ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk

ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಟಾರ್‌ಲಿಂಕ್​ಗೆ ಅನುಮತಿ ​ನೀಡುವ ಕುರಿತಂತೆ ಕೇಂದ್ರ ಸರ್ಕಾರದ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್, ಭಾರತದ ಉದ್ಯಮಿ ಮುಖೇಶ್ ಅಂಬಾನಿಯನ್ನು ಗುರಿಯಾಗಿಸಿ ಕ್ಷಮಿಸಿ ಡಿಯರ್ ಪ್ರಧಾನಿ ಅಂಬಾನಿ, ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk
Published on: 

ನವದೆಹಲಿ: ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಟಾರ್‌ಲಿಂಕ್​ಗೆ ಅನುಮತಿ ​ನೀಡುವ ಕುರಿತಂತೆ ಕೇಂದ್ರ ಸರ್ಕಾರದ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್, ಭಾರತದ ಉದ್ಯಮಿ ಮುಖೇಶ್ ಅಂಬಾನಿಯನ್ನು ಗುರಿಯಾಗಿಸಿ ಕ್ಷಮಿಸಿ ಡಿಯರ್ ಪ್ರಧಾನಿ ಅಂಬಾನಿ, ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಎಲಾನ್ ಮಸ್ಕ್, ಡಿಯರ್ ಪ್ರಧಾನಿ ಅಂಬಾನಿ ಅವರೇ, ಭಾರತದ ನಿಜವಾದ ಬಾಸ್ ನೀವೇ ಎಂಬುದನ್ನು ಅರಿಯದಿದ್ದಕ್ಕಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ. ಸ್ವಾಭಾವಿಕವಾಗಿ, ನೀವು ಭಾರತದ ಜನರ ಮೇಲಿನ ನಿಮ್ಮ ಏಕಸ್ವಾಮ್ಯದ ಶೋಷಣೆಯನ್ನು ಮುಂದುವರಿಸಲು ಬಯಸುತ್ತೀರಿ, ಆದರೆ ಸ್ಟಾರ್‌ಲಿಂಕ್‌ಗೆ ಸ್ಪರ್ಧಿಸಲು ಅವಕಾಶ ನೀಡುವುದನ್ನು ನೀವು ಪರಿಗಣಿಸುತ್ತೀರಾ?

ಎಲ್ಲಾ ದೇಶಗಳಂತೆ ಭಾರತದಲ್ಲೂ ಇಂಟರ್ನೆಟ್ ಸೌಲಭ್ಯವಿಲ್ಲದ ಅನೇಕ ಪ್ರದೇಶಗಳಿವೆ. ಇದರಿಂದಾಗಿ ಮಕ್ಕಳು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಮತ್ತು ಸಣ್ಣ ಉದ್ಯಮಗಳಿಗೆ ತಮ್ಮ ಸರಕುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶ ಸಿಗುತ್ತಿಲ್ಲ. 'ಸ್ಟಾರ್‌ಲಿಂಕ್' ಅವರ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಬಲ್ಲದು, ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Also Read
ಸಿಜೆಪಿ ಪ್ರತಿಭಟನೆ ಹಿನ್ನೆಲೆ ಇಂದು ಭಾಗಶಃ ದೆಹಲಿ ಬಂದ್; ನಗರದ ಹೃದಯ ಭಾಗದಲ್ಲಿ ಇಂಟರ್ನೆಟ್, ರಸ್ತೆಗಳು, ಮೆಟ್ರೋ ಸ್ತಭ್ದ | CJP protests
ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk

ಸ್ಪೇಸ್ ಎಕ್ಸ್​ ಒಡೆತನದ ಸ್ಟಾರ್​ಲಿಂಕ್, ಕೇಂದ್ರ ಸರ್ಕಾರದಿಂದ ದೂರಸಂಪರ್ಕ ಪರವಾನಗಿಗಳನ್ನು ಪಡೆದಿರುವ ಮೂರು 'ಉಪಗ್ರಹ ಆಧಾರಿತ ಜಾಗತಿಕ ಮೊಬೈಲ್ ವೈಯಕ್ತಿಕ ಸಂವಹನ ಸೇವೆ'ಗಳಲ್ಲಿ ಒಂದಾಗಿದೆ. ಉಳಿದೆರಡು ಏರ್ಟೆಲ್​ ಭಾರ್ತಿ ಬೆಂಬಲಿತ Eutelsat OneWeb ಮತ್ತು Jio Platforms-ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಸ್ಟಾಟ್​ಲೈನ್ ಕಮ್ಯೂನಿಕೇಷನ್​ ಲಿಮಿಟೆಡ್.

