Vladimir Putin | ಭಾರತದ ದೃಢ ನಿಲುವನ್ನು ಜಗತ್ತೇ ನೋಡಿದೆ..ಮೋದಿ ಒತ್ತಡಕ್ಕೆ ಮಣಿಯುವ ವ್ಯಕ್ತಿ ಅಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್​

Vladimir Putin | ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Vladimir Putin | ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮೋದಿ ಒತ್ತಡಕ್ಕೆ ಮಣಿಯುವ ವ್ಯಕ್ತಿ ಅಲ್ಲ, ಭಾರತದ ದೃಢ ನಿಲುವನ್ನು ಇಡೀ ಜಗತ್ತು ನೋಡಿದೆ ಮತ್ತು ರಾಷ್ಟ್ರವು ಅದರ ನಾಯಕತ್ವದ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು.
ಗುರುವಾರ ಭಾರತಕ್ಕೆ ಎರಡು ದಿನಗಳ ಭೇಟಿ ನೀಡುವ ಮುನ್ನ ಇಂಡಿಯಾ ಟುಡೇ ಗ್ರೂಪ್‌ನ ಅಂಜನಾ ಓಂ ಕಶ್ಯಪ್ ಮತ್ತು ಗೀತಾ ಮೋಹನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪುಟಿನ್​, ರಷ್ಯಾ ಮತ್ತು ಭಾರತ ನಡುವಿನ ದ್ವಿಪಕ್ಷೀಯ ವಹಿವಾಟು ಶೇ. 90 ಕ್ಕೂ ಹೆಚ್ಚು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ತಮ್ಮ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ತುಂಬಾ ಸಂತೋಷವಾಗಿದೆ ಎಂದಿರುವ ಪುಟಿನ್​, ಭಾರತದಲ್ಲಿ ನಡಯಲಿರುವ ತಮ್ಮ ಮುಂದಿನ ಸಭೆಯನ್ನು ಎದುರು ನೋಡುತ್ತಿದ್ದೇನೆ ಎಂದಿರುವ ಪುಟಿನ್​, ಭಾರತ-ರಷ್ಯಾ ಸಹಕಾರದ ವಿಶಾಲ ವ್ಯಾಪ್ತಿಯನ್ನು ಗಮನಿಸಿದರೆ ಚರ್ಚಿಸಲು ಬಹಳಷ್ಟು ವಿಷಯಗಳಿವೆ ಎಂದು ತಿಳಿಸಿದರು. ಸ್ವಾತಂತ್ರ್ಯದ ಬಳಿಕ ಭಾರತದ ಪ್ರಗತಿಯನ್ನು ಶ್ಲಾಘಿಸಿದ ರಷ್ಯಾ ಅಧ್ಯಕ್ಷರು, ಕೇವಲ 77 ವರ್ಷಗಳ ಕಡಿಮೆ ಅವಧಿಯಲ್ಲಿ, ದೇಶ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ ಎಂದರು.

ಕಾರ್​ ಸವಾರಿ...

ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಹೆಚ್ಚು ಚರ್ಚೆಯಾದ ಪ್ರಧಾನಿ ಮೋದಿ ಜೊತೆಗಿನ ಕಾರು ಸವಾರಿ ಬಗ್ಗೆ ಮಾತನಾಡಿದ ಪುಟಿನ್​, ಅದು ನನ್ನ ಕಲ್ಪನೆ, ನಮ್ಮ ಸ್ನೇಹದ ಸಂಕೇತವಾಗಿತ್ತು ಎಂದು ಹೇಳಿದರು. ಅದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿರಲಿಲ್ಲ. ನಾವು ಸಭೆಯ ಬಳಿಕ ಹೊರಗೆ ಹೋದೆವು, ನನ್ನ ಕಾರು ಅಲ್ಲಿತ್ತು, ಒಟ್ಟಿಗೆ ಸವಾರಿ ಮಾಡೋಣ ಎಂದು ಮೋದಿಯವರಿಗೆ ಸೂಚಿಸಿದೆ. ದಾರಿಯುದ್ದಕ್ಕೂ ಮಾತನಾಡಿದೆವು, ಚರ್ಚಿಸಲು ಯಾವಾಗಲೂ ಏನಾದರೂ ಇರುತ್ತದೆ ಎಂದು ಹೇಳಿದರು.

ರಷ್ಯಾ-ಭಾರತ ಒಪ್ಪಂದಗಳು

ದೆಹಲಿ ಭೇಟಿಯ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತ ಹಲವು ಒಪ್ಪಂದಗಳಿಗೆ ಸಹಿ ಹಾಕಲು ಸಿದ್ಧತೆ ನಡೆಸುತ್ತಿರುವಾಗ, ಕೆಲವು ಪ್ರಮುಖ ಘೋಷಣೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪುಟಿನ್​, ಭಾರತವು ಶೇ. 7.7 ರಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಅದ್ಭುತ ದೇಶ. ಇದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ರಾಷ್ಟ್ರವೇ ಹೆಮ್ಮೆಪಡಬಹುದಾದ ಸಾಧನೆಯಾಗಿದೆ ಎಂದರು.
ಘೋಷಣೆಗಳ ಬಗ್ಗೆ ಗುಟ್ಟು ಬಿಟ್ಟು ಕೊಡದ ಪುಟಿನ್​, ಮುಂದುವರಿದ ತಂತ್ರಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಂತೆ ಎರಡೂ ದೇಶಗಳು ಸಮಗ್ರ ಸಹಕಾರ ಯೋಜನೆಯನ್ನು ಹೊಂದಿವೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net