ನಾಳೆ ಸಿಜೆಪಿ ಪ್ರತಿಭಟನೆ: ಇಂದು ರಾತ್ರಿಯಿಂದಲೇ ಜಂತರ್ ಮಂತರ್ ಸುತ್ತ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾದ ದೆಹಲಿ ಪೊಲೀಸರು | CJP protest

ದೆಹಲಿಯಲ್ಲಿ ನಾಳೆ(ಅ. 10) ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ನಡೆಸುವ ಮುನ್ನವೇ ದೆಹಲಿ ಪೊಲೀಸರು ಇಂದು ರಾತ್ರಿ 10 ಗಂಟೆಯಿಂದಲೇ ಜಂತರ್​ ಮಂತರ್ ಸುತ್ತಮುತ್ತ ನಾಲ್ಕು ಕಿಲೋ ಮೀಟರ್​ವರೆಗೂ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ನಾಳೆ ಸಿಜೆಪಿ ಪ್ರತಿಭಟನೆ: ಇಂದು ರಾತ್ರಿಯಿಂದಲೇ  ಜಂತರ್ ಮಂತರ್ ಸುತ್ತ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾದ ದೆಹಲಿ ಪೊಲೀಸರು | CJP protest
Published on: 

ನವದೆಹಲಿ: ದೆಹಲಿಯಲ್ಲಿ ನಾಳೆ(ಅ. 10) ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ನಡೆಸುವ ಮುನ್ನವೇ ದೆಹಲಿ ಪೊಲೀಸರು ಇಂದು ರಾತ್ರಿ 10 ಗಂಟೆಯಿಂದಲೇ ಜಂತರ್​ ಮಂತರ್ ಸುತ್ತಮುತ್ತ ನಾಲ್ಕು ಕಿಲೋ ಮೀಟರ್​ವರೆಗೂ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ(ಅ. 09) ಸಂಜೆ ದೆಹಲಿ ಪೊಲೀಸ್ ಆಯುಕ್ತರ ಕಚೇರಿಯಿಂದ ಏರ್‌ಟೆಲ್, ವೊಡಾಫೋನ್-ಐಡಿಯಾ, ಜಿಯೋ ಮತ್ತು ಎಂಟಿಎನ್‌ಎಲ್‌ಗೆ ಆದೇಶ ನೀಡಲಾಗಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಜನಪಥ್-ಕರ್ತವ್ಯ ಪಾತ್ ಕ್ರಾಸಿಂಗ್‌ನಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.

ಆದೇಶದ ಪ್ರಕಾರ, ದೂರಸಂಪರ್ಕ ಕಾಯಿದೆ 2023ರ ಸೆಕ್ಷನ್ 20(2)(ಬಿ) ಹಾಗೂ ದೂರಸಂಪರ್ಕ (ಸೇವೆಗಳ ತಾತ್ಕಾಲಿಕ ಸ್ಥಗಿತ) ನಿಯಮಗಳು, 2024ರ ನಿಯಮ 3ರ ಉಪ-ನಿಯಮ (1)ರ ಅಡಿಯಲ್ಲಿ, ಜನಪಥ್-ಕರ್ತವ್ಯ ಪಾತ್ ಕ್ರಾಸಿಂಗ್‌ನಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವ ನಮ್ಮ ವಿನಂತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿಗಳು ಪರಿಗಣಿಸಿದ್ದಾರೆ. ಆದ್ದರಿಂದ ಇಂದು(ಅ. 09) ರಾತ್ರಿ 10 ಗಂಟೆಯಿಂದ ನಾಳೆ(ಅ. 10) ರಾತ್ರಿ 10 ಗಂಟೆವರೆಗೆ ಮೇಲಿನ ಆದೇಶವನ್ನು ತಕ್ಷಣವೇ ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.

Also Read
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಧ್ಯಪಕ ಹುದ್ದೆಯಿಂದ ಕಾಂಗ್ರೆಸ್​ ಸಂಸದನನ್ನು ವಜಾಗೊಳಿಸಿದ ಜೆಎನ್​ಯು ವಿಶ್ವವಿದ್ಯಾಲಯ | Congress MP
ನಾಳೆ ಸಿಜೆಪಿ ಪ್ರತಿಭಟನೆ: ಇಂದು ರಾತ್ರಿಯಿಂದಲೇ  ಜಂತರ್ ಮಂತರ್ ಸುತ್ತ ಇಂಟರ್ನೆಟ್ ಸ್ಥಗಿತಕ್ಕೆ ಮುಂದಾದ ದೆಹಲಿ ಪೊಲೀಸರು | CJP protest

ಇಂಟರ್ನೆಟ್ ಸ್ಥಗಿತಗೊಳಿಸುವ ಕ್ರಮವನ್ನು ಸಮರ್ಥಿಸಿಕೊಂಡಿರುವ ದೆಹಲಿ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಇಂಟರ್ನೆಟ್ ಸ್ಥಗಿತದಿಂದ ದೆಹಲಿಯ ಕನ್ನಾಟ್ ಪ್ಲೇಸ್, ಮಂಡಿ ಹೌಸ್, ಪ್ರಗತಿ ಮೈದಾನ, ಗುರುದ್ವಾರ ಬಾಂಗ್ಲಾ ಸಾಹಿಬ್, ಬರಾಖಂಬಾ ರಸ್ತೆ, ಖಾನ್ ಮಾರುಕಟ್ಟೆ, ಲೋಧಿ ರಸ್ತೆ ಮತ್ತು ಜಂಗ್‌ಪುರದ ಕೆಲವು ಭಾಗಗಳು ಸಮಸ್ಯೆ ಎದುರಿಸಬಹುದು ಎನ್ನಲಾಗಿದೆ.

ಇನ್ನೂ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿಲ್ಲ. ಆದ್ರೂ ಸಿಜೆಪಿ ಪ್ರತಿಭಟನೆ ಮಾಡೋದಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ದೆಹಲಿಗೆ ಬರುತ್ತಿರುವ ಎಲ್ಲಾ ರೈಲುಗಳನ್ನು ರದ್ದು ಮಾಡಿದ್ದು, ದೆಹಲಿಯ 57 ಮೆಟ್ರೋ ಸ್ಟೇಷನ್​ಗಳನ್ನು ಬಂದ್ ಮಾಡಲು ದೆಹಲಿ ಮೆಟ್ರೋ ಸೂಚನೆ ನೀಡಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net