ಹಾಲಿ ಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಶಾಸಕನಿಗೆ ಟಿಕೆಟ್ ನಿರಾಕರಣೆ; ಅಕಾಲಿದಳ ಸೇರಿದ ಆಪ್ ಶಾಸಕ ಚರಣ್‌ಜಿತ್ ಸಿಂಗ್ | Charanjit Singh

2022ರ ಚುನಾವಣೆಯಲ್ಲಿ ಪಂಜಾಬ್ ಹಾಲಿ ಸಿಎಂ ಆಗಿದ್ದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನೇ ಸೋಲಿಸಿದ್ದ ಚಮ್ಕೌರ್ ಸಾಹಿಬ್ ಕ್ಷೇತ್ರದ ಶಾಸಕ ಚರಣ್‌ಜಿತ್ ಸಿಂಗ್ ಅವರಿಗೆ ಆಪ್ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ, ಇಂದು(ನ. 29) ಶಿರೋಮಣಿ ಅಕಾಲಿ ದಳಕ್ಕೆ ಸೇರ್ಪಡೆಯಾಗಿದ್ದಾರೆ.
ಹಾಲಿ ಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಶಾಸಕನಿಗೆ ಟಿಕೆಟ್ ನಿರಾಕರಣೆ; ಅಕಾಲಿದಳ ಸೇರಿದ ಆಪ್ ಶಾಸಕ ಚರಣ್‌ಜಿತ್ ಸಿಂಗ್ | Charanjit Singh
Published on: 

ಚಂಡೀಗಢ: 2022ರ ಚುನಾವಣೆಯಲ್ಲಿ ಪಂಜಾಬ್ ಹಾಲಿ ಸಿಎಂ ಆಗಿದ್ದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನೇ ಸೋಲಿಸಿದ್ದ ಚಮ್ಕೌರ್ ಸಾಹಿಬ್ ಕ್ಷೇತ್ರದ ಶಾಸಕ ಚರಣ್‌ಜಿತ್ ಸಿಂಗ್ ಅವರಿಗೆ ಆಪ್ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ, ಇಂದು(ನ. 29) ಶಿರೋಮಣಿ ಅಕಾಲಿ ದಳಕ್ಕೆ ಸೇರ್ಪಡೆಯಾಗಿದ್ದಾರೆ.

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಚರಣ್‌ಜಿತ್ ಸಿಂಗ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಮತ್ತು ಸಿಂಗ್ ಅವರ ಸೇರ್ಪಡೆಯು ಪಕ್ಷವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

Also Read
ಡಿಲಿಮಿಟೇಷನ್ ಮಸೂದೆ ವಿಚಾರ: ಭವಿಷ್ಯದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸಂಘರ್ಷ ಖಚಿತ ಎಂದ ರಾಜ್​ ಠಾಕ್ರೆ | Raj Thackeray
ಹಾಲಿ ಮುಖ್ಯಮಂತ್ರಿಯನ್ನೇ ಸೋಲಿಸಿದ್ದ ಶಾಸಕನಿಗೆ ಟಿಕೆಟ್ ನಿರಾಕರಣೆ; ಅಕಾಲಿದಳ ಸೇರಿದ ಆಪ್ ಶಾಸಕ ಚರಣ್‌ಜಿತ್ ಸಿಂಗ್ | Charanjit Singh

ಇನ್ನೂ ಇತ್ತೀಚೆಗೆ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಿಂಗ್, ನಾನು ಪಕ್ಷಕ್ಕೆ ಯಾವುದೇ ಸಚಿವ ಸ್ಥಾನ ಅಥವಾ ಇನ್ನೇನನ್ನೂ ನೀಡುವಂತೆ ಎಂದಿಗೂ ಕೇಳಿಲ್ಲ. ಆದರೂ ಪಕ್ಷ ಹೀಗೇಕೆ ಮಾಡಿದೆಯೋ ಗೊತ್ತಿಲ್ಲ. ತಾವು ಹೇಗಾದರೂ ಸರಿ ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುವುದಾಗಿ ಹೇಳಿದ್ದರು.

ಸಿಂಗ್ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿಯೂ ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಆದರೆ ಆಗ ಅವರು ಸೋಲು ಅನುಭವಿಸಿದ್ದರು. ಇನ್ನೂ ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ, ಪಂಜಾಬ್ ಬಿಎಸ್‌ಪಿ (BSP) ಮಾಜಿ ಅಧ್ಯಕ್ಷ ಮತ್ತು ಪಂಜಾಬ್ ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ್ಯಕ್ಷರಾದ ಜಸ್ವೀರ್ ಸಿಂಗ್ ಗರ್ಹಿ ಅವರನ್ನು ಆಮ್ ಆದ್ಮಿ ಪಕ್ಷವು ಕಣಕ್ಕಿಳಿಸಿದೆ (ಏಜೆನ್ಸೀಸ್).