ವಿಜಯ್ ಸಿಎಂ ಆದರೆ, ವಿಪಕ್ಷ ನಾಯಕ ಯಾರಗಬಹುದು ಎಂದು ಚರ್ಚೆ ಎದ್ದಿದೆ. ಕಳೆದ ಐದು ವರ್ಷಗಳ ಕಾಲ ದ್ರಾವಿಡ ಮಾಡಲ್ ಹೆಸರಲ್ಲಿ ಅಧಿಕಾರವನ್ನು ನಡೆಸಿದ್ದ ಡಿಎಂಕೆ, ಕಡಿಮೆ ಆಡಳಿತ ವಿರೋಧಿ ಅಲೆಯ ನಡುವೆಯೂ ಟಿವಿಕೆಯ ಅರ್ಭಟಕ್ಕೆ ಎರಡನೇ ಸ್ಥಾನಕ್ಕೆ ಕುಸಿದಿದ್ದು, ವಿಪಕ್ಷದಲ್ಲಿ ಕೂರುವಂತಾಗಿದೆ. ಜೊತೆಗೆ ಸ್ವತಃ ಸಿಎಂ ಸ್ಟಾಲಿನ್ ಅವರೇ, ತಮ್ಮ ಕ್ಷೇತ್ರವಾದ ಕೊಳತ್ತೂರಿನಲ್ಲಿ ಟಿವಿಕೆ ಅಭ್ಯರ್ಥಿ ಎದುರು ಸೋತಿದ್ದಾರೆ.