ಇಲ್ಲಿಯವರೆಗೆ ಎಷ್ಟು ಭಾರತೀಯರಿಗೆ ಈ ನೊಬೆಲ್​ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​ | Nobel Prize

ಇಲ್ಲಿಯವರೆಗೆ ಘೋಷಿಸಿರುವ 2026ರ ಸಾಲಿನ ವಿಭಾಗಗಳಲ್ಲಿ ಭಾರತೀಯರ ಹೆಸರು ಕೇಳಿಬಂದಿಲ್ಲ. ಮುಂದಿನ ಮೂರು ವಿಭಾಗದಲ್ಲಿ ಸಿಗುವ ನಿರೀಕ್ಷೆಯಿದ್ದರೂ ಇಷ್ಟು ವರ್ಷಗಳಲ್ಲಿ ಎಷ್ಟು ಭಾರತೀಯರಿಗೆ ಈ ಅವಾರ್ಡ್ ಸಿಕ್ಕಿದೆ ಎಂಬ ಪ್ರಶ್ನೆಗೆ ಹೀಗಿದೆ ನೋಡಿ ವಿವರವಾದ ಉತ್ತರ.
 Nobel Prize
ಇಲ್ಲಿಯವರೆಗೆ ಎಷ್ಟು ಭಾರತೀಯರಿಗೆ ಈ ನೊಬೆಲ್​ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​ | Nobel Prize
Published on: 

Nobel Prize: 2026ರ ಸಾಲಿನ ನೊಬೆಲ್​ ಪ್ರಶಸ್ತಿಗಳ ವಿಜೇತರ ಘೋಷಣೆ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿಯವರೆಗೆ ವೈದ್ಯಕೀಯ​, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಕ್ಕೆ ಅವಾರ್ಡ್​ಗಳು ಪ್ರಕಟವಾಗಿವೆ. ಇನ್ನೂ ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಗಳಿಗಾಗಿ ಜಗತ್ತು ಎದುರುನೋಡುತ್ತಿದೆ. ಈ ಮಧ್ಯೆ, ಎಷ್ಟು ಭಾರತೀಯರಿಗೆ ಜಗತ್ತಿನ ಅತ್ಯುನ್ನತ ಗೌರವ ಸಿಕ್ಕಿದೆ? ಯಾವ ಕ್ಷೇತ್ರಗಳ ಸಾಧನೆಗೆ ದೊರೆತಿವೆ ಎಂಬುದರ ಸಂಪೂರ್ಣ ವಿವರ ಹೀಗಿದೆ ಗಮನಿಸಿ.

1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ವಿಶೇಷವಾಗಿ, ಆಯಾ ವಿಭಾಗದಲ್ಲಿ ಸಾಧಕರ ಕೊಡುಗೆಗಳನ್ನು ಗುರುತಿಸಿ, ಗೌರವಿಸಲು ಈ ಪ್ರಶಸ್ತಿಗಳನ್ನು 1901ರಿಂದಲೂ ಕೊಡ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಘೋಷಿಸಿರುವ 2026ರ ಸಾಲಿನ ವಿಭಾಗಗಳಲ್ಲಿ ಭಾರತೀಯರ ಹೆಸರು ಕೇಳಿಬಂದಿಲ್ಲ. ಮುಂದಿನ ಮೂರು ವಿಭಾಗದಲ್ಲಿ ಸಿಗುವ ನಿರೀಕ್ಷೆಯಿದ್ದರೂ ಇಷ್ಟು ವರ್ಷಗಳಲ್ಲಿ ಎಷ್ಟು ಭಾರತೀಯರಿಗೆ ಈ ಅವಾರ್ಡ್ ಸಿಕ್ಕಿದೆ ಎಂಬ ಪ್ರಶ್ನೆಗೆ ಹೀಗಿದೆ ನೋಡಿ ವಿವರವಾದ ಉತ್ತರ.

1. ರವೀಂದ್ರನಾಥ ಟ್ಯಾಗೋರ್ (ಕ್ಷೇತ್ರ: ಸಾಹಿತ್ಯ, 1913)

ಭಾರತೀಯ ಆಧ್ಯಾತ್ಮಿಕತೆ ಮತ್ತು ಭಾವಗೀತೆಗಳನ್ನು ವಿಶ್ವ ಸಾಹಿತ್ಯಕ್ಕೆ ತಂದ ಕವನಗಳ ಸಂಕಲನವಾದ 'ಗೀತಾಂಜಲಿ'ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿತು. ಈ ಮೂಲಕ ಟ್ಯಾಗೋರ್ ಏಷ್ಯಾದ ಮೊದಲ ನೊಬೆಲ್ ಪ್ರಶಸ್ತಿ ವಿಜೇತರಾದರು.

2. ಸಿ.ವಿ. ರಾಮನ್ (ಭೌತಶಾಸ್ತ್ರ, 1930)

ರಾಮನ್ ಎಫೆಕ್ಟ್​ ಕಂಡುಹಿಡಿದಿದ್ದಕ್ಕಾಗಿ, ಬೆಳಕು ಪಾರದರ್ಶಕ ವಸ್ತುವಿನ ಮೂಲಕ ಹಾದುಹೋದಾಗ ತರಂಗಾಂತರವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ವಿವರಿಸಿದ್ದಕ್ಕಾಗಿ ಸರ್​ ಸಿ.ವಿ. ರಾಮನ್​ ಅವರಿಗೆ ಈ ಗೌರವ ಸಂದಿತು.

