

ನವದೆಹಲಿ: ಚುನಾವಣಾ ಆಯೋಗ ದೇಶದಲ್ಲಿ ನಡೆಸುತ್ತಿರುವ ಮತದಾರರ ತೀವ್ರ ವಿಶೇಷ ಪಟ್ಟಿ ಪರಿಷ್ಕರಣೆ (SIR) ಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧಿಸುತ್ತಿದ್ದು, ಈಗ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳವನ್ನು ತಲುಪಿದೆ.
ಪ್ರತಿಭಟನೆ ಸಂದರ್ಭದಲ್ಲಿ, ಮಹಿಳೆಯೊಂದಿಗೆ, ಅದರಲ್ಲೂ ವರದಿಗಾರಿಕೆಯಲ್ಲಿ ತೊಡಗಿದ್ದ, ಮಹಿಳಾ ಪತ್ರಕರ್ತೆಯರೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಿರುವ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಎತ್ತಿಕೊಂಡಿದೆ.
ಈ ಅರ್ಜಿ ವಿಚಾರಣೆ ಪ್ರಾರಂಭಿಸಿದ ನ್ಯಾಯಪೀಠ, ಸ್ಥಳದಲ್ಲಿ ವರದಿ ಮಾಡುತ್ತಿದ್ದವರ ಮೇಲೆ ಪೊಲೀಸರು ದೌರ್ಜನ್ಯ ಎಸೆಗಿದ್ದಾರೆ. ಅಸಭ್ಯವಾಗಿ ಸ್ಪರ್ಶಸಿದ್ದಾರೆ ಮತ್ತು ಅಮಾನವೀಯವಾಗಿ ನಡೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ನಿಮ್ಮ ಉತ್ತರವೇನೆಂದು ನ್ಯಾಯಪೀಠ ಪ್ರಶ್ನಿಸಿದೆ.
ಆಗ, ಭಾರತ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ, ಇವತ್ತಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಪರಿಭಾಷೆ ಬದಲಾಗಿದೆ. ಮೈಕ್ ಹಿಡಿದು ನಿಂತವರೆಲ್ಲಾ, ತಮ್ಮನ್ನು ತಾವು ಸ್ವತಂತ್ರ ಪತ್ರಕರ್ತರೆಂದು ಕರೆದುಕೊಳ್ಳುತ್ತಿದ್ದಾರೆಂದು ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ದಿನ ಹಾಜರಿದ್ದ ಅರ್ಧಕ್ಕಿಂತ ಹೆಚ್ಚಿನ ಸ್ವತಂತ್ರ ಪತ್ರಕರ್ತರು, ಅಸಲಿ ಪತ್ರಕರ್ತರೇ ಅಲ್ಲ, ಅವರು ಕೇವಲ ರೀಲ್ ತಯಾರಕರು ಎಂದು ಜರಿದಿದ್ದಾರೆ.
ಆದರೆ, ಯಾರೇ ಆಗಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸರ್ಕಾರ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಅಲ್ಲಿದ್ದವರೆಲ್ಲರೂ ಪತ್ರಕರ್ತರಲ್ಲ ಎನ್ನುವುದು ನನ್ನ ವಾದವಾಗಿದೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಅದೇ ರೀತಿ ದೆಹಲಿ ಪೊಲೀಸ್ನಲ್ಲಿರುವ ಮಹಿಳಾ ಸಿಬ್ಬಂದಿಗಳ ಮೇಲೆ ಪ್ರತಿಭಟನಾಕಾರರು ಹಲ್ಲೆ, ಲೈಂಗಿಕ ಕಿರುಕುಳ ನೀಡಿದ್ದಾರೆ. ನಾವಿಲ್ಲಿ ಹೆಣ್ಣಿನ ಮೇಲೆ ನಡೆದಿರುವ ದೌರ್ಜನ್ಯವನ್ನು ಗುರಿಯಾಗಿಸಿ ವಿಚಾರಣೆ ನಡೆಸಬೇಕೇ ಹೊರತು ಯಾರ ಮೇಲೆ ಹಲ್ಲೆ ನಡೆದಿದೆ ಎಂಬ ಆಧಾರದಲ್ಲಿ ವಿಚಾರಣೆ ನಡೆಯುಬಾರದು ಎಂದಿದ್ದಾರೆ.
ಕೆಲ ಮಹಿಳಾ ಪತ್ರಕರ್ತೆಯರು ಎಸಿಪಿ ಭಗತ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದರು. ಆದರೆ, ಆ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರಿಗೆ ಏನು ಶಿಕ್ಷೆಯಾಗಿದೆ? ಆ ಆರೋಪ ಮಾಡಿದ ಪತ್ರಕರ್ತೆಯರ ಮೇಲೇ ಏನು ತೆಗೆದುಕೊಳ್ಳಲಾಗಿದೆ? ಎಂದು ತುಷಾರ್ ಮೆಹ್ತಾ ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ, ಬಿಜೆಪಿ ವಕ್ತಾರ, ಗೌರವ್ ಭಾಟಿಯಾ, ಕಾಂಗ್ರೆಸ್ ತನ್ನ ಪ್ರತಿಭಟನೆ ವೇಳೆ ಲೋಕಸಭಾ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಗರ್ಭಿಣಿಯಾಗಿದ್ದ ಒಬ್ಬ ಪತ್ರಕರ್ತೆಯನ್ನು ಎಳೆದು ಬಿಸಾಕಿರುವ ಘಟನೆ ನಡೆದಿದೆ. ಹಾಗೆಯೇ ದೆಹಲಿ ಮಹಿಳಾ ಪೊಲೀಸರ ಜತೆ ಪ್ರತಿಭಟನಾಕಾರರು ಅನುಚಿತವಾಗಿ ವರ್ತಿಸಿದ್ದಾರೆಂದು ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ, (ಏಜೆನ್ಸೀಸ್).