ಭಾರಿ ವಿಧಾನಸಭಾ ಚುನಾವಣೆಗೆ ವೇಣುಗೋಪಾಲ್ ಸ್ಪರ್ಧಿಸಿರದ ಕಾರಣ ಇವರ ಆಯ್ಕೆ ಬಹುತೇಕ ಕಠಿಣವೆಂದು ಹೇಳಲಾಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net