ಥೂ ಇದೆಂಥಾ ಟ್ರೆಂಡ್​? ನಿಮಗ್ಯಾರಿಗೂ ಇವರು ಕಾಣೋದೇ ಇಲ್ವಾ? ತ್ರಿಷಾ ಹೆಸರಿನ ಸಂಘಟನೆ ವಿರುದ್ಧ ಅಣ್ಣಾಮಲೈ ಆಕ್ರೋಶ! Actress Trisha

ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೋಲಿಸಿ ತ್ರಿಷಾ ಅವರನ್ನು 'ಯುವ ಕ್ರಾಂತಿಕಾರಿ ನಾಯಕಿ' ಎಂದು ಬಿಂಬಿಸುತ್ತಿರುವ ಈ ನಡೆಗೆ ಮಾಜಿ ಐಪಿಎಸ್​ ಅಧಿಕಾರಿ ಹಾಗೂ ರಾಜಕಾರಣಿ ಕೆ. ಅಣ್ಣಾಮಲೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ನಿಜವಾದ ಕೊಡುಗೆ ನೀಡುವವರನ್ನು ಬಿಟ್ಟು ಚಿತ್ರನಟರನ್ನು ನಾಯಕರನ್ನಾಗಿ ಆರಾಧಿಸುವ ಸಂಸ್ಕೃತಿ ಸರಿಯಲ್ಲ ಎಂದು ಅಣ್ಣಾಮಲೈ ಅವರು ಕಿಡಿಕಾರಿದ್ದಾರೆ.
Actress Trisha
ಥೂ ಇದೆಂಥಾ ಟ್ರೆಂಡ್​? ನಿಮಗ್ಯಾರಿಗೂ ಇವರು ಕಾಣೋದೇ ಇಲ್ವಾ? ತ್ರಿಷಾ ಹೆಸರಿನ ಸಂಘಟನೆ ವಿರುದ್ಧ ಅಣ್ಣಾಮಲೈ ಆಕ್ರೋಶ!
Published on: 

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರ ಪ್ರಭಾವ ಮತ್ತು ಅಭಿಮಾನಿ ಸಂಘಗಳ ರಾಜಕೀಯ ಪ್ರವೇಶ ಹೊಸದೇನಲ್ಲ. ಈಗ ಸಿಎಂ ಆಗಿರುವ ವಿಜಯ್​ ಕೂಡ ಅಭಿಮಾನಿ ಸಂಘದ ಮೂಲಕವೇ ರಾಜಕೀಯಕ್ಕೆ ಇಳಿದರು. ಇದೀಗ ಖ್ಯಾತ ನಟಿ ತ್ರಿಷಾ ( Actress Trisha ) ಅವರ ಸರದಿ. ಅವರ ಹೆಸರಿನಲ್ಲಿ 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಎಂಬ ಹೊಸ ಸಂಘಟನೆಯೊಂದು ತಲೆಎತ್ತಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೋಲಿಸಿ ತ್ರಿಷಾ ಅವರನ್ನು 'ಯುವ ಕ್ರಾಂತಿಕಾರಿ ನಾಯಕಿ' ಎಂದು ಬಿಂಬಿಸುತ್ತಿರುವ ಈ ನಡೆಗೆ ಮಾಜಿ ಐಪಿಎಸ್​ ಅಧಿಕಾರಿ ಹಾಗೂ ರಾಜಕಾರಣಿ ಕೆ. ಅಣ್ಣಾಮಲೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ನಿಜವಾದ ಕೊಡುಗೆ ನೀಡುವವರನ್ನು ಬಿಟ್ಟು ಚಿತ್ರನಟರನ್ನು ನಾಯಕರನ್ನಾಗಿ ಆರಾಧಿಸುವ ಸಂಸ್ಕೃತಿ ಸರಿಯಲ್ಲ ಎಂದು ಅಣ್ಣಾಮಲೈ ಅವರು ಕಿಡಿಕಾರಿದ್ದಾರೆ.

Also Read
ಅಪ್ಪನನ್ನು ಕೊಲ್ಲಲೆಂದೇ ಭದ್ರತೆ ಹಿಂಪಡೆಯಲಾಗಿತ್ತು: ರಾಜೀವ್ ಗಾಂಧಿ ಹತ್ಯೆಯ ಕುರಿತು ರಾಹುಲ್ ಗಾಂಧಿ ಗಂಭೀರ ಆರೋಪ! Rahul Gandhi
Actress Trisha

ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ. ಅಣ್ಣಾಮಲೈ, ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಟಿ ತ್ರಿಷಾ ಅವರ ಹೆಸರಿನಲ್ಲಿ ಹೊಸ ಸಂಘಟನೆಯೊಂದನ್ನು ಹುಟ್ಟುಹಾಕಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ತ್ರಿಷಾ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸೇರಿ 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' (ಯುವ ಕ್ರಾಂತಿಕಾರಿ ನಾಯಕಿ ತ್ರಿಷಾ ವೇದಿಕೆ) ಎಂಬ ಹೆಸರಿನಲ್ಲಿ ಈ ಸಂಘಟನೆಯನ್ನು ಆರಂಭಿಸಿದ್ದಾರೆ. ಈ ಬೆಳವಣಿಗೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಣ್ಣಾಮಲೈ, ಸಿನಿಮಾ ತಾರೆಯರನ್ನು ರಾಜಕೀಯ ನಾಯಕರನ್ನಾಗಿ ಮೆರೆಸುವ ಮತ್ತು ಆರಾಧಿಸುವ ಪ್ರವೃತ್ತಿ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಅತ್ಯಂತ ವಿದ್ಯಾವಂತರು ಮತ್ತು ಬುದ್ಧಿವಂತರಿದ್ದಾರೆ ಎಂದು ಹೇಳಿದ ಅಣ್ಣಾಮಲೈ, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಸಮಾಜದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಸಮಾಜಕ್ಕೆ ನೇರವಾಗಿ ಕೊಡುಗೆ ನೀಡುವ ಇಂತಹ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಬದಲು, ಸಿನಿಮಾ ನಟ-ನಟಿಯರನ್ನು ನಾಯಕರನ್ನಾಗಿ ಬಿಂಬಿಸುವುದು ಸರಿಯಾದ ಕ್ರಮವಲ್ಲ ಎಂದು ಅಣ್ಣಾಮಲೈ ಅವರು ಪ್ರತಿಪಾದಿಸಿದರು. ಅಲ್ಲದೆ, ತಮಿಳುನಾಡಿನಲ್ಲಿ ಇಂತಹದೊಂದು ಸಿನಿಮಾ ಆರಾಧನೆಯ ರಾಜಕೀಯ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ಆಡಳಿತಾರೂಢ ಡಿಎಂಕೆ ಪಕ್ಷ ಎಂದು ಅಣ್ಣಾಮಲೈ ನೇರವಾಗಿ ವಾಗ್ದಾಳಿ ನಡೆಸಿದರು.

ಮತ್ತೊಂದೆಡೆ, 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಸಂಘಟನೆಯ ಪದಾಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಂತರ ತಮಿಳುನಾಡಿನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿರುವವರೆಂದರೆ ಅದು ನಟಿ ತ್ರಿಷಾ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಂಘಟನೆಯ ಹೆಸರು ಮತ್ತು ಅಧಿಕೃತ ಲೋಗೋವನ್ನು ಬಿಡುಗಡೆ ಮಾಡಿರುವ ಸಂಘಟನೆಯ ಸಂಯೋಜಕ ರಾಜಗೋಪಾಲ್, ನಮ್ಮ ಸಂಘಟನೆಯ ಉದ್ದೇಶ ಯಾವುದೇ ಅಧಿಕಾರ ಅಥವಾ ಹುದ್ದೆಗಳನ್ನು ಪಡೆಯುವುದಲ್ಲ, ಬದಲಾಗಿ ತಮಿಳು ಜನರ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ಜನಪರ ಸೇವಾ ಕಾರ್ಯಗಳನ್ನು ಮಾಡುವುದು ಎಂದು ಸ್ಪಷ್ಟಪಡಿಸಿದ್ದಾರೆ.

Also Read
ಡಿಸೆಂಬರ್ 2026ರ ರಾಶಿ ಭವಿಷ್ಯ: ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಟೈಂ, ವರ್ಷಾಂತ್ಯದಲ್ಲಿ ಅದೃಷ್ಟದ ಸುರಿಮಳೆ! December 2026 Horoscope
Actress Trisha

ಈ ಎಲ್ಲಾ ಬೆಳವಣಿಗೆಗಳು ಮತ್ತು ರಾಜಕೀಯ ವಾಕ್ಸಮರಗಳ ನಡುವೆಯೂ ನಟಿ ತ್ರಿಷಾ ಅವರು ಈ ಸಂಘಟನೆಯ ಕುರಿತು ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ಮಧುರೈ ಸೇರಿದಂತೆ ಹಲವು ಭಾಗಗಳಲ್ಲಿ ತ್ರಿಷಾ ಅವರು ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಒತ್ತಾಯಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಅಲ್ಲದೆ, 2004ರಲ್ಲಿ ತ್ರಿಷಾ ಅವರು ನೀಡಿದ್ದ ಸಂದರ್ಶನವೊಂದರಲ್ಲಿ ತಮಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಆಸೆಯಿದೆ ಎಂದು ಹೇಳಿಕೊಂಡಿದ್ದ ಹಳೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಇದರ ಜತೆಗೆ, ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ನಟಿ ತ್ರಿಷಾ ಕೂಡ ಸಕ್ರಿಯ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ವದಂತಿಗಳು ತಮಿಳುನಾಡು ರಾಜಕೀಯದಲ್ಲಿ ದಟ್ಟವಾಗಿ ಹಬ್ಬಿವೆ. ವಿಜಯ್ ಅವರ ನೇತೃತ್ವದ ಸರ್ಕಾರದೊಂದಿಗೆ ತ್ರಿಷಾ ಕೈಜೋಡಿಸಿದರೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಜಯಲಲಿತಾ ಮಾದರಿಯ ಆಡಳಿತ ನೋಡಬಹುದು ಎಂದು ತ್ರಿಷಾ ಅಭಿಮಾನಿ ಸಂಘಟನೆಯವರು ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ತ್ರಿಷಾ ಅವರ ಮೌನದ ನಡುವೆಯೂ ಅವರ ಹೆಸರಿನ ಸಂಘಟನೆ ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯದ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ, (ಏಜೆನ್ಸೀಸ್​).