‘ನಾವು ಅರೆಸ್ಟ್ ಆದ್ರೆ ಇವನೇ ಲೀಡರ್!’: ಬಂಧನಕ್ಕೂ ಮುನ್ನವೇ ವಿಡಿಯೋ ಬಿಡುಗಡೆ ಮಾಡಿದ್ದ ಅಭಿಜಿತ್ ದಿಪ್ಕೆ; ಯಾರು ಈ ಅಜಿಂಕ್ಯಾ ಶಿಂಧೆ? Ajinkya Shinde

ದೆಹಲಿಯಲ್ಲಿ ಸಿಜೆಪಿ ನಾಯಕರ ಬಂಧನದ ಬೆನ್ನಲ್ಲೇ ಜಂತರ್ ಮಂತರ್ ಪ್ರತಿಭಟನೆಗೆ ಹೊಸ ಟ್ವಿಸ್ಟ್. ಅಭಿಜಿತ್ ದಿಪ್ಕೆ ಬಿಡುಗಡೆ ಮಾಡಿದ ಪ್ಲಾನ್ ವಿಡಿಯೋ ಬಹಿರಂಗ; ಯಾರು ಈ ನೂತನ ಸಾರಥಿ ಅಜಿಂಕ್ಯಾ ಶಿಂಧೆ?
CJP chief Abhijit Dipke declared Ajinkya Shinde the leader of the protest before his arrest.
ಬಂಧನಕ್ಕೂ ಮುನ್ನ ಅಜಿಂಕ್ಯಾ ಶಿಂಧೆ ಅವರನ್ನು ಪ್ರತಿಭಟನೆಯ ಮುಂದಿನ ನಾಯಕನೆಂದು ಘೋಷಿಸಿದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದಿಪ್ಕೆ
Published on: 

ನವದೆಹಲಿ : ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಶನಿವಾರ (ಅ.10) ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಆದರೆ, ಪ್ರತಿಭಟನಾ ಸ್ಥಳಕ್ಕೆ ತಲುಪುವ ಮೊದಲೇ, ಸಿಜೆಪಿ ನಾಯಕರಾದ ಅಭಿಜಿತ್​ ದಿಪ್ಕೆ, ಆಶುತೋಷ್​ ರಾಂಕಾ, ಸೌರವ್​ ದಾಸ್​ ರನ್ನು ದೆಹಲಿ ಪೊಲೀಸರು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿದ ಹಿನ್ನಲೆ, ಈಗ ಈ ಪ್ರತಿಭಟನೆಯನ್ನು ಯಾರು ಮುನ್ನಡೆಸಲಿದ್ದಾರೆಂಬ ಗೊಂದಲ ಜಿರಳೆ ಬೆಂಬಲಿಗರಲ್ಲಿ ಮೂಡಿತ್ತು. ಆದರೆ, ಇದಕ್ಕೆ ಈಗ ತೆರೆ ಬಿದ್ದಿದ್ದು, ಅಜಿಂಕ್ಯಾ ಶಿಂಧೆ ಈಗ ಜಂತರ್​-ಮಂತರ್​ನಲ್ಲಿ ನಡೆಯಲಿರುವ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ.

ಮೊದಲೇ ಪ್ಲಾನ್​ ಮಾಡಿದ್ದ ದಿಪ್ಕೆ!

ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ವಿಡಿಯೋವೊಂದು ಹಂಚಿಕೆಯಾಗಿದ್ದು, ಈ ವಿಡಿಯೋನಲ್ಲಿ ಅಭಿಜಿತ್​ ದಿಪ್ಕೆ, ನೀವು ಈ ವಿಡಿಯೋವನ್ನು ನೋಡುತ್ತಿದ್ದಿರಾ ಎಂದರೆ, ನಾನು (ಅಭಿಜಿತ್​) ಸೌರವ್​ ಮತ್ತು ಆಶುತೋಷ್​ ಅರೆಸ್ಟ್​ ಆಗಿದ್ದೇವೆ ಎಂದರ್ಥ. ನಾನು ಮೂವರು ಪೊಲೀಸರಿಂದ ಬಂಧನಕ್ಕೊಳಗಾದ ಹಿನ್ನಲೆ ಈಗ, ಅಜಿಂಕ್ಯಾ ಶಿಂಧೆ ಈ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ. ನೀವೆಲ್ಲರೂ, ಅಜಿಂಕ್ಯಾನನ್ನು ಫಾಲೋ ಮಾಡಿಕೊಳ್ಳಿ, ಅವನೇ ಪ್ರತಿಭಟನೆಯ ಮುಂದಿನ ರೂಪು-ರೇಷೆಗಳನ್ನು ಹಂಚಿಕೊಳ್ಳುತ್ತಾನೆಂದು ವಿಡಿಯೋನಲ್ಲಿ ಹೇಳಲಾಗಿದೆ.

