ಲಾರೆನ್ಸ್ ಆಫ್ ಪಂಜಾಬ್​ಗೆ ಹಿನ್ನಡೆ: ವೆಬ್ ಸರಣಿ ಬಿಡುಗಡೆಗೆ ಹೈಕೋರ್ಟ್​ ನಕಾರ! Lawrence Of Punjab

ಲಾರೆನ್ಸ್​​ ಬಿಷ್ಣೋಯ್
ಲಾರೆನ್ಸ್​​ ಬಿಷ್ಣೋಯ್
Published on

ಪ್ರಮುಖ ಮುಖ್ಯಾಂಶಗಳು

  • ಲಾರೆನ್ಸ್ ಆಫ್ ಪಂಜಾಬ್ ವೆಬ್​ ಸರಣಿಗೆ ಹೈಕೋರ್ಟ್​ ತಡೆ
  • ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಜೀವನಾಧಾರಿತ ಸರಣಿ
  • ಜೀ 5 ನಲ್ಲಿ ತೆರೆಕಾಣಬೇಕಿದ್ದ ಸರಣಿ
ಚಂಢೀಗಡ್​: ಸದ್ಯ ಭಾರತದಲ್ಲಿರುವ ನಟೋರಿಯಸ್​ ಗ್ಯಾಂಗ್​ಸ್ಟರ್​ ಯಾರೆಂದು ಕೇಳಿದರೆ, ಬಹತೇಕರು ಹೇಳುವ ಹೆಸರೇ, ಲಾರೆನ್ಸ್​​ ಬಿಷ್ಣೋಯ್​​ದ್ದಾಗಿದೆ. ಆದರೆ ಇತನ ಕುರಿತು ಲಾರೆನ್ಸ್​ ಆಫ್​ ಪಂಜಾಬ್ (Lawrence Of Punjab)​ ಎಂಬ ವೆಬ್​ ಸರಣಿ ತೆರೆಕಾಣಲು ಸಿದ್ಧವಾಗಿತ್ತು, ಆದರೆ ಈ ಚಲನಚಿತ್ರದ ಬಿಡುಗಡೆಯನ್ನು ಭಾರತ ಸರ್ಕಾರ ತಡೆ ಹಿಡಿದಿದೆ.

ಏಕೆ ತಡೆ ಹಿಡಿಯಲಾಗಿದೆ?

ಇಂದು (ಏ.24) ಅಮರಿಂಗ್​ ಸಿಂಗ್​ ರಾಜಾ ವಾರಿಂಗ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಚಂಢೀಗಡ್ ಹೈಕೋರ್ಟ್​ ಈ ​ವೆಬ್​ ಸರಣಿಯನ್ನು ಜೀ 5 (ZEE 5) ವೇದಿಕೆಗೆ ಬಿಡುಗಡೆ ಮಾಡದಂತೆ ಆದೇಶಿಸಿದೆ. ಈ ಆದೇಶನದ ಹಿನ್ನಲೆಯಲ್ಲಿ ವೆಬ್​ ಸರಣಿಯ ಬಿಡುಗಡೆಗೆ ವಿಘ್ನ ಎದುರಾಗಿದೆ.
ಲಾರೆನ್ಸ್​ ಆಫ್​ ಪಂಜಾಬ್​ ಬಿಡುಗಡೆಯಾಗಬಾರದು!
ಪಂಜಾಬ್​ನ ಖ್ಯಾತ ಹಾಡುಗಾರ ದಿ. ಸಿಧು ಮೂಸೆವಾನ ಹತ್ಯೆಯಲ್ಲಿ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನ ಕೈವಾಡವಿದೆ ಎಂದು ಹೇಳಲಾಗಿತ್ತು. ಹಾಗೆಯೇ ಈ ಹತ್ಯೆಯ ಜವಾಬ್ದಾರಿಯನ್ನು ಸಹ ಬಿಷ್ಣೋಯ್​ ಗ್ಯಾಂಗ್​ನ ಸದಸ್ಯರೇ ಒಪ್ಪಿಕೊಂಡಿದ್ದರು. ಆದ್ದರಿಂದ ತಮ್ಮ ಮಗನ ಸಾವಿಗೆ ಕಾರಣನಾದ ಲಾರೆನ್ಸ್​ ಬಿಷ್ಣೋಯ್​ ಕುರಿತು ಬಿಡುಗಡೆಯಾಗಲಿಒರುವ ವೆನ್​ ಸರಣಿ ತೆರೆ ಕಾಣಬಾರದೆಂದು ಬಲ್ಕೂರ್​ ಸಿಂಗ್​ ತಾಕೀತು ಮಾಡಿದ್ದರು. ​
ಅವನೊಬ್ಬ ಕೊಲೆಗಡುಕ, ಬ್ಲಾಕ್​ಮೇಲರ್​,ರೌಡಿ ಹೋಗಿ ಹೋಗಿ ಅವನ ಮೇಲೆ ಸಿನಿಮಾ ಅಥವಾ ವೆಬ್​ ಸರಣಿಗಳನ್ನು ಸಿನಿರ್ಮಿಸಲು ಅವನೇನು ಸ್ವಾತಂತ್ರ್ಯ ಹೋರಾಟಗಾನೇ? ಅಥವಾ ಸಮಾಜ ಸುಧಾರಕನೇ? ಎಂದು ಅವರು ಪ್ರಶ್ನಿಸಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net