ಸಪ್ತಶ್ರಿಂಗ್ ಘರ್ ಘಾಟ್ನಲ್ಲಿ 600 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು: ಆರು ಮಂದಿ ಸಾವು | Accident
ಘಟನೆ ನಡೆದ ಸ್ಥಳ
Published on:
Copied
Follow Us
ಮುಂಬೈ: ಮಹಾರಾಷ್ಟ್ರದ ನಾಸಿಕ್ನ ಕಲ್ವಾನ್ ತಾಲೂಕಿನ ಸಪ್ತಶ್ರಿಂಗ್ ಘರ್ ಘಾಟ್ನಲ್ಲಿ ಭಾನುವಾರ(ಡಿ. 07) ಕಾರೊಂದು 600 ಅಡಿ ಆಳದ ಕಂದಕಕ್ಕೆ ಬಿದ್ದು ಅಪಘಾತ(Accident) ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತು ಮಾಹಿತಿ ಎಸ್ಪಿ ಬಾಳಾಸಾಹೇಬ್ ಪಾಟೀಲ್, ನಿನ್ನೆ ಸಂಜೆ 4 ಗಂಟೆಗೆ ಘಟನೆ ನಡೆದಿದೆ. ಏಳು ಪ್ರಯಾಣಿಕರಿದ್ದ ಟೊಯೋಟಾ ಇನ್ನೋವಾ ಕಾರು ಕಂದಕಕ್ಕೆ ಬಿದ್ದಿದೆ. ನಿಫಾದ್ ತಾಲೂಕಿನ ಪಿಂಪಾಲ್ಗಾಂವ್ ಬಸ್ವಂತ್ ಮೂಲದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಮೃತರನ್ನು ಕೀರ್ತಿ ಪಟೇಲ್ (50), ರಸೀಲಾ ಪಟೇಲ್ (50), ವಿಠ್ಠಲ್ ಪಟೇಲ್ (65), ಲತಾ ಪಟೇಲ್ (60), ವಚನ್ ಪಟೇಲ್ (60) ಮತ್ತು ಮಣಿಬೆನ್ ಪಟೇಲ್ (70) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಎಸ್ಪಿ ನೇತೃತ್ವದಲ್ಲಿ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದ ಅಪಘಾತದಿಂದ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆ ನನ್ನ ಭಾವನೆಗಳಿವೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ಇನ್ನೂ ಘಟನೆಯನ್ನು ದುರಂತ ಎಂದು ಕರೆದಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಮೃತರ ಕುಟುಂಬಸ್ಥರೊಂದಿಗೆ ರಾಜ್ಯ ಸರ್ಕಾರ ನಿಲ್ಲುತ್ತದೆ. ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).