ಎಸ್​ಐಆರ್​ ಕುರಿತು ಭಿನ್ನಾಭಿಪ್ರಾಯದ ವರದಿ ಬೆನ್ನಲ್ಲೇ ಸಭೆ ನಡೆಸಿದ ಮೂವರು ಚುನಾವಣಾ ಆಯುಕ್ತರು: ಸ್ಪಷ್ಟೀಕರಣ ಬಿಡುಗಡೆ | Election Commissioners

ಎಸ್​ಐಆರ್ ಕುರಿತು ಭಿನ್ನಾಭಿಪ್ರಾಯ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕಾ ತನಿಖಾ ವರದಿ ಬೆನ್ನಲ್ಲೇ ಇಂದು(ಸೆ. 26) ಸಿಇಸಿ ಜ್ಞಾನೇಶ್ ಕುಮಾರ್ ಸೇರಿ ಮೂವರು ಚುನಾವಣಾ ಆಯುಕ್ತರು ಸಭೆ ನಡೆಸಿ ಚರ್ಚಿಸಿದ್ದಾರೆ. ಬಳಿಕ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ
ಸಿಇಸಿ ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ
Published on: 

ನವದೆಹಲಿ: ಎಸ್​ಐಆರ್ ಕುರಿತು ಭಿನ್ನಾಭಿಪ್ರಾಯ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕಾ ತನಿಖಾ ವರದಿ ಬೆನ್ನಲ್ಲೇ ಇಂದು(ಸೆ. 26) ಸಿಇಸಿ ಜ್ಞಾನೇಶ್ ಕುಮಾರ್ ಸೇರಿ ಮೂವರು ಚುನಾವಣಾ ಆಯುಕ್ತರು ಸಭೆ ನಡೆಸಿ ಚರ್ಚಿಸಿದ್ದಾರೆ. ಬಳಿಕ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನವದೆಹಲಿಯಲ್ಲಿರುವ ಆಯೋಗದ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಇತರೆ ಇಬ್ಬರು ಚುನಾವಣಾ ಆಯುಕ್ತರಾದ ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಸಭೆ ಸೇರಿದ್ದಾರೆ. ಬಳಿಕ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗದೊಳಗೆ ಭಿನ್ನಾಭಿಪ್ರಾಯಗಳಿದ್ದವು ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಎಸ್​ಐರ್​ ಪ್ರಕ್ರಿಯೆ, ಫಾರ್ಮ್​-6 , ಹಕ್ಕುಗಳು ಮತ್ತು ಆಕ್ಷೇಪಣೆಗಳು ಹಾಗೂ ಸಂಪುಟ ಕಾರ್ಯದರ್ಶಿಗೆ ಕಳುಹಿಸಲಾದ ಆಂತರಿಕ ಸಂವಹನಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರಶ್ನೆಗಳ ಬಗ್ಗೆ ವಿವರಣೆ ನೀಡಿದೆ. ಜೊತೆಗೆ ಆಯೋಗವು ಈ ಕುರಿತಾದ ಪ್ರಮುಖ ನಿರ್ಧಾರಗಳನ್ನು ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆಯೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

Also Read
ಗಾಂಧಿ ಪರಿವಾರ v/s ಸಂಘ ಪರಿವಾರ; ಭಾರತದ ಭವಿಷ್ಯಕ್ಕಾಗಿ ಈ ಎರಡು ಪರಿವಾರಗಳ ನಡುವೆ ಹೋರಾಟ: ಸಿಎಂ ರೇವಂತ್ ರೆಡ್ಡಿ | CM Revanth Reddy
ಸಿಇಸಿ ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ

ಆಯೋಗದೊಳಗಿನ ಜವಾಬ್ದಾರಿಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂಪುಟ ಕಾರ್ಯದರ್ಶಿಗೆ ಇಬ್ಬರು ಆಯುಕ್ತರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆಯೋಗ, ಸಂಪುಟ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರವು ಆಯೋಗ ಅಥವಾ ಅದರ ಐಟಿ ವಿಭಾಗದ ಯಾವುದೇ ನೀತಿ ವಿಷಯಕ್ಕೆ ಸಂಬಂಧಿಸಿಲ್ಲ, ಬದಲಿಗೆ ಇಸಿಐಗೆ ನಿಯೋಜನೆಯ ಮೇಲೆ ಬಂದ ಅಧಿಕಾರಿಯ ಕೆಲಸಕ್ಕೆ ಸಂಬಂಧಿಸಿದೆ ಎಂದು ತಿಳಿಸಿದೆ.

