ತಿರುಪರಂಕುಂದ್ರಂ ವಿವಾದ: ಇಂದು ತಮಿಳುನಾಡು ಸರ್ಕಾರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್| Supreme Court

ತಿರುಪರಂಕುಂದ್ರಂ ಬೆಟ್ಟದಲ್ಲಿರುವ ವಿವಾದಿತ ದೀಪತೂನ್​ನಲ್ಲಿ ಒಂದು ಬಾರಿ ಸಾಂಪ್ರದಾಯಿಕ ಕಾರ್ತಿಕ ದೀಪ ಹಚ್ಚಲು ನೀಡಿದ್ದ ಅನುಮತಿಯನ್ನು ಜಾರಿಗೊಳಿಸುವಲ್ಲಿ ವಿಫಲವಾದ ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಇಂದು(ನ. 27) ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.
ತಿರುಪರಂಕುಂದ್ರಂ ವಿವಾದ: ಇಂದು ತಮಿಳುನಾಡು ಸರ್ಕಾರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್| Supreme Court
Published on: 

ನವದೆಹಲಿ: ತಿರುಪರಂಕುಂದ್ರಂ ಬೆಟ್ಟದಲ್ಲಿರುವ ವಿವಾದಿತ ದೀಪತೂನ್​ನಲ್ಲಿ ಒಂದು ಬಾರಿ ಸಾಂಪ್ರದಾಯಿಕ ಕಾರ್ತಿಕ ದೀಪ ಹಚ್ಚಲು ನೀಡಿದ್ದ ಅನುಮತಿಯನ್ನು ಜಾರಿಗೊಳಿಸುವಲ್ಲಿ ವಿಫಲವಾದ ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಇಂದು(ನ. 27) ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.

ಗುರುವಾರ(ನ. 26) ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ನ್ಯಾಯಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಈ ವಿಷಯವನ್ನು ಪ್ರಸ್ತಾಪಿಸಿದಾಗ, ನ್ಯಾಯಾಲಯವು ಶುಕ್ರವಾರದಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ನ. 20ರ ಆದೇಶವನ್ನು ತಮಿಳುನಾಡು ಸರ್ಕಾರ ಪಾಲಿಸಿಲ್ಲ. ಮತ್ತು ಇದರ ಪರಿಣಾಮವಾಗಿ ನ್ಯಾಯಾಲಯದ ನಿಂದನೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಪ್ರಕರಣದ ಸೂಕ್ಷ್ಮತೆಯನ್ನು ಉಲ್ಲೇಖಿಸಿ, ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಕೋರಿದಾಗ, ನ್ಯಾಯಪೀಠವು, ಎಲ್ಲಾ ವಿಷಯಗಳನ್ನು ನಾಳೆ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಹೇಳಿದೆ. ಮತ್ತು ಇಂದು ವಿಚಾರೆಣೆ ನಡೆಯುವ ಸಾಧ್ಯತೆಯಿದೆ.

Also Read
ನ. 30ರಿಂದ ವಿಶೇಷ ಸಂಸತ್ ಅಧಿವೇಶ: ಮತ್ತೆ ಡಿಲಿಮಿಟೇಷನ್, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ | Special Parliament session
ತಿರುಪರಂಕುಂದ್ರಂ ವಿವಾದ: ಇಂದು ತಮಿಳುನಾಡು ಸರ್ಕಾರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್| Supreme Court

ಇಂದಿನ ವಿಚಾರಣೆಯೂ ನಿರ್ಣಯಕವಾಗಲಿದ್ದು, ನ್ಯಾಯಾಲಯದ ನಿಂದನೆಗೆ ಸಂಬಂಧಿಸಿದ ಈ ಅರ್ಜಿಗಳನ್ನು ಮತ್ತಷ್ಟು ಪರಿಶೀಲಿಸಬೇಕೇ ಅಥವಾ ಆರಂಭಿಕ ಹಂತದಲ್ಲೇ ವಜಾಗೊಳಿಸಬೇಕೇ ಎಂಬುದನ್ನು ನ್ಯಾಯಪೀಠವು ನಿರ್ಧರಿಸಲಿದೆ ಎನ್ನಲಾಗಿದೆ.

ಇನ್ನೂ ಅರ್ಜಿಗಳಲ್ಲಿ ದೀಪ ಬೆಳಗುವ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ. ಸ್ಪಷ್ಟ ಆದೇಶಗಳಿದ್ದರೂ ಸಹ, ಉದ್ದೇಶಪೂರ್ವಕವಾಗಿ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನೂ ಇಂದು ಸರ್ಕಾರ ಮತ್ತು ಅರ್ಜಿದಾರರ ಪರವಾದ ವಾದಗಳನ್ನು ಆಲಿಸಲಿದ್ದು, ಬಳಿಕ ಅರ್ಜಿಗಳನ್ನು ಮುಂದುವರೆಸಬೇಕೆ? ಬೇಡವೇ ಎಂಬ ನಿರ್ಣಯವಾಗಲಿದೆ.

ರಾಜ್ಯ ಸರ್ಕಾರದ ಸಮರ್ಥನೆ

ನ. 20ರಂದು ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆದರೂ, ನ. 24ರಂದು ಕಾರ್ತಿಕ ದೀಪಂ ಪ್ರಯುಕ್ತ ತಾತ್ಕಾಲಿಕವಾಗಿ ವಿವಾದಿತ ದೀಪತೂನ್​ನಲ್ಲಿ ಒಂದು ಬಾರಿ ದೀಪ ಬೆಳಗಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡಿತ್ತು. ಆದರೆ ರಾಜ್ಯ ಸರ್ಕಾರ ಆದೇಶವನ್ನು ಪಾಲಿಸಿರಲಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಸಲ್ಲಿಸಿದ ವರದಿಯಲ್ಲಿ, ದೇವಾಲಯದ ಆಡಳಿತ ಮಂಡಳಿಯು ಅಧಿಕೃತಗೊಳಿಸಿದ ಸೀಮಿತ ತಂಡದ ಮೂಲಕ 'ದೀಪತೂನ್'ನಲ್ಲಿ ದೀಪ ಬೆಳಗಿಸಲು ಸುಪ್ರೀಂಕೋರ್ಟ್ ನವೆಂಬರ್ 20 ರಂದು ನೀಡಿದ್ದ ಆದೇಶವನ್ನು ಜಾರಿಗೊಳಿಸಲು ಜಿಲ್ಲಾಡಳಿತವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿತ್ತು ಎಂದು ತಿಳಿಸಲಾಗಿದೆ.

ಆದರೆ, ದೇವಾಲಯದ ಟ್ರಸ್ಟಿಗಳ ಮಂಡಳಿಯು ಈ ಕಾರ್ಯಕ್ಕಾಗಿ ಪ್ರಸ್ತಾಪಿಸಲಾದ ತಂಡಕ್ಕೆ ಅನುಮತಿ ನೀಡಲಿಲ್ಲ. ಬದಲಾಗಿ, ಸಾಂಪ್ರದಾಯಿಕ ಸ್ಥಳದಲ್ಲೇ 'ಕಾರ್ತಿಕ ಮಹಾದೀಪಂ' ಬೆಳಗಿಸುವ ತಮ್ಮ ವಾಡಿಕೆಯ ಪದ್ಧತಿಯನ್ನೇ ಅನುಸರಿಸಲು ನಿರ್ಧರಿಸಿತು. ಇದರಿಂದಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ (ಏಜೆನ್ಸೀಸ್).