ಸ್ಟಾರ್​ಲಿಂಕ್ ವಿವಾದ; ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ವಸಾಹತುವಲ್ಲ: ಎಲಾನ್ ಮಸ್ಕ್​ಗೆ ಕಮಲ್ ಹಾಸನ್ ತಿರುಗೇಟು | Kamal Haasan

ಭಾರತದಲ್ಲಿ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್' ಇಂಟರ್ನೆಟ್ ಸೇವೆಯನ್ನು ಕೆಲವು ಅಧಿಕಾರಶಾಹಿ ಉದ್ಯಮಿಗಳು ತಡೆಯುತ್ತಿದ್ದಾರೆ ಎಂಬ ವಿಶ್ವದ ನಂ. 01 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ವಸಾಹತುವಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಟ ಕಮಲ್ ಹಾಸನ್ ಮತ್ತು ಉದ್ಯಮಿ ಎಲಾನ್ ಮಸ್ಕ್
ನಟ ಕಮಲ್ ಹಾಸನ್ ಮತ್ತು ಉದ್ಯಮಿ ಎಲಾನ್ ಮಸ್ಕ್
Published on: 

ಚೆನ್ನೈ: ಭಾರತದಲ್ಲಿ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್' ಇಂಟರ್ನೆಟ್ ಸೇವೆಯನ್ನು ಕೆಲವು ಅಧಿಕಾರಶಾಹಿ ಉದ್ಯಮಿಗಳು ತಡೆಯುತ್ತಿದ್ದಾರೆ ಎಂಬ ವಿಶ್ವದ ನಂ. 01 ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ವಸಾಹತುವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕಮಲ್ ಹಾಸನ್, ಭಾರತೀಯರಾಗಲಿ ಅಥವಾ ಅಮೆರಿಕದವರಾಗಲಿ, ಯಾವೊಬ್ಬ ಶತಕೋಟ್ಯಧಿಪತಿಯೂ ದೇಶದ ನೀತಿಗಳನ್ನು ನಿರ್ದೇಶಿಸಬಾರದು. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ವಸಾಹತಲ್ಲ. ನಾವು ಜಗತ್ತನ್ನು ಸ್ವಾಗತಿಸುತ್ತೇವೆ. ಆದರೆ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ ಎಂದಿದ್ದಾರೆ.

ಗುರುವಾರ ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದ ಎಲಾನ್ ಮಸ್ಕ್, ಭಾರತದಲ್ಲಿ ಉಪಗ್ರಹ ಆಧಾರಿತ 'ಸ್ಟಾರ್‌ಲಿಂಕ್' ಇಂಟರ್ನೆಟ್ ಸೇವೆಯನ್ನು ಕೆಲವು ಅಧಿಕಾರಶಾಹಿ ಉದ್ಯಮಿಗಳು ತಡೆಯುತ್ತಿದ್ದಾರೆ. ಅವರು ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಯ್ದುಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಭಾರತದ ನಿಜವಾದ ಬಾಸ್ ಅಂಬಾನಿಯೇ ಎಂದು ಪ್ರಶ್ನಿಸಿದ್ದರು.

Also Read
ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk
ನಟ ಕಮಲ್ ಹಾಸನ್ ಮತ್ತು ಉದ್ಯಮಿ ಎಲಾನ್ ಮಸ್ಕ್

ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು ಎಂದು ಕೇಳಿದ್ದರು.

ಮುಂದುವರೆದು, ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಒಡೆಯನಾ? ಎಂದು ನೇರವಾಗಿ ಆರೋಪ ಮಾಡಿದ್ದರು.

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತಕ್ಕೆ ಸ್ವಾಗತ ಎಲಾನ್​. ಇನ್ನೂ ಒಬ್ಬರು ಸಿಗುವವರೆಗೂ ನೀವು ಕಾಯಬೇಕು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ರಿಟ್ವೀಟ್ ಮಾಡಿದ್ದ ಮಸ್ಕ್, ಥ್ಯಾಂಕ್ಯೂ ರಾಹುಲ್, ಆದ್ರೆ ಇದು ನಿಜಕ್ಕೂ ಆಂತಕಕಾರಿ ಎಂದು ಹೇಳಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net