3. ಹರ್ ಗೋಬಿಂದ್ ಖೋರಾನಾ (ಫಿಸೀಯಾಲಜಿ/ ಔಷಧ, 1968)

ಡಿಎನ್‌ಎಯಲ್ಲಿನ ಆನುವಂಶಿಕ ಮಾಹಿತಿಯು ಪ್ರೋಟೀನ್ ಸಂಶ್ಲೇಷಣೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಡಿಕೋಡಿಂಗ್ ಮಾಡಿದ್ದಕ್ಕಾಗಿ ಈ ಬಹುಮಾನಕ್ಕೆ ಅರ್ಹರಾದರು. ವಿಶ್ವದ ಮೊದಲ ಸಂಶ್ಲೇಷಿತ ಜೀನ್ ಅನ್ನು ನಿರ್ಮಿಸಿದ ಹೆಗ್ಗಳಿಕೆ ಕೂಡ ಅವರಿಗೆ ಸಲ್ಲುತ್ತದೆ.

4. ಮದರ್ ತೆರೇಸಾ (ಶಾಂತಿ, 1979)

ಕೋಲ್ಕತ್ತಾದಲ್ಲಿ ಬಡವರು ಮತ್ತು ರೋಗಿಗಳನ್ನು ನೋಡಿಕೊಳ್ಳುವ ಮಿಷನರೀಸ್ ಆಫ್ ಚಾರಿಟಿ ಮೂಲಕ ಅವರ ಮಾನವೀಯ ಕೆಲಸಕ್ಕಾಗಿ ಈ ಪ್ರತಿಷ್ಠಿತ ಪ್ರಶಸ್ತಿ ಅವರ ಮುಡಿಗೇರಿತು.

5. ಸುಬ್ರಹ್ಮಣ್ಯನ್ ಚಂದ್ರಶೇಖರ್ (ಭೌತಶಾಸ್ತ್ರ, 1983)

“ಚಂದ್ರಶೇಖರ್ ಲಿಮಿಟ್​” ಸೇರಿದಂತೆ ನಕ್ಷತ್ರಗಳ ರಚನೆ ಮತ್ತು ವಿಕಾಸದ ಕುರಿತಾದ ಅವರ ಸಿದ್ಧಾಂತಕ್ಕಾಗಿ 1983ರಲ್ಲಿ ನೊಬೆಲ್ ದೊರೆಯಿತು.

6. ಅಮರ್ತ್ಯ ಸೇನ್ (ಆರ್ಥಿಕ ವಿಜ್ಞಾನ, 1998)

ಕಲ್ಯಾಣ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಬಡತನ ಮತ್ತು ಅಭಿವೃದ್ಧಿಯನ್ನು ಅಳೆಯುವಲ್ಲಿ ಅವರ “capability approach"ಗಾಗಿ 1998ರಲ್ಲಿ ನೊಬೆಲ್​ ಪ್ರಶಸ್ತಿ ನೀಡಿ ಗೌರವಿಸಲಾಯಿತು.

7. ವೆಂಕಟರಾಮನ್ ರಾಮಕೃಷ್ಣನ್ (ರಸಾಯನಶಾಸ್ತ್ರ, 2009)

ವೈದ್ಯಕೀಯ ವಿಜ್ಞಾನಕ್ಕೆ ನಿರ್ಣಾಯಕವಾದ ಆವಿಷ್ಕಾರವಾದ ರೈಬೋಸೋಮ್‌ನ ಪರಮಾಣು ರಚನೆಯನ್ನು ನಕ್ಷೆ ಮಾಡಿದ್ದಕ್ಕಾಗಿ ವೆಂಕಟರಾಮನ್​ ಅವರಿಗೆ ಈ ಬಹುಮಾನ ಲಭಿಸಿತು.

8. ಕೈಲಾಶ್ ಸತ್ಯಾರ್ಥಿ (ಶಾಂತಿ, 2014)

ಬಾಲಕಾರ್ಮಿಕರ ವಿರುದ್ಧ ದಶಕಗಳ ಕಾಲದ ಹೋರಾಟ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಶ್ರಮಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ದೊರಕಿತು.

9. ಅಭಿಜಿತ್ ಬ್ಯಾನರ್ಜಿ (ಆರ್ಥಿಕ ವಿಜ್ಞಾನ, 2019)

ಜಾಗತಿಕವಾಗಿ ಬಡತನ ರೇಖೆಯನ್ನು ಕಡಿಮೆ ಮಾಡಲು ಕ್ಷೇತ್ರ ಪ್ರಯೋಗಗಳ ಬಳಕೆಯನ್ನು ಮತ್ತು ಅಧ್ಯಯನ ಮಾಡಿದ್ದಕ್ಕಾಗಿ ಅಭಿಜಿತ್​ ಬ್ಯಾನರ್ಜಿ ಅವರಿಗೆ 2019ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.

Also Read
ಬೆರಳಷ್ಟಿಲ್ಲದ ಈ ಸೀಗಡಿ ಮಾಡೋ ಸೌಂಡ್​ ಮುಂದೆ ಬುಲೆಟ್​ ಶಬ್ದವೇ ಠುಸ್​! ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pistol Shrimp
 Nobel Prize

ಯಾರ ಹೆಸರಿನಲ್ಲಿ ಈ ಪ್ರಶಸ್ತಿ?

1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2025ರ ಪ್ರಶಸ್ತಿ ಪ್ರದಾನ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1 ಮಿಲಿಯನ್ ಡಾಲರ್​) ದೊರೆಯಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net