ಇಬ್ಬರು ಚುನಾವಣಾ ಆಯುಕ್ತರ ಆದೇಶಗಳ ನಂತರ ಸಂಬಂಧಪಟ್ಟ ಅಧಿಕಾರಿ ಹೊರಡಿಸಿದ ಕೆಲಸ ಮರುಹಂಚಿಕೆ ಆದೇಶಗಳನ್ನು ವಾಸ್ತವವಾಗಿ ಜಾರಿಗೆ ತರಲಾಗಿಲ್ಲ. ಮತ್ತು ಉಪ ಚುನಾವಣಾ ಆಯುಕ್ತರಿಂದ ಐಟಿ ವಿಭಾಗದ ಮೇಲ್ವಿಚಾರಣೆಯನ್ನು ವಾಸ್ತವವಾಗಿ ಎಂದಿಗೂ ಹಿಂತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದೆ.

ಎಸ್​ಐಆರ್ ವಿಷಯದಲ್ಲಿ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯವಿತ್ತೇ ಎಂಬ ಬಗ್ಗೆಯೂ ವಿವರಿಸಿರುವ ಆಯೋಗವು, ಬಿಹಾರದಿಂದ ಪ್ರಾರಂಭವಾಗಿ ಪಶ್ಚಿಮ ಬಂಗಾಳ ಹಾಗೂ ಇತರ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ, 2025 ಜೂನ್ 24ರಂದು ಹೊರಡಿಸಲಾದ ಎಸ್​ಐಆರ್ ಆದೇಶವನ್ನು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ. ಮೇ 27ರಂದು ಸುಪ್ರೀಂಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿದೆ ಎಂದು ತಿಳಿಸಿದೆ.

Also Read
ವೀರಮಣಿ ಪೋಕ್ಸೊ ಪ್ರಕರಣ; ಸ್ಕ್ರಿಪ್ಟ್ ಚೇಂಜ್​ ಮಾಡಿರಲಿಲ್ಲವೇ? ಸ್ವಲ್ಪ ದಿನ ಪತ್ರಿಕೆಗಳನ್ನು ಓದಿ: ಸಿಎಂ ವಿಜಯ್​ಗೆ ಎಂ.ಕೆ.ಸ್ಟಾಲಿನ್ ಟಾಂಗ್ |M K Stalin
ಸಿಇಸಿ ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ

ಇನ್ನೂ ಎಸ್​ಐಆರ್ ಕುರಿತು ನೋಟಿಸ್ ಪಡೆದ ಮತದಾರರು ಇನ್ನು ಮುಂದೆ ಬೂತ್ ಮಟ್ಟದ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮತದಾರರಿಗೆ ಹೆಚ್ಚು ಅನುಕೂಲಕರವಾಗುವಂತೆ ಪ್ರಕ್ರಿಯೆಯನ್ನು ಸರಳೀಕರಿಸಲಾಗುತ್ತಿದೆ ಎಂದು ಹೇಳಿದೆ.

ನೋಟಿಸ್ ಪಡೆದ ಮತದಾರರ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿ ಅಗತ್ಯ ವಿವರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಇದು ಮತದಾರರು ಕಚೇರಿಗಳು ಅಥವಾ ಬಿಎಲ್‌ಒಗಳ ಬಳಿ ಹೋಗದೆ ಮನೆಯಲ್ಲಿಯೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವನ್ನು ಒದಗಿಸುತ್ತದೆ. ಇದಲ್ಲದೆ, ಮತದಾರರು ಸಲ್ಲಿಸಿದ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳು ಸ್ವತಃ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ ಎಂದು ತಿಳಿಸಿದೆ.

ದಾಖಲೆಗಳ ಸಲ್ಲಿಕೆ ಮತ್ತು ಅಪ್‌ಲೋಡ್ ವಿಷಯದಲ್ಲಿ ಮತದಾರರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಇರುವುದಿಲ್ಲ. ಬಿಎಲ್​ಓಗಳು ಮನೆ ಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸುತ್ತಾರೆ ಮತ್ತು ಅರ್ಹತಾ ದಾಖಲೆಗಳನ್ನು ಪರಿಶೀಲಿಸುತ್ತಾರೆ. ನೋಟಿಸ್ ಸ್ವೀಕರಿಸಿದ ಮತದಾರರು ತಮ್ಮ ಬಳಿ ಲಭ್ಯವಿರುವ ಸಂಬಂಧಿತ ದಾಖಲೆಗಳನ್ನು ಬಿಎಲ್​ಓಗಳಿಗೆ ಮಾತ್ರ ನೀಡಬೇಕು ಎಂದು ಸ್ಪಷ್ಟಪಡಿಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net