'ಇಡೀ ದೇಶ ಜಂತರ್-ಮಂತರ್ ಆಗಲಿದೆ!': ಸಿಜೆಪಿ ಮುಖಂಡರ ಬಂಧನಕ್ಕೆ ಪ್ರಕಾಶ್ ರಾಜ್ ಆಕ್ರೋಶ! Prakash Raj

ಜಂತರ್-ಮಂತರ್‌ನಲ್ಲಿ ಸಿಜೆಪಿ ನಾಯಕರ ಬಂಧನಕ್ಕೆ ಪ್ರಕಾಶ್ ರಾಜ್ ಆಕ್ರೋಶ. ಧ್ವಜ ಹಿಡಿದು ಪ್ರತಿಭಟಿಸಿದರೆ ಜೈಲಾ? ಇಡೀ ದೇಶವೇ ಜಂತರ್-ಮಂತರ್ ಆಗಲಿದೆ ಎಂದು ಕೇಂದ್ರಕ್ಕೆ ನಟ ಎಚ್ಚರಿಕೆ!
Actor Prakash Raj speaking while condemning the arrest of CJP leaders.
ಸಿಜೆಪಿ ನಾಯಕರ ಬಂಧನ ಖಂಡಿಸಿ ಮಾತನಾಡುತ್ತಿರುವ ನಟ ಪ್ರಕಾಶ್ ರಾಜ್
Published on: 

ನವದೆಹಲಿ: ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇಲ್ಲದಿದ್ದರೂ, ಹೋರಾಟಕ್ಕೆ ಮುಂದಾಗಿದ್ದ, ಕಾಕ್ರೋಚ್​ ಜನತಾ ಪಾರ್ಟಿ ವಕ್ತಾರರಾದ ಸೌರವ್​ ದಾಸ್​ ಮತ್ತು ಆಶುತೋಷ್​ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತಿಹಾರ್​ ಜೈಲಿಗೆ ಕಳುಹಿಸುವುದಾಗಿ ಪೊಲೀಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈಗ, ಈ ಘಟನೆಗೆ ಪ್ರತಿಕ್ರಿಯಿಸಿರುವ, ನಟ ಹಾಗೂ ಸಿಜೆಪಿ ಜತೆ ಗುರುತಿಸಿ ಕೊಂಡಿರುವ ಪ್ರಕಾಶ್​​ ರಾಜ್​, ಸೌರವ್​ ದಾಸ್​ ಮತ್ತು ಆಶುತೋಷ್​ ರಾಂಕಾ ಅವರ ಬಂಧನವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಡೀ ದೇಶ ಜಂತರ್​-ಮಂತರ್​ ಆಗಲಿದೆ!

ಈ ಬಂಧನದ ಬಳಿಕ ವಿಡಿಯೋ ಹರಿಬಿಟ್ಟುರುವ ಪ್ರಕಾಶ್​ ರಾಜ್​, ಫ್ರಾಂಡ್​... ರಾಷ್ಟ್ರ ಧ್ವಜ ಹಿಡಿದು ಪ್ರತಿಭಟನೆ ಮಾಡಿದರೆ 5 ದಿನ ಜೈಲಿಗೆ ಕಳುಹಿಸುತ್ತಾರೆ, ನೀವೆಷ್ಟು ಹತಾಶರಾಗಿದ್ದೀರೆಂದು ತಿಳಿಯುತ್ತಿದೆ. ಇಡೀ ದೇಶ ಜಂತರ್​-ಮಂತರ್​ ಆಗಿ ಪರಿವರ್ತನೆಗೊಳ್ಳಲಿದೆ ಎಂದು ನಟ ಹೇಳಿದ್ದಾರೆ.

ದೆಹಲಿಯ ಸುತ್ತ ಪ್ರತಿಭಟನಾಕಾರರ ನಡುವೆ ಗೂಂಡಾಗಳು ಸೇರಿಕೊಂಡಿದ್ದಾರೆ. ಅವರು ಹೋರಾಟಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮಹಿಳೆಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ, ಪತ್ರಕರ್ತರ ಜೊತೆ ವಾಗ್ವಾದ ಮಾಡುತ್ತಿದ್ದಾರೆ. ಆದರೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಆದರೆ, ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆಗೆ ಮುಂದಾದವರನ್ನು ಜೈಲಿಗೆ ಅಟ್ಟಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟ ಮಾಡಲು ದುಡ್ಡು ಕೊಡಬೇಕು!