ಇನ್ನೂ ಸೇವೆಯನ್ನು ಆರಂಭಿಸಲು ಅನುಮತಿ ವಿಳಂಬದ ಬಗ್ಗೆ ಸ್ಪಷ್ಟೀಕರಣ ನೀಡಿರಯವ ಕೇಂದ್ರ ಸರ್ಕಾರ, ಭಾರತದಲ್ಲಿ ಮೂರು ಕಂಪನಿಗಳು ಸ್ಯಾಟ್‌ಕಾಮ್ ಪರವಾನಗಿಗಳನ್ನು ಪಡೆದುಕೊಂಡಿದ್ದು, ವೈಯಕ್ತಿಕ ಭದ್ರತಾ ಮಾನದಂಡಗಳನ್ನು ಪೂರೈಸಿ ಹಾಗೂ ಸರ್ಕಾರವು ಸ್ಪೆಕ್ಟ್ರಮ್ ಶುಲ್ಕದ ವಿಧಾನವನ್ನು ಅಂತಿಮಗೊಳಿಸಿದ ಬಳಿಕ ಅವು ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದೆ.

ಬುಧವಾರ ಎಕ್ಸ್​ನಲ್ಲಿ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸುವಾಗ ಮಸ್ಕ್​, ಭಾರತದಲ್ಲಿ 'ಸ್ಟಾರ್‌ಲಿಂಕ್' ಸೇವೆಯನ್ನು ಕೆಲವು ಅಧಿಕಾರಶಾಹಿ ಉದ್ಯಮಿಗಳು ತಡೆಯುತ್ತಿದ್ದಾರೆ ಎಂದು ಹೇಳಿದ ಬಳಿಕ ವಿವಾದ ಪ್ರಾರಂಭಾಯಿತು. ದುರದೃಷ್ಟವಶಾತ್, ಭಾರತೀಯರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಯ್ದುಕೊಳ್ಳುವ ಸಲುವಾಗಿ ಕೆಲವು ಪ್ರಭಾವಿ ಉದ್ಯಮಿಗಳು ನಮ್ಮ ಸೇವೆಯನ್ನು ತಡೆಯುತ್ತಿದ್ದಾರೆ. ಅವರು ಯಾರೆಂದು ನೀವು ಊಹಿಸಬಹುದು... ಇದು ಭಾರತದ ಜನರ ವಿರುದ್ಧ ಎಸಗುವ ಅಪರಾಧವಾಗಿದೆ ಎಂದು ಹೇಳಿದ್ದರು.

Also Read
ಭಾರತದ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ: ಎಲಾನ್ ಮಸ್ಕ್ ಹೇಳಿಕೆಗೆ ಜ್ಯೋತಿರಾದಿತ್ಯ ಸಿಂಧಿಯಾ ಕೌಂಟರ್ | Jyotiraditya Scindia
ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk

ಬಳಿಕ ಮಾರನೇ ದಿನ ಮತ್ತೆ ಪ್ರತಿಕ್ರಿಯಿಸಿದ್ದ ಮಸ್ಕ್, ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು ಎಂದು ಪ್ರಶ್ನಿಸಿದ್ದರು.

ಮುಂದುವರೆದು, ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಒಡೆಯನಾ? ಎಂದು ನೇರವಾಗಿ ಆರೋಪ ಮಾಡಿದ್ದರು.

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತಕ್ಕೆ ಸ್ವಾಗತ ಎಲಾನ್​. ಇನ್ನೂ ಒಬ್ಬರು ಸಿಗುವವರೆಗೂ ನೀವು ಕಾಯಬೇಕು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ರಿಟ್ವೀಟ್ ಮಾಡಿದ್ದ ಮಸ್ಕ್, ಥ್ಯಾಂಕ್ಯೂ ರಾಹುಲ್, ಆದ್ರೆ ಇದು ನಿಜಕ್ಕೂ ಆಂತಕಕಾರಿ ಎಂದು ಹೇಳಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net