ಷೇರು ಮಾರುಕಟ್ಟೆಯಲ್ಲಿ ಮತ್ತೇ ಕುಸಿತ: ಗಾಳಿಗೆ ತೂರಿದ ಹೂಡಿಕೆದಾರರ 11 ಲಕ್ಷ ಕೋಟಿ ರೂ.! | Stock Market Crash

ಇದರಿಂದಾಗಿ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಒಂದೇ ದಿನ ಸುಮಾರು 11 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ.
Stock Market Crash
ಷೇರು ಮಾರುಕಟ್ಟೆಯಲ್ಲಿ ಮತ್ತೇ ಕುಸಿತ: ಗಾಳಿಗೆ ತೂರಿದ ಹೂಡಿಕೆದಾರರ 11 ಲಕ್ಷ ಕೋಟಿ ರೂ.! | Stock Market Crash
Published on: 
  • ಷೇರುಪೇಟೆಯಲ್ಲಿ ಮತ್ತೆ ನಷ್ಟ

  • ಒತ್ತಡದಲ್ಲಿ ಬಜಾಜ್ ಟ್ವಿನ್ಸ್, ಅದಾನಿ ಪೋರ್ಟ್ಸ್ ಷೇರುಗಳು

Stock Market Crash: ಅತ್ತ ಆರ್​ಬಿಐ 25 ಬೇಸಿಸ್​ ಪಾಯಿಂಟ್​ನಷ್ಟು ರೆಪೋ ದರ ಏರಿಸಿದ ಬೆನ್ನಲ್ಲೇ ಇತ್ತ ದೇಶಿಯ ಷೇರುಪೇಟೆಗಳು ಭಾರಿ ನಷ್ಟ ಅನುಭವಿಸಿವೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ತೀವ್ರ ಕುಸಿತ ಕಂಡುಬಂದಿದ್ದು, ಪ್ರಮುಖ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶೇ.1.4ಕ್ಕಿಂತ ಹೆಚ್ಚು ಕುಸಿದಿವೆ. ಇದರಿಂದಾಗಿ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಒಂದೇ ದಿನ ಸುಮಾರು 11 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ.

ವ್ಯಾಪಾರದ ಅಂತ್ಯಕ್ಕೆ ಸೆನ್ಸೆಕ್ಸ್ 1,045 ಅಂಕ ಕುಸಿದು 71,593ಕ್ಕೆ ತಲುಪಿದರೆ, ನಿಫ್ಟಿ 371 ಅಂಕ ಕುಸಿದು 22,231 ಕ್ಕೆ ತಲುಪಿದೆ. ಐಟಿಸಿ, ರಿಲಾಯನ್ಸ್ ಮತ್ತು ಅದಾನಿ ಪೋರ್ಟ್ಸ್ ಶೇ. 4 ರವರೆಗೆ ನಷ್ಟ ಅನುಭವಿಸಿದರೆ, ಐಟಿ ಷೇರುಗಳು ಹಾಗೂ ಟೈಟಾನ್ ಸಲ್ಪ ಮಟ್ಟಿನ ಚೇತರಿಕೆ ನೀಡಿವೆ.

ಮಾರುಕಟ್ಟೆ ಕುಸಿತಕ್ಕೆ 5 ಪ್ರಮುಖ ಕಾರಣಗಳು

ಆರ್‌ಬಿಐ ಬಡ್ಡಿದರ ಹೆಚ್ಚಳ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯನ್ನು ಬದಲಾಯಿಸಿ ಬಡ್ಡಿದರ (Repo Rate) ಹೆಚ್ಚಿಸಿರುವುದು ಮಾರುಕಟ್ಟೆಯ ಮೇಲೆ ತೀವ್ರ ಹೊಡೆತ ಬಿದ್ದಿದೆ.

ಯುಎಸ್ ಬಾಂಡ್ ಇಳುವರಿ ಏರಿಕೆ

ಅಮೆರಿಕದ 10 ವರ್ಷಗಳ ಬಾಂಡ್ ಇಳುವರಿ ಶೇ. 5.3 ದಾಟಿದ್ದು, ಹಲವು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದ ವಿದೇಶಿ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಯಿಂದ ಹಣ ಹಿಂಪಡೆಯುತ್ತಿದ್ದಾರೆ.

ಕಚ್ಚಾ ತೈಲ ದರ ಜಿಗಿತ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆಯಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 2ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 102 ಡಾಲರ್​ ದಾಟಿದೆ.

ವಿದೇಶಿ ಹೂಡಿಕೆದಾರರ (FII) ಮಾರಾಟದ ಅಲೆ

ವಿದೇಶಿ ಸಂಸ್ಥಾಗತ ಹೂಡಿಕೆದಾರರು ನಿರಂತರವಾಗಿ ಭಾರತೀಯ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ಒಂದೇ ದಿನದಲ್ಲಿ 6,121 ಕೋಟಿ ರೂ. ಮೌಲ್ಯದ ಷೇರುಗಳನ್ನು ಹೊರತೆಗೆದಿದ್ದಾರೆ.

Also Read
ಇಲ್ಲಿಯವರೆಗೆ ಎಷ್ಟು ಭಾರತೀಯರಿಗೆ ಈ ನೊಬೆಲ್​ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​ | Nobel Prize
Stock Market Crash

ಯುಎಸ್ ಫೆಡ್ ಆತಂಕ

ಅಮೆರಿಕದ ಫೆಡರಲ್ ರಿಸರ್ವ್ ಕೂಡ ಹಣದುಬ್ಬರ ನಿಯಂತ್ರಿಸಲು ಮತ್ತಷ್ಟು ಬಡ್ಡಿದರ ಹೆಚ್ಚಿಸುವ ಸುಳಿವು ನೀಡಿರುವುದು ಸದ್ಯ ಜಾಗತಿಕ ಮಾರುಕಟ್ಟೆಗಳಲ್ಲಿ ಭೀತಿ ಸೃಷ್ಟಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net