ಕಾರಿನ ಸನ್‌ರೂಫ್‌ನಲ್ಲಿ ನಿಂತು, ಅತಿಥಿಗಳಿಗೆ ಕೈಬೀಸುತ್ತಲೇ ಚಾಲಕನಿಗೆ ಒದ್ದ ಬಿಹಾರ ಶಾಸಕ ಅನಂತ್ ಸಿಂಗ್; ವಿಡಿಯೋ ವೈರಲ್..Anant Singh

 ಬಿಹಾರ ಶಾಸಕ ಅನಂತ್ ಸಿಂಗ್
ಬಿಹಾರ ಶಾಸಕ ಅನಂತ್ ಸಿಂಗ್
Published on: 
  • ಬಿಹಾರದ ಮೊಕಾಮಾ ಶಾಸಕ ಅನಂತ್ ಸಿಂಗ್ ಅವರು ತಮ್ಮ ಕಾರಿನಲ್ಲಿ ನಿಂತು ಶಾಸಕನಿಗೆ ಒದ್ದ ವಿಡಿಯೋ ವೈರಲ್.

  • ಪುತ್ರಿ ಶಿವಾಂಗಿ ಸಿಂಗ್ ಅವರ ಅದ್ಧೂರಿ ವಿವಾಹ ಮಹೋತ್ಸವದ ವೇಳೆ ನಡೆದ ಘಟನೆ.

  • ಕಾರಿನ ಸನ್‌ರೂಫ್ ಮೂಲಕ ಎದ್ದು ನಿಂತು ಅತಿಥಿಗಳನ್ನು ಸ್ವಾಗತಿಸುತ್ತ ಚಾಲಕನಿಗೆ ಒದ್ದಿರುವ ಶಾಸಕ.

ಪಾಟ್ನಾ: ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ ಅನಂತ್​ ಸಿಂಗ್ ಅವರು ಪುತ್ರಿ ಶಿವಾಂಗಿ ಸಿಂಗ್ ಮದುವೆ ಸಂಭ್ರಮದ ಮಧ್ಯೆ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಅತಿಥಿಗಳನ್ನು ಸ್ವಾಗತಿಸಲು ಕಾರಿನ ಸನ್​ರೂಫ್​ ಮೇಲೆ ನಿಂತು ಕೈ ಬೀಸುತ್ತಿರುವ ವೇಳೆ, ತನ್ನ ಚಾಲಕನಿಗೆ ಸಿಟ್ಟಿನಿಂದ ಒದೆಯುತ್ತಿರುವಂತೆ ಕಾಣುವ ವಿಡಿಯೋ ವೈರಲ್ ಆಗಿದೆ. ಶಾಸಕರ ಈ ಉದ್ಧಟತನಕ್ಕೆ ನೆಟ್ಟಿಗರು ಕೆಂಡಕಾರಿದ್ದಾರೆ,

ವೈರಲ್ ಆಗಿರುವ ವಿಡಿಯೋದಲ್ಲಿ, ಅನಂತ್ ಸಿಂಗ್ ಅವರು ಎಸ್‌ಯುವಿ ಕಾರಿನ ಸನ್‌ರೂಫ್ ಮೂಲಕ ಎದ್ದು ನಿಂತು, ತಮ್ಮ ವಾಹನದ ಸುತ್ತ ನೆರೆದಿದ್ದ ಜನರತ್ತ ಕೈಬೀಸಿ ನಮಸ್ಕರಿಸುತ್ತಿರುವುದು ಕಂಡುಬಂದಿದೆ. ಅತಿಥಿಗಳು ಮತ್ತು ಬೆಂಬಲಿಗರು ಅವರನ್ನು ನೋಡಲು ಮುಗಿಬೀಳುತ್ತಿದ್ದಂತೆ ಅನಂತ್​ ಸಿಂಗ್ ಜನರತ್ತ ಕೈಬೀಸುತ್ತಿದ್ದರು.

