ಸಂತ್ರಸ್ತೆಯ ದೂರಿನ ಪ್ರಕಾರ, ಶಾರುಖ್ ಖುರೇಷಿ ಕೆಲಸದ ನೆಪದಲ್ಲಿ ಆಕೆಯನ್ನು ತನ್ನ ಕ್ಯಾಬಿನ್‌ಗೆ ಕರೆಸಿಕೊಂಡು, ನಿನಗೆ ಬಾಯ್‌ಫ್ರೆಂಡ್ ಇದ್ದಾನಾ? ನಿನ್ನ ಎಕ್ಸ್ ಬಾಯ್‌ಫ್ರೆಂಡ್ ಯಾರು? ಎಂದು ಖಾಸಗಿ ಬದುಕಿನ ಬಗ್ಗೆ ಅಸಭ್ಯವಾಗಿ ಪ್ರಶ್ನಿಸುತ್ತಿದ್ದನಂತೆ. ಹಾಗೆಯೇ ಕೆಲಸ ಮಾಡುವ ವೇಳೆ ನನ್ನ ಭುಜ, ತೋಳುಗಳನ್ನು ಮುಟ್ಟುತ್ತಿದ್ದ, ಆತ ನೋಡುವ ರೀತಿಯೇ ಅಸಹ್ಯ ಹುಟ್ಟಿಸುವಂತಿತ್ತು ಎಂದು ಮಹಿಳೆ ನೋವು ತೋಡಿಕೊಂಡಿದ್ದಾರೆ.