ಡಿಲಿಮಿಟೇಷನ್​ಗೆ ಎನ್​ಸಿಪಿ(ಎಸ್​ಪಿ) ಬೆಂಬಲ ದುರದೃಷ್ಟಕರ: ಬಿಜೆಪಿಯ ಎಲ್ಲಾ ಗೆಲುವು ಅರ್ಹತೆಯಿಂದ ಬಂದಿಲ್ಲ: ಸಂಜಯ್ ರಾವತ್ ಕಿಡಿ | Sanjay Raut

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣಾ ಮಸೂದೆಗೆ ಎನ್​ಸಿಪಿ(ಎಸ್​ಪಿ) ಬೆಂಬಲ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, ಇದು ದುರದೃಷ್ಟಕರ ಮತ್ತು ಏಕಪಕ್ಷೀಯ ನಡೆಯಯಾಗಿದ್ದು, ಜನತೆ ಅದನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್
Published on: 

ಮುಂಬೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣಾ ಮಸೂದೆಗೆ ಎನ್​ಸಿಪಿ(ಎಸ್​ಪಿ) ಬೆಂಬಲ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್, ಇದು ದುರದೃಷ್ಟಕರ ಮತ್ತು ಏಕಪಕ್ಷೀಯ ನಡೆಯಯಾಗಿದ್ದು, ಜನತೆ ಅದನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣಾ ಮಸೂದೆಯು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿ ಕೊಲ್ಲುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಬಲವರ್ಧನೆಯು ಮಹಾರಾಷ್ಟ್ರ ಮತ್ತು ಮರಾಠಿ ಜನರ ವಿರುದ್ಧದ ದ್ರೋಹವಾಗಿದ್ದು, ಇದನ್ನು ಜನ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಡಿಲಿಮಿಟೇಷನ್ ಬಿಜೆಪಿಯ ಪಿತೂರಿ ಎಂದ ರಾವತ್, ಸಂಸದರ ಸಂಖ್ಯೆಯನ್ನು 543 ರಿಂದ 806 ಕ್ಕೆ ಏರಿಸಿ, ನಂತರ ತಮ್ಮ ಇಚ್ಛೆಯಂತೆ ಕ್ಷೇತ್ರ ಮರುವಿಂಗಡಣೆ ಮಾಡುವುದು. ಇದು ಜನರ ಹಕ್ಕುಗಳನ್ನು ಶಾಶ್ವತವಾಗಿ ಕಸಿದುಕೊಳ್ಳುವ ಪ್ರಯತ್ನವಾಗಿದೆ. ಇದೊಂದು ಬಿಜೆಪಿಯ ಪಿತೂರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Also Read
ಕೇಂದ್ರ ಸರ್ಕಾರಕ್ಕೆ ಆನೆಬಲ; ತೀವ್ರವಾಗಿ ವಿರೋಧಿಸಿದ್ದ ಡಿಲಿಮಿಟೇಷನ್ ಪ್ರಕ್ರಿಯೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ವಿಪಕ್ಷ ಡಿಎಂಕೆ | DMK
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್

ಮುಂದುವರೆದು, ಬಿಜೆಪಿಯ ಎಲ್ಲಾ ಗೆಲುವುಗಳು ಅರ್ಹತೆಯ ಆಧಾರದ ಮೇಲಾಗಿಲ್ಲ ಎಂದ ಅವರು, 2014 ರಲ್ಲಿ ಸುಳ್ಳು ಹೇಳುವ ಮೂಲಕ ಜನರಿಗೆ ವಂಚಿಸಿ ಬಿಜೆಪಿ ಗೆದ್ದಿದೆ. 2024 ರಲ್ಲಿ ಇವಿಎಂ ಹಗರಣ ನಡೆಸಿ ಮತ ಮತ್ತು ಸ್ಥಾನಗಳನ್ನು ಕದ್ದಿದೆ ಎಂದು ಆರೋಪಿಸಿದ್ದಾರೆ. ಈಗ ವಿರೋಧ ಪಕ್ಷಗಳು ಅವರ ಬಣ್ಣ ಬಯಲು ಮಾಡಿದ ಬಳಿಕ, 2029ರ ಚುನಾವಣೆಗೆ ಮುನ್ನ ಡಿಲಿಮಿಟೇಷನ್ ಮೊರೆ ಹೋಗಿದೆ ಎಂದು ಟೀಕಿಸಿದ್ದಾರೆ.

ಈ ಡಿಲಿಮಿಟೇಷನ್ ಪ್ರಕ್ರಿಯೆಯು ದೇಶಕ್ಕೆ ಮತ್ತು ಅದರ ಒಕ್ಕೂಟ ವ್ಯವಸ್ಥೆಗೆ ಹಾನಿಕಾರಕವಾಗಿದೆ. ಈ ಮಸೂದೆ ಅಂಗೀಕಾರಗೊಂಡರೆ ದೇಶದಲ್ಲಿ ಸಂವಿಧಾನ, ಸ್ವಾತಂತ್ರ್ಯ ಅಥವಾ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ ಎಂದಿದ್ದಾರೆ.

Also Read
ದೇಶದ ಗಡಿಗಳಿಗಿಂತ ಲೋಕಸಭೆ ಕ್ಷೇತ್ರಗಳ ಗಡಿಯೇ ಬಿಜೆಪಿಗೆ ಮುಖ್ಯ: ಕೇಂದ್ರದ ಡಿಲಿಮಿಟೇಷನ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ | Akhilesh Yadav
ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್

ಎನ್‌ಸಿಪಿ (ಎಸ್‌ಪಿ) ಪಕ್ಷದ ಬೆಂಬಲದ ಬಗ್ಗೆ ಟೀಕಿಸಿದ ಅವರು, ಅವರು ಈ ಮಸೂದೆ ಬೆಂಬಲಿಸಲು ನಿರ್ಧರಿಸಿ ಘೋಷಿಸಿದ್ದರೆ, ಅದು ಆ ಪಕ್ಷದ ಸಿದ್ಧಾಂತಕ್ಕೆ ಮತ್ತು ಮಹಾರಾಷ್ಟ್ರಕ್ಕೆ ದುರದೃಷ್ಟಕರ ಸಂಗತಿ. ಬಿಜೆಪಿಯು ಎನ್‌ಸಿಪಿ ಮತ್ತು ಪವಾರ್ ಕುಟುಂಬವನ್ನು ಒಡೆಯಿತು. ಈಗ ಆ ಪಕ್ಷದೊಂದಿಗೆ ಕೈಜೋಡಿಸುವುದು ಎಂದರೆ ಆತ್ಮಗೌರವವನ್ನೇ ಅಡವಿಟ್ಟಂತೆ ಎಂದು ಕಿಡಿಕಾರಿದ್ದಾರೆ.

ನಿಮ್ಮ ಎಂಟು ಸಂಸದರು 'ಮಹಾ ವಿಕಾಸ್ ಅಘಾಡಿ'ಯ ಭಾಗವಾಗಿ ಗೆದ್ದಿದ್ದಾರೆ. ಅವರನ್ನು ಗೆಲ್ಲಿಸಲು ಬಿಜೆಪಿ ಸಹಾಯ ಮಾಡಿಲ್ಲ. ನೀವು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ ಮತ್ತು ಮಸೂದೆಯ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿದ್ದರೆ, ಮಹಾರಾಷ್ಟ್ರದ ಜನರು ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).