ದೆಹಲಿಯಲ್ಲಿ ರೈಲ್ವೆ, 57 ಮೆಟ್ರೋ ಸ್ಟೇಷನ್ ಬಂದ್; ಇಡೀ ದೇಶವನ್ನೇ ಬಂದ್ ಮಾಡಿ ಎಂದು ಕೇಂದ್ರದ ವಿರುದ್ಧ ಅಭಿಜಿತ್ ದಿಪ್ಕೆ ವಾಗ್ದಾಳಿ | Abhijeet Dipke

ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಾಳೆ(ಅ. 10) ಜಂತರ್ ಮಂತರ್​​ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುವ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ದೆಹಲಿಗೆ ತೆರಳುವ ರೈಲುಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸಿರುವ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ಇಡೀ ದೇಶವನ್ನೇ ಬಂದ್ ಮಾಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Abhijit Dipke
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದಿಪ್ಕೆ
Published on: 

ನವದೆಹಲಿ: ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಾಳೆ(ಅ. 10) ಜಂತರ್ ಮಂತರ್​​ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುವ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ದೆಹಲಿಗೆ ತೆರಳುವ ರೈಲುಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸಿರುವ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ಇಡೀ ದೇಶವನ್ನೇ ಬಂದ್ ಮಾಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜೆನ್​ ಝಿಗೆ ಹೆದರುತ್ತಿದೆ. ಸರ್ಕಾರಕ್ಕೆ ಯುವಜನರ ಬಗ್ಗೆ ಭಯವಿದ್ದರೆ ಇಡೀ ದೇಶವನ್ನೇ ಬಂದ್ ಮಾಡಲಿ. ಅಧಿಕಾರಿಗಳು ನಮ್ಮ ಪ್ರತಿಭಟನೆಯನ್ನು ನಿರ್ಬಂಧಿಸಿದ್ರೂ ಸಿಜೆಪಿ ಹೋರಾಟ ನಡೆಯಲಿದೆ. ಧೈರ್ಯವಿದ್ದರೆ ಸರ್ಕಾರ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದಾರೆ.

Also Read
ನಾಳೆ ಸಿಜೆಪಿ ಪ್ರತಿಭಟನೆ: ಇಂದು ರಾತ್ರಿಯಿಂದಲೇ ಜಂತರ್ ಮಂತರ್ ಸುತ್ತ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾದ ದೆಹಲಿ ಪೊಲೀಸರು | CJP protest
Abhijit Dipke

ಇದೇ ವೇಳೆ, ಸಿಜೆಪಿ ನಾಯಕ ಸೌರವ್ ದಾಸ್, ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದು, ನಾವ್ಯಾರೂ ಭ್ರಮೆಯಲ್ಲಿರಬಾರದು. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ಮತ್ತು ದೆಹಲಿ ಒಂದು ಕೋಟೆಯಂತಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಕ್ಷದ ಸ್ವಯಂಸೇವಕರನ್ನು ವಶಕ್ಕೆ ಪಡೆಯಲಾಗುತ್ತಿದೆ. ಮತ್ತು ಕೆಲವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿಲ್ಲ. ಆದ್ರೂ ಸಿಜೆಪಿ ಪ್ರತಿಭಟನೆ ಮಾಡೋದಾಗಿ ಘೋಷಣೆ ಮಾಡಿದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ದೆಹಲಿಗೆ ಬರುತ್ತಿರುವ ಎಲ್ಲಾ ರೈಲುಗಳನ್ನು ರದ್ದು ಮಾಡಿದ್ದು, ದೆಹಲಿಯ 57 ಮೆಟ್ರೋ ಸ್ಟೇಷನ್​ಗಳನ್ನು ಬಂದ್ ಮಾಡಲು ದೆಹಲಿ ಮೆಟ್ರೋ ಸೂಚನೆ ನೀಡಿದೆ. ಜೊತೆಗೆ ದೆಹಲಿ ಪೊಲೀಸರು ಇಂದು ರಾತ್ರಿಯಿಂದಲೇ ಜಂತರ್ ಮಂತರ್ ಸುತ್ತಮುತ್ತ ಇಂಟರ್ನೆಟ್ ಸ್ಥಗಿತಕ್ಕೆ ಆದೇಶ ನೀಡಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net