ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ; ಬದ್ಧವೈರಿಗಳಾದ ಡಿಎಂಕೆ-ಎಐಎಡಿಎಂಕೆ ಮೈತ್ರಿ ಸರ್ಕಾರ ರಚನೆ ಗುಸುಗುಸು | DMK-AIADMK

ದಳಪತಿ ವಿಜಯ್, ಎಂ.ಕೆ.ಸ್ಟಾಲಿನ್ ಹಾಗೂ ಎಡಪ್ಪಾಡಿ ಪಳನಿಸ್ವಾಮಿ
ದಳಪತಿ ವಿಜಯ್, ಎಂ.ಕೆ.ಸ್ಟಾಲಿನ್ ಹಾಗೂ ಎಡಪ್ಪಾಡಿ ಪಳನಿಸ್ವಾಮಿ
Published on
ಚೆನ್ನೈ: ಇಂದು(ಮೇ 07) ನಿಗದಿಯಾಗಿದ್ದ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಪ್ರಮಾಣವಚನ ಸಮಾರಂಭ ವಿಳಂಬವಾಗುವ ಸಾಧ್ಯತೆ ಇದ್ದು, ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ(DMK-AIADMK) ತಮ್ಮ ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿವೆ ಎಂಬ ಬಲವಾದ ಗುಸುಗುಸು ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಚುನಾವಣೆಯಲ್ಲಿ 108 ಗೆದ್ದು ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿರುವ ಟಿವಿಕೆ, ಕಾಂಗ್ರೆಸ್ ಸೇರಿ ಸಣ್ಣಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ. ಮತ್ತು ರಾಜ್ಯಪಾಲರ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಆದರೆ ರಾಜ್ಯಪಾಲರು 118 ಸದಸ್ಯರ ಬೆಂಬಲವನ್ನು ತೋರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಈ ಎಲ್ಲದರ ನಡುವೆ ಟಿವಿಕೆ ಜೊತೆ ಕಾಂಗ್ರೆಸ್ ಅಷ್ಟೇ ಮೈತ್ರಿ ಮಾಡಿಕೊಂಡಿದ್ದು, ಎಡಪಕ್ಷಗಳು ಮತ್ತು ಮುಸ್ಲಿಂ ಲೀಗ್​ನ 6 ಸಂಸದರು ನಾವು ಡಿಎಂಕೆ ಬಿಟ್ಟು ಹೋಗಲ್ಲ ಎಂದು ಹೇಳಿದ್ದು, ವಿಸಿಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಹಿನ್ನೆಲೆ ವಿಜಯ್ ಸರ್ಕಾರ ರಚಿಸುತ್ತಾರಾ? ಎಂಬ ಅನಿಶ್ಚಿತತೆ ಮುಂದುವರಿದಿದೆ.
ಇದರ ಮಧ್ಯ ತಮಿಳುನಾಡಿನಾದ್ಯಂತ ಬುಧವಾರ ರಾತ್ರಿ ಕಾಳ್ಗಿಚ್ಚಿನಂತೆ ಹರಿದಾಡಿದ ಸುದ್ದಿ ಅಂದ್ರೆ ಅದು ಬದ್ಧವೈರಿಗಳಾದ ಡಿಎಂಕೆ-ಎಐಎಡಿಎಂಕೆ ಒಟ್ಟಾಗಿ ಸರ್ಕಾರ ರಚಿಸಲಿವೆ ಎನ್ನುವುದು. ಚುನಾವಣೆಯಲ್ಲಿ ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿದೆ. ಈ ಎರಡು ಪಕ್ಷಗಳಿಗೂ ಸರಳ ಬಹುಮತಕ್ಕೆ 12 ಸ್ಥಾನಗಳ ಕೊರತೆಯಿದೆ.
ಎಐಎಡಿಎಂಕೆಯ ಮಿತ್ರ ಪಕ್ಷ ಪಿಎಂಕೆ ಮತ್ತು ಅದರ ಪ್ರತಿಸ್ಪರ್ಧಿ ವಿಸಿಕೆ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು, ಈ ವದಂತಿಯ ಮೈತ್ರಿಕೂಟದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಒಂದು ವೇಳೆ ಮೈತ್ರಿಕೂಟ ನಿಜವಾದರೆ, ಎಐಐಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆದ್ರೆ, ಡಿಎಂಕೆಯ ಒಬ್ಬರು ಡಿಸಿಎಂ ಆಗಲಿದ್ದಾರೆ ಎನ್ನಲಾಗಿದೆ. ಆದರೆ ಎರಡು ಪಕ್ಷಗಳ ನಾಯಕರು ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net