‘ಪರೀಕ್ಷೆ ಫೇಲಾದ ವಿದ್ಯಾರ್ಥಿ ರಾಹುಲ್ ಗಾಂಧಿ!’: ರಾಷ್ಟ್ರವಿರೋಧಿಗಳನ್ನು ಜನರೇ ಕಂಡಲ್ಲಿ ಹೊಡೆಯುತ್ತಿದ್ದಾರೆ ಎಂದ ಕಂಗನಾ! Kangana Ranaut

ಚುನಾವಣಾ ಆಯೋಗದ ವಿರುದ್ಧ ಸಿಜೆಪಿ ಪ್ರತಿಭಟನೆಗೆ ಸಂಸದೆ ಕಂಗನಾ ರಣಾವತ್ ಕಿಡಿ. ರಾಹುಲ್ ಗಾಂಧಿಯನ್ನು ಪರೀಕ್ಷೆ ಫೇಲಾದ ವಿದ್ಯಾರ್ಥಿಗೆ ಹೋಲಿಸಿ ವಿದೇಶಿ ಷಡ್ಯಂತ್ರದ ಆರೋಪ; ವಿವರ ಇಲ್ಲಿದೆ.
BJP MP Kangana Ranaut launched a scathing attack against the protests and the INDIA alliance.
ಸಿಜೆಪಿ ಪ್ರತಿಭಟನೆ ಹಾಗೂ ಇಂಡಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್.
Published on: 

ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಶನಿವಾರ (ಅ.10) ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಕಾಕ್ರೋಚ್​ ಜನತಾ ಪಾರ್ಟಿ ನಡೆಸುತ್ತಿರುವ ಈ ಪ್ರತಿಭಟನೆಗೆ ಬಾಲಿವುಡ್​ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ ಪ್ರತಿಕ್ರಿಯಿಸಿದ್ದು, ಇತ್ತೀಚಿನ ದಿನಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಇವುಗಳ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವಿದೆ ಎಂದು ಸಂಸದೆ ತಿಳಿಸಿದ್ದಾರೆ.

ಭಾರತದ ವಿರುದ್ದ ಷಂಡ್ಯಂತ್ರ ನಡೆಯುತ್ತಿದೆ!

ಚುನಾವಣಾ ಆಯೋಗದ ನೀತಿ-ನಿರೂಪಣೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಕಂಗನಾ, ಕೆಲ ವಿದೇಶಿ ಶಕ್ತಿಗಳು ಭಾರತದ ವಿರುದ್ಧ ಷಂಡ್ಯಂತ್ರ ರೂಪಿಸುತ್ತಿದ್ದು, ಇಲ್ಲಿರುವ ಕೆಲವೊಂದಿಷ್ಟು ಜನ ಶಾಂತಿಯಿಂದಿರುವ ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಕೆಲ ದಿನಗಳಿಂದ ಭಾರತ ವಿರೋಧಿ ಶಕ್ತಿಗಳ ಸಮಾಗಮವಾಗಿದ್ದು, ಭಾರತದಲ್ಲಿ ದೇಶ ವಿರೋಧಿ ಕೃತ್ಯಗಳ ಹಾಗೂ ಕೃತ್ಯವೆಸೆಗುವವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ಇದನ್ನು ಶೀಘ್ರದಲ್ಲಿ ಮಟ್ಟಹಾಕಬೇಕಿರುವ ಸಂದರ್ಭ ನಮಗೆ ಎದುರಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಭಾರತೀಯರ ಬೆಂಬಲ ನಮಗಿದೆ!

ನಮ್ಮೊಂದಿಗೆ ಪ್ರಭು ಶ್ರೀರಾಮ ಹಾಗೂ ಹನುಮಂತನ ಆರ್ಶೀವಾದ ಇರುವವರೆಗೆ ನಮಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯರ ಬೆಂಬಲ ನಮ್ಮೊಂದಿಗಿದೆ. ಈಗ ದೇಶ ವಿರೋಧಿಗಳ ಮುಖ ಬಯಲಾಗುತ್ತಿದೆ. ಕೇವಲ ಪೊಲೀಸರು ಮಾತ್ರವಲ್ಲ, ಜನರು ಸಹ ರಾಷ್ಟ್ರ ವಿರೋಧಿಗಳನ್ನ ಕಂಡಲ್ಲಿ ಹೊಡೆಯಲು ಆರಂಭಿಸಿದ್ದಾರೆ. ದೇಶದ ಶಾಂತಿ ಕದಡುವ ಯಾರನ್ನು ಸುಮ್ಮನೆ ಬಿಡುವಂತಿಲ್ಲ ಎಂದು ಸಂಸದೆ ಗುಡುಗಿದ್ದಾರೆ.

Also Read
‘ನಾವು ಅರೆಸ್ಟ್ ಆದ್ರೆ ಇವನೇ ಲೀಡರ್!’: ಬಂಧನಕ್ಕೂ ಮುನ್ನವೇ ವಿಡಿಯೋ ಬಿಡುಗಡೆ ಮಾಡಿದ್ದ ಅಭಿಜಿತ್ ದಿಪ್ಕೆ; ಯಾರು ಈ ಅಜಿಂಕ್ಯಾ ಶಿಂಧೆ? Ajinkya Shinde
BJP MP Kangana Ranaut launched a scathing attack against the protests and the INDIA alliance.

ಪರೀಕ್ಷೆ ಫೇಲಾದ ವಿದ್ಯಾರ್ಥಿ ರಾಹುಲ್!

ಇನ್ನು ಚುನಾವಣಾ ಆಯೋಗ ಏಕಪಕ್ಷೀಯ ನೀತಿ ಅನುಸರಿಸುತ್ತಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ನೇತೃತ್ವದ ಇಂಡಿ ಮೈತ್ರಿಕೂಟ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದನ್ನು ಕಂಗನಾ ವ್ಯಂಗ್ಯ ಮಾಡಿದ್ದಾರೆ.

ರಾಹುಲ್​ ಗಾಂಧಿ ನೇತೃತ್ವದ ಪಕ್ಷ ಚುನಾವಣೆಯಲ್ಲಿ ಸೋತಿದೆ. ಜನ ಅವರಿಗೆ ಬಹುಮತ ನೀಡಿಲ್ಲ. ಆದರೆ ಇದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ರಾಹುಲ್,​ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಯೊಬ್ಬ, ಪರೀಕ್ಷಾ ನಂತರ ಟೀಚರ್​ ಬಳಿ ಹೋಗಿ ನಮಗೆ ಕಠಿಣ ಪ್ರಶ್ನೆ ಕೇಳಲಾಗಿದೆ ಅದಕ್ಕೆ ನಾವು ಫೇಲಾಗಿದ್ದೆವೆ ಎಂದು ಹೇಳುವಂತೆ, ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದಾರೆಂದು ಸಂಸದೆ ಅಪಹಾಸ್ಯ ಮಾಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net