Sonia Gandhi | ದೆಹಲಿ ವಾಯು ಮಾಲಿನ್ಯ; ನನ್ನಂತಹ ವೃದ್ಧರಿಗೂ ತೊಂದರೆಯಾಗುತ್ತಿದೆ ಎಂದ ಸೋನಿಯಾ ಗಾಂಧಿ

Sonia Gandhi | ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ
Sonia Gandhi | ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ
Published on
ದೆಹಲಿ: ರಾಜಧಾನಿಯಲ್ಲಿನ ವಾಯು ಮಾಲಿನ್ಯದ ಕುರಿತು ಗುರುವಾರ (ಡಿ.4) ಕೇಂದ್ರ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಸಮಸ್ಯೆಯನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ದಿಂದಾಗಿ ಮಕ್ಕಳು ಮತ್ತು ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದರು. 
ವಾಯು ಮಾಲಿನ್ಯದ ಸಮಸ್ಯೆಯ ಬಗ್ಗೆ ಏನನ್ನಾದರೂ ಮಾಡುವುದು ಸರ್ಕಾರದ ಪ್ರಮುಖ ಜವಾಬ್ದಾರಿ, ಇದರಿಂದಾಗಿ ಮಕ್ಕಳು ಸಾಯುತ್ತಿದ್ದಾರೆ, ನನ್ನಂತಹ ವೃದ್ಧರಿಗೂ ಇದು ತುಂಬಾ ತೊಂದರೆಯನ್ನುಂಟುಮಾಡಿದೆ. ಉಸಿರಾಡುವುದು ಕಷ್ಟವಾಗಿದೆ. ಈ ವಿಷಯದಲ್ಲಿ ನನಗೆ ಅನಿಸಿದ್ದನ್ನು ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ಲೇಖನವನ್ನು ಸಹ ಬರೆದಿರುವುದಾಗಿ ತಿಳಿಸಿದರು. 
ಸೋನಿಯಾ ಗಾಂಧಿ ಪಕ್ಕದಲ್ಲಿದ್ದ ವಯನಾಡ್​ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮಾತನಾಡಿದ್ದು, ವಾಯು ಮಾಲಿನ್ಯದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ಪ್ರತಿ ವರ್ಷವೂ ಹದಗೆಡುತ್ತಲೇ ಇದೆ, ಆದರೆ ಸರ್ಕಾರ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ. ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಪ್ರಿಯಾಂಕಾ ಗಾಂಧಿ, ಎಲ್ಲಾ ವಿರೋಧ ಪಕ್ಷಗಳು ಈ ವಿಷಯವಾಗಿ ಕೇಂದ್ರ ಸರ್ಕಾರದೊಂದಿಗೆ ನಿಂತಿವೆ ಎಂದು ಹೇಳಿದರು. ನಾವು ಹವಾಮಾನವನ್ನು ಆನಂದಿಸಲು ಸಾಧ್ಯವೆ..? ಪ್ರಧಾನಿ ಮೋದಿ ಹೊರಗೂ ಕೂಡ ನೋಡಬೇಕು. ಸೋನಿಯಾ ಗಾಂಧಿ ಅವರು ಹೇಳಿದಂತೆ, ಮಕ್ಕಳು ಮತ್ತು ವೃದ್ಧರು ಈ ಸಮಸ್ಯೆಯಿಂದ ತುಂಬಾ ಬಳಲುತ್ತಿದ್ದಾರೆ. ಪ್ರತಿ ವರ್ಷ ಪರಿಸ್ಥಿತಿ ಹದಗೆಡುತ್ತಿದೆ, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ರಾಜಕೀಯ ವಿಷಯವಲ್ಲ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹದಗೆಡುತ್ತಲೇ ಇದ್ದು, ಕಳಪೆ ಮತ್ತು ತುಂಬಾ ಕಳಪೆ ಮಟ್ಟದ ಗಾಳಿ ಬೀಸುತ್ತಿದೆ. ಗುರುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಓವರ್ ಎಕ್ಯೂಐ ಸ್ವಲ್ಪ ಸುಧಾರಿಸಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಒದಗಿಸಿದ ದತ್ತಾಂಶದ ಪ್ರಕಾರ, 299 ರಲ್ಲಿ ಕಳಪೆ ವಿಭಾಗದಲ್ಲಿ ದಾಖಲಾಗಿದೆ. ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ದೆಹಲಿಯ ಪರಿಸ್ಥಿತಿ ಸುಧಾರಿಸಿತ್ತು. ಆದರೆ ಡಿಸೆಂಬರ್ 2 ರಂದು ವಾಯು ಗುಣಮಟ್ಟ ಸೂಚ್ಯಂಕ ಮತ್ತೆ ತುಂಬಾ ಕಳಪೆ ಮಟ್ಟಕೆ ಇಳಿದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net