ನ. 30ರಿಂದ ವಿಶೇಷ ಸಂಸತ್ ಅಧಿವೇಶ: ಮತ್ತೆ ಡಿಲಿಮಿಟೇಷನ್, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ | Special Parliament session

ತೀವ್ರ ಕುತೂಹಲ ಕೆರಳಿಸಿದ್ದ ವಿಶೇಷ ಸಂಸತ್​ ಅಧಿವೇಶನ ಕರೆಯುವ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ನ. 30ರಂದು ಲೋಕಸಭೆ ಮತ್ತು ಡಿ. 02ರಂದು ರಾಜ್ಯಸಭೆಯ ವಿಶೇಷ ಸಂಸತ್​ ಅಧಿವೇಶನ ನಡೆಸುವುದಾಗಿ ಗುರುವಾರ(ನ. 26) ರಾತ್ರಿ ಘೋಷಣೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ವಿಶೇಷ ಸಂಸತ್​ ಅಧಿವೇಶನ ಕರೆಯುವ ಊಹಾಪೋಹಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ನ. 30ರಂದು ಲೋಕಸಭೆ ಮತ್ತು ಡಿ. 02ರಂದು ರಾಜ್ಯಸಭೆಯ ವಿಶೇಷ ಸಂಸತ್​ ಅಧಿವೇಶನ ನಡೆಸುವುದಾಗಿ ಗುರುವಾರ(ನ. 26) ರಾತ್ರಿ ಘೋಷಣೆ ಮಾಡಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಹೊರಡಿಸಿದ ಪ್ರತ್ಯೇಕ ನಿರ್ದೇಶನಗಳ ಮೂಲಕ ಈ ಸದನಗಳನ್ನು ಮತ್ತೆ ಕರೆಯಲಾಗಿದೆ. ನ. 30ರಂದು ಲೋಕಸಭೆ, ಡಿ. 02ರಂದು ರಾಜ್ಯಸಭೆ ವಿಶೇಷ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ(ಡಿಲಿಮಿಟೇಷನ್) ಮಸೂದೆಯನ್ನು ಕೇಂದ್ರ ಮತ್ತೆ ಮಂಡಿಸುವ ಸಾಧ್ಯತೆಯಿದೆ.

ಈ ಕುರಿತು ಅಧಿಕೃತವಾಗಿ ಎಕ್ಸ್​ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು, ನ. 30ರಂದು ಲೋಕಸಭೆ, ಡಿ. 02ರಂದು ರಾಜ್ಯಸಭೆ ವಿಶೇಷ ಅಧಿವೇಶನ ಕರೆಯುವಂತೆ ಗೌರವಾನ್ವಿತ ಸಭಾಪತಿಗಳಿಗೆ ಮತ್ತು ರಾಜ್ಯಸಭೆಯ ಅಧ್ಯಕ್ಷರಿಗೆ ಕೋರಲಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಉಭಯ ಸದನಗಳ ಅಧಿವೇಶನವು 2026 ಡಿಸೆಂಬರ್ 3 ರಂದು ಮುಕ್ತಾಯಗೊಳ್ಳಬಹುದು ಎಂದು ತಿಳಿಸಿದ್ದಾರೆ.