ಚಾಲಕನಿಗೆ ಒದ್ರ ಅನಂತ್​ ಸಿಂಗ್

ಆದರೆ, ಸನ್‌ರೂಫ್ ಮೂಲಕ ಎದ್ದು ನಿಂತ ಸ್ಥಿತಿಯಲ್ಲೇ ಶಾಸಕ ಅನಂತ್ ಸಿಂಗ್ ಅವರು ಚಾಲಕನ ಮೇಲೆ ತಾಳ್ಮೆ ಕಳೆದುಕೊಂಡು ಕಾಲಿನಿಂದ ಒದೆಯುತ್ತಿರುವಂತೆ ಕಂಡುಬಂದಿದೆ. ಈ ಅಸಾಮಾನ್ಯ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಗಮನ ಸೆಳೆದಿದ್ದು, ಅನೇಕ ನೆಟ್ಟಿಗರು ಶಾಸಕರ ಈ ವರ್ತನೆಯ ಬಗ್ಗೆ ಚರ್ಚಿಸುತ್ತಿದ್ದಾರೆ.

Also Read
ಅನಂತ್​ ಸಿಂಗ್​ ಮಗಳ ಮದುವೆಯಲ್ಲಿ ಹಣದ ಹೊಳೆ: ನೆಲದ ಮೇಲೆ ಬಿದ್ದ ನೋಟುಗಳನ್ನು ಗುಡಿಸಿ ಬಾಚಿಕೊಂಡ ಜನ; ವಿಡಿಯೋ ವೈರಲ್! Anant Singh
 ಬಿಹಾರ ಶಾಸಕ ಅನಂತ್ ಸಿಂಗ್

ಅನಂತ್ ಸಿಂಗ್ ಪುತ್ರಿಯ ಅದ್ಧೂರಿ ವಿವಾಹ

ಬಿಹಾರದ ಪಾಟ್ನಾ ಜಿಲ್ಲೆಯ ನಾದ್ವಾನ್ ಗ್ರಾಮದಲ್ಲಿ ನಡೆದ ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ಅದ್ಧೂರಿ ವಿವಾಹ ಸಂಭ್ರಮದ ನಡುವೆಯೇ ಈ ಘಟನೆ ನಡೆದಿದೆ. ನವೆಂಬರ್ 25ರಂದು ನಡೆದ ಈ ಮದುವೆಯು ತನ್ನ ಬೃಹತ್ ಪ್ರಮಾಣ ಮತ್ತು ಅದ್ಧೂರಿ ವ್ಯವಸ್ಥೆಗಳಿಂದಾಗಿ ಎಲ್ಲರ ಗಮನ ಸೆಳೆದಿತ್ತು. ಈ ಸಂಭ್ರಮದಲ್ಲಿ ಸಾವಿರಾರು ಅತಿಥಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದ್ದು, ಕಾರ್ಯಕ್ರಮದಲ್ಲಿ ಭರ್ಜರಿ ಭೋಜನ ಕೂಟ, ಕುದುರೆ ರೇಸ್ ಮತ್ತು ಐಷಾರಾಮಿ ವಾಹನಗಳ ವ್ಯವಸ್ಥೆ ಕೂಡ ಇತ್ತು.

'ಛೋಟೆ ಸರ್ಕಾರ್' ಎಂದೇ ಜನಪ್ರಿಯರಾಗಿರುವ ಅನಂತ್ ಸಿಂಗ್ ಅವರು ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಅಸಾಮಾನ್ಯ ಕ್ಷಣಗಳು ಮತ್ತು ವಿಡಿಯೋಗಳಿಂದಾಗಿ ಅವರ ಪುತ್ರಿಯ ಮದುವೆ ನಿರಂತರವಾಗಿ ಸುದ್ದಿಯಲ್ಲಿದೆ, (ಏಜೆನ್ಸೀಸ್).