ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡ ಮತ್ತು ಹಣಕಾಸು ನೆರವಿದೆ : ಹರೀಶ್ ಸಾಳ್ವೆ | Harish Salve

ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡ ಮತ್ತು ಹಣಕಾಸು ನೆರವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಈ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಹೇಳಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡ ಮತ್ತು ಹಣಕಾಸು ನೆರವಿದೆ : ಹರೀಶ್ ಸಾಳ್ವೆ | Harish Salve
Published on: 

ನವದೆಹಲಿ: ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡ ಮತ್ತು ಹಣಕಾಸು ನೆರವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಈ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಹೇಳಿದ್ದಾರೆ.

ಖಾಸಗಿ ಸುದ್ದಿ ಏಜೆನ್ಸಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಲಂಡನ್​ವಾಸಿಯಾಗಿರುವ ಸಾಳ್ವೆ, ಕೆಲವು ವಿದೇಶಗಳು, ವಿಶೇಷವಾಗಿ ಅಮೆರಿಕ, ಭಾರತದ ಬಗ್ಗೆ ಅತೃಪ್ತವಾಗಿದೆ. ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿನ ಪ್ರಕ್ಷುಬ್ಧತೆಯ ಹಿಂದೆ ಯಾರ ಕೈವಾಡವಿದೆ ಎಂಬುದರ ಬಗ್ಗೆ ಯಾವುದೇ ಸಂದೇಹವಿದೆಯೇ? ಶೇಖ್ ಹಸೀನಾರನ್ನು ತೆಗೆದು ಹಾಕಿದ್ಯಾರು? ಹೊಸ ಪ್ರಧಾನಿಯನ್ನು ತಂದಿದ್ಯಾರು? ನನ್ನ ಅಭಿಪ್ರಾಯದಲ್ಲಿ, ಈ ಘಟನೆಗಳ ಹಿಂದೆ ಬಾಹ್ಯ ಶಕ್ತಿಗಳಿದ್ದವು ಎಂದು ಹೇಳಿದ್ದಾರೆ.

ಅದೇ ರೀತಿ ಭಾರತದಲ್ಲಿಯೂ ಸಹ, ಯೂಟ್ಯೂಬರ್‌ಗಳು ಸೇರಿದಂತೆ ಕೆಲವು ವ್ಯಕ್ತಿಗಳು ಪ್ರತಿಭಟನೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಕೆಲವರು ಜರ್ಮನಿ ಮತ್ತು ಇತರ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಈ ಚಟುವಟಿಕೆಗಳಿಗೆ ಎಲ್ಲಿಂದ ಹಣಕಾಸು ಸಿಗುತ್ತಿದೆ? ಪ್ರತಿಭಟನೆಗಳನ್ನು ಆಯೋಜಿಸಲು ಹಣದ ಅಗತ್ಯವಿದೆ. ಕಳೆದ ಆರರಿಂದ ಎಂಟು ತಿಂಗಳುಗಳಲ್ಲಿ ಸ್ಪಷ್ಟವಾದ ಒಂದೇ ಮಾದರಿಯಲ್ಲಿ ಈ ಪ್ರತಿಭಟನೆಗಳು ಹೊರಹೊಮ್ಮಿವೆ ಎಂದಿದ್ದಾರೆ.

Also Read
ದೇಶದ ಜನ ನೆನಪಿಟ್ಟುಕೊಳ್ಳುತ್ತಾರೆ: ಇಂಡಿಯಾ ಕೂಟದ ನಾಯಕರ ಭೇಟಿಗೆ ನಿರಾಕರಿಸಿದ ಸಿಜೆಐ ನಿಲುವಿಗೆ ಸಂಜಯ್ ರಾವತ್ ಪ್ರತಿಕ್ರಿಯೆ | Sanjay Raut
ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡ ಮತ್ತು ಹಣಕಾಸು ನೆರವಿದೆ : ಹರೀಶ್ ಸಾಳ್ವೆ | Harish Salve

ಮೋದಿ ಸರ್ಕಾರವು ಹಾರ್ಮುಜ್ ಬಿಕ್ಕಟ್ಟನ್ನು ಪರಿಹರಿಸುವುದು, ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಭಾರತದ ಉಪಗ್ರಹ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದ್ದರೆ, ಈ ಗುಂಪುಗಳು ಸರ್ಕಾರವನ್ನು ಮುಂದುವರಿಯದಂತೆ ತಡೆಯಲು ಪ್ರಯತ್ನಿಸುತ್ತಿವೆ. ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಮತ್ತು ದೇಶದ ಪ್ರಗತಿಯನ್ನು ತಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಗಳು ಜನರ ನಿಜವಾದ ಭಾವನೆಯನ್ನು ಪ್ರತಿಬಿಂಬಿಸುತ್ತವೆಯೇ ಎಂಬ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ ಅವರು, ಇದನ್ನು ಸಾಮೂಹಿಕ ಚಳುವಳಿ ಎಂದು ನಾನು ಪರಿಗಣಿಸುವುದಿಲ್ಲ. ವಿದೇಶಿ ನಿಧಿಯ ಆರೋಪಗಳನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net