ವಿಡಿಯೋನಲ್ಲಿ ಮಾತನಾಡುತ್ತಾ ನಟ, ಜಂತರ್​-ಮಂತರ್​ನಲ್ಲಿ ನೀವು ಹೋರಾಟ ಮಾಡುವಂತಿಲ್ಲ. ರಾಮ-ಲೀಲಾ ಮೈದಾನದಲ್ಲಿ ಬೇಕಾದರೆ ಹೋರಾಟ ಮಾಡಿ ಎನ್ನುತ್ತಾರೆ. ಆ ರಾಮ-ಲೀಲಾ ಮೈದಾನ ವರ್ಷಕ್ಕೆ ಎರಡು ದಿನ ಮಾತ್ರ ಖಾಲಿ ಇರುತ್ತದೆ. ಉಳಿದೆಲ್ಲಾ ದಿನ ಏನಾದರೊಂದು ಕಾರ್ಯಕ್ರಮ ಇರುತ್ತದೆ. ಇನ್ನು ಅಲ್ಲಿ ಪ್ರತಿಭಟನೆ ನಡೆಸಲು 50,000 ಡಿಪಾಸಿಟ್​ ಮತ್ತು 50,000 ಪಾವತಿ ಮಾಡಬೇಕು. ಈ ದೇಶದಲ್ಲಿ ಪ್ರತಿಭಟಿಸಲೂ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ನೀವು ಹೋರಾಟವನ್ನು ನಿಲ್ಲಿಸಬಹುದು, ಪ್ರತಿಭಟನೆ ಸ್ಥಳವನ್ನು ಬದಲಿಸಬಹುದು. ಆದರೆ ಜನರ ಧ್ವನಿಯನ್ನು ಅಡಗಿಸಲು ಸಾಧ್ಯವೇ ಇಲ್ಲ. ದೇಶದ ಪ್ರತಿ ಮೂಲೆಯೂ ಜಂತರ್​-ಮಂತರ್​ ಆಗಿ ಪರಿವರ್ತನೆ ಆಗಲಿದೆ ಎಂದು ಪ್ರಕಾಶ್​ ರಾಜ್​ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Also Read
ಪಾಕ್‌ನಲ್ಲಿ ಮತ್ತೆ 'ಅಜ್ಞಾತ ಬಂದೂಕುಧಾರಿ' ಅಟ್ಟಹಾಸ: ಲಷ್ಕರ್ ಕಮಾಂಡರ್ ಇಮ್ರಾನ್ ಖಾನ್ ಹತ್ಯೆ? ವಿಡಿಯೋ ವೈರಲ್! Unknown Gunmen
Actor Prakash Raj speaking while condemning the arrest of CJP leaders.

ಸಿಜೆಪಿ ನಾಯಕರು ಜೈಲಿಗೆ!

ದೆಹಲಿ ಪೊಲೀಸರೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿಕೊಂಡ ನಂತರವೂ, ಪ್ರತಿಭಟನೆಯಲ್ಲಿ ನಿರತರಾಗಿದ್ದ, ಆಶುತೋಷ್​ ರಾಂಕಾ, ಸೌರವ್​ ದಾಸ್​ ಹಾಗೂ ಅಜಿಂಕ್ಯಾ ಶಿಂಧೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಆಧೇಶಿಸಿದೆ. ಇವರಲ್ಲಿ ಆಶುತೋಷ್​ ರಾಂಕಾ ಮತ್ತು ಸೌರವ್​ ದಾಸ್​ ರನ್ನು ಜೈಲಿಗೆ ಕಳುಹಿಸಲಾಗುತ್ತಿದ್ದು, ಅಜಿಂಕ್ಯಾ ಶಿಂಧೆಗೆ ಬಾಂಡ್​ ನೀಡಿ ಜಾಮೀನು ನೀಡಲಾಗಿದೆ ಎನ್ನಲಾಗಿದೆ. ಜಂತರ್​-ಮಂತರ್​ನಲ್ಲಿ ಪ್ರತಿಭಟನೆಗೆ ಅವಕಶ ಇಲ್ಲದಿದ್ದರೂ, ಈ ಮೂವರು ಅಕ್ರಮವಾಗಿ ಪ್ರವೇಶಿಸಿ, ಪೊಲೀಸರೊಂದಿಗೆ ಅನುಚಿತವಾಗಿ ನಡೆದುಕೊಂಡ ಹಿನ್ನಲೆ ಇವರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net