ಯಾರು ಈ ಅಜಿಂಕ್ಯಾ ಶಿಂಧೆ?

ಸಿಜೆಪಿಯ ನೂತನ ನಾಯಕ ಅಜಿಂಕ್ಯಾ ಶಿಂಧೆ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ. ಇವರು ಕಾಕ್ರೋಚ್​ ಜನತಾ ಪಾರ್ಟಿಯ ಪ್ರಮುಖ ನಾಯಕರಾಗಿದ್ದು, ನೀಟ್​ ವಿರೋಧಿ ಪ್ರತಿಭಟನೆಯಲ್ಲಿ ಬಹಳ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಅಂತಯೇ, ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ, ಚುನಾವಣಾ ಆಯೋಗ ವಿರುದ್ಧದ ಜೈಲ್​ ಭರೋ ಹೋರಾಟದ ನೇತೃತ್ವವನ್ನು ಇದೇ ಅಜಿಂಕ್ಯಾ ಶಿಂಧೆ ವಹಸಿಕೊಂಡಿದ್ದರು. ಹಾಗೂ ಕಾಕ್ರೋಚ್​ ಜನತಾ ಪಾರ್ಟಿ ನಡೆಸಿದ್ದ, ಸ್ಕೂಲ್​ ಟೀಕ್​ ಕರೋ ಅಭಿಯಾನ ಕೂಡ ಇವರದೇ ಯೋಜನೆ ಎಂದು ಹೇಳಲಾಗುತ್ತಿದೆ.

ಜಂತರ್​-ಮಂತರ್​ನಲ್ಲಿ ಭಾರೀ ಪ್ರತಿಭಟನೆ!

ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಆದರೆ, ಪ್ರತಿಭಟನೆಗೂ ಮುನ್ನವೇ, ಸಿಜೆಪಿ ಸ್ಥಾಪಕ ಅಭಿಜಿತ್​ ದಿಪ್ಕೆ, ವಕ್ತಾರರಾದ, ಸೌರವ್​ ದಾಸ್​ ಹಾಗೂ ಆಶುತೋಷ್​ ರಾಂಕಾ ಮತ್ತು ಯೂಟ್ಯೂಬರ್​ ಧ್ರುವ್​ ರಾಠಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ.

Also Read
ಎಲ್ಲರೂ ಅಂದರ್‌.. ನಾನೊಬ್ಬನೇ ಬಾಹರ್‌! ಸಿಜೆಪಿ ನಾಯಕರ ಬಂಧನದ ಬೆನ್ನಲ್ಲೇ ವಿಜೇತಾ ದಹಿಯಾ ವ್ಯಂಗ್ಯ; ವಿಡಿಯೋ ವೈರಲ್​! Vijeta Dahiya
CJP chief Abhijit Dipke declared Ajinkya Shinde the leader of the protest before his arrest.

ಅಭಿಜಿತ್​ ಅಜ್ಜಿ ಸಾವು!

ಒಂದೆಡೆ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ಸಿಜೆಪಿ ನಾಯಕ ಅಭಿಜಿತ್​ ದಿಪ್ಕೆ ಅವರ ಅಜ್ಜಿ ಸಾವಿತ್ರಿಭಾಯಿ ದಿಪ್ಕೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಮಾಹಿತಿ ಪ್ರಕಾರ ಸಾವಿತ್ರಿಭಾಯಿ ಅವರ ಅಂತ್ಯಕ್ರಿಯೆಯು ಮಹಾರಾಷ್ಟ್ರದ ಹಿಂಗೋಳಿ ಜಿಲ್ಲೆಯ ಶಾಂತುಕ್​ ಪಿಂಪ್ರಿಯಲ್ಲಿ ನಡೆಯಲಿದ್ದು, ಅಭಿಜಿತ್​ ಅವರ ತಂದೆ ಮತ್ತು ತಾಯಿ ಊರಿನತ್ತ ಪ್ರಯಾಣ ಬೆಳೆಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಅಭಿಜಿತ್​ ದಿಪ್ಕೆ ಅಜ್ಜಿಯ ಅಂತಿಮ ದರ್ಶನ ಪಡೆಯಲು ಮುಂಬೈಗೆ ಮರಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net