ಅಣ್ಣ-ತಂಗಿ ನಡುವೆ ಆಸ್ತಿ ವಿವಾದ: ಯಲಹಂಕ ಬಂಗಲೆ ಪ್ರವೇಶಿಸದಂತೆ ವೈಎಸ್ ಶರ್ಮಿಳಾ ರೆಡ್ಡಿಗೆ ನಿರ್ಬಂಧಿಸಿದ ನ್ಯಾಯಾಲಯ | Y S Sharmila

ಮಾಜಿ ಸಿಎಂ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್.ಜಗನ್​ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ಶರ್ಮಿಳಾ ರೆಡ್ಡಿ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಬೆಳವಣೆಯೊಂದರಲ್ಲಿ ಸಹೋದರಿ ಶರ್ಮಿಳಾ ಅವರಿಗೆ ಯಲಹಂಕದ ಬಂಗಲೆ ಪ್ರವೇಶಿಸದಂತೆ ದೇವನಹಳ್ಳಿಯಲ್ಲಿರುವ ಹಿರಿಯ ಸಿವಿಲ್ ನ್ಯಾಯಾಲಯ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಅಣ್ಣ-ತಂಗಿ ನಡುವೆ ಆಸ್ತಿ ವಿವಾದ: ಯಲಹಂಕ ಬಂಗಲೆ ಪ್ರವೇಶಿಸದಂತೆ ವೈಎಸ್ ಶರ್ಮಿಳಾ ರೆಡ್ಡಿಗೆ ನಿರ್ಬಂಧಿಸಿದ ನ್ಯಾಯಾಲಯ | Y S Sharmila
Published on: 

ಬೆಂಗಳೂರು: ಮಾಜಿ ಸಿಎಂ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್.ಜಗನ್​ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ಶರ್ಮಿಳಾ ರೆಡ್ಡಿ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಬೆಳವಣೆಯೊಂದರಲ್ಲಿ ಸಹೋದರಿ ಶರ್ಮಿಳಾ ಅವರಿಗೆ ಯಲಹಂಕದ ಬಂಗಲೆ ಪ್ರವೇಶಿಸದಂತೆ ದೇವನಹಳ್ಳಿಯಲ್ಲಿರುವ ಹಿರಿಯ ಸಿವಿಲ್ ನ್ಯಾಯಾಲಯ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸಹೋದರಿ ಶರ್ಮಿಳಾ ಬೆಂಗಳೂರಿನ ಯಲಹಂಕದ ಬಂಗಲೆ ಪ್ರವೇಶಿಸದಂತೆ ತಡೆ ಕೋರಿ ಸಿಲಿಕಾನ್ ಬಿಲ್ಡರ್ಸ್ ಲಿಮಿಟೆಡ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ, ಶರ್ಮಿಳಾ ಅವರು ವಿವಾದಿತ 'ಯಲಹಂಕ ಬಂಗಲೆ' ಆಸ್ತಿಯೊಳಗೆ ಪ್ರವೇಶಿಸದಂತೆ ಅಥವಾ ಅದರ ಸ್ವಾಧೀನದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ಬಂಧಿಸಿ ಆದೇಶ ನೀಡಿದೆ. ಮತ್ತು ಡಿ. 19ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.

Also Read
ಪ್ರಧಾನಿಯಾದ ಬಳಿಕ ಮೊದಲ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಬಾಲೇಂದ್ರ ಶಾ: ನಾಳೆ ಮೋದಿ ಜೊತೆ ಮಾತುಕತೆ | Balendra Shah
ಅಣ್ಣ-ತಂಗಿ ನಡುವೆ ಆಸ್ತಿ ವಿವಾದ: ಯಲಹಂಕ ಬಂಗಲೆ ಪ್ರವೇಶಿಸದಂತೆ ವೈಎಸ್ ಶರ್ಮಿಳಾ ರೆಡ್ಡಿಗೆ ನಿರ್ಬಂಧಿಸಿದ ನ್ಯಾಯಾಲಯ | Y S Sharmila

ಇನ್ನೂ ಶರ್ಮಿಳಾ ರೆಡ್ಡಿ ತಮ್ಮ ಮಗಳು ಅಂಜಿಲಿ ವಿವಾಹ ಸಿದ್ಧತೆಯ ಭಾಗವಾಗಿ ಭಾನುವಾರ ಯಲಹಂಕ ಬಂಗಲೆಗೆ ಹೋಗಲು ಸಿದ್ಧತೆ ನಡೆಸಿದ್ದರು. ಈ ವಿಷಯ ತಿಳಿದ ಜಗನ್, ಬಂಗಲೆ ಪ್ರವೇಶಿಸದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು ಎನ್ನಲಾಗಿದೆ.

ವಾಸ್ತವ ಪ್ರಕಾರ, ಶರ್ಮಿಳಾ ತಮ್ಮ ಪುತ್ರಿಯ ವಿವಾಹವನ್ನು ಇದೇ ಬಂಗಲೆಯಲ್ಲಿ ನಡೆಸಬೇಕೆಂದು ಬಯಸಿದ್ದರು ಎನ್ನಲಾಗಿದೆ. ಆಮಂತ್ರಣ ಪತ್ರಿಕೆಗಳನ್ನು ಸಹ ಅದಕ್ಕೆ ಅನುಗುಣವಾಗಿ ಮುದ್ರಿಸಲಾಗಿತ್ತು. ಆದರೆ ಅಣ್ಣ ಜಗನ್ ಮೋಹನ್ ರೆಡ್ಡಿ ಅವರು ಭದ್ರತಾ ಕಾರಣಗಳ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಂತಿಮವಾಗಿ ವಿವಾಹ ಸ್ಥಳವನ್ನು ಬದಲಾಯಿಸಲಾಗಿದೆ (ಏಜೆನ್ಸೀಸ್).