ಬಾಮೈದರಿಬ್ಬರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಬಾವ: 500 ರೂ. ನೋಟುಗಳ 100 ಅಡಿ ಉದ್ದದ ಹಾರ, ಎಲ್ಲರ ಕಣ್ಣು ಕುಕ್ಕಿದ ಅದ್ಧೂರಿ ಮದ್ವೆ! Mathura Wedding

500 ರೂಪಾಯಿ ಮುಖಬೆಲೆಯ ನೋಟುಗಳಿಂದ ಸಿದ್ಧಪಡಿಸಲಾಗಿದ್ದ ಈ ಬೃಹತ್ ಹಾರಗಳು ಸುಮಾರು 100 ಅಡಿ ಉದ್ದವಿದ್ದು, ಅವುಗಳನ್ನು ಹಿಡಿದುಕೊಳ್ಳಲು ಹತ್ತಾರು ಜನರು ಹರಸಾಹಸ ಪಡಬೇಕಾಯಿತು.
Mathura Wedding
ಬಾಮೈದರಿಬ್ಬರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಬಾವ: 500 ರೂ. ನೋಟುಗಳ 100 ಅಡಿ ಉದ್ದದ ಹಾರ, ಎಲ್ಲರ ಕಣ್ಣು ಕುಕ್ಕಿದ ಅದ್ಧೂರಿ ಮದ್ವೆ! Mathura Wedding
Published on: 

ಮಥುರಾ: ಉತ್ತರ ಪ್ರದೇಶದ ಪವಿತ್ರ ನಗರಿ ಮಥುರಾದಲ್ಲಿ ನಡೆದ ಮದುವೆ ( Mathura Wedding ) ಸಮಾರಂಭವೊಂದು ದೇಶದ ಗಮನ ಸೆಳೆದಿದೆ. ಬಾವನೊಬ್ಬ ತನ್ನ ಇಬ್ಬರು ಬಾಮೈದರಿಗೆ ಬರೋಬ್ಬರಿ ತಲಾ 1 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಹಾರವನ್ನು ಹಾಕುವ ಮೂಲಕ ಇಡೀ ಊರಿಗೇ ಅಚ್ಚರಿ ಮೂಡಿಸಿದ್ದಾನೆ. ಮದುವೆಯ ಸಂಪ್ರದಾಯವಾದ 'ಘುಡ್‌ಚಡಿ' (ಕುದುರೆ ಸವಾರಿ) ಮೆರವಣಿಗೆಯ ವೇಳೆ ಈ ದುಬಾರಿ ಮತ್ತು ವಿಶೇಷ ಉಡುಗೊರೆಯನ್ನು ನೀಡಲಾಗಿದ್ದು, ಸದ್ಯ ಈ ಅದ್ಧೂರಿ ಮದುವೆ ಇಡೀ ಉತ್ತರ ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

500 ರೂಪಾಯಿ ಮುಖಬೆಲೆಯ ನೋಟುಗಳಿಂದ ಸಿದ್ಧಪಡಿಸಲಾಗಿದ್ದ ಈ ಬೃಹತ್ ಹಾರಗಳು ಸುಮಾರು 100 ಅಡಿ ಉದ್ದವಿದ್ದು, ಅವುಗಳನ್ನು ಹಿಡಿದುಕೊಳ್ಳಲು ಹತ್ತಾರು ಜನರು ಹರಸಾಹಸ ಪಡಬೇಕಾಯಿತು. ಬಾವ ಮತ್ತು ಬಾಮೈದರ ನಡುವಿನ ಈ ಪ್ರೀತಿ ಹಾಗೂ ಆಡಂಬರದ ಶೈಲಿಯನ್ನು ಕಂಡು ಜನರು ಬೆರಗಾಗಿದ್ದು, ಒಂದೇ ಬಾರಿಗೆ 2 ಕೋಟಿ ರೂಪಾಯಿ ಮೌಲ್ಯದ ನಗದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಎತ್ತುತ್ತಿದ್ದಾರೆ.

Also Read
ಕೊನೆಗೂ ಚಾಹಲ್​ಗೆ ಶುಗರ್ ಡ್ಯಾಡಿ ಸಿಕ್ಕಿದ್ರು... ಬಿಜೆಪಿ ಸೇರಿದ ಬೆನ್ನಲ್ಲೇ ಲೆಗ್​ ಸ್ಪಿನ್ನರ್​ ಕಾಲೆಳೆದ ಪ್ರಿಯಾಂಕಾ ಚತುರ್ವೇದಿ! Yuzvendra Chahal
Mathura Wedding

ಈ ವಿಶಿಷ್ಟ ಹಾಗೂ ಅದ್ಧೂರಿ ಘಟನೆ ನಡೆದಿರುವುದು ಮಥುರಾ ಜಿಲ್ಲೆಯ ಮಾಂಟ್ ಪ್ರದೇಶದ ಸುರೀರ್ ವ್ಯಾಪ್ತಿಯ ನಾಗ್ಲಾ ಫೋಂಡಾ ಎಂಬ ಗ್ರಾಮದಲ್ಲಿ. ಶನಿವಾರ ಗ್ರಾಮದಲ್ಲಿ ನಡೆದ ಇಬ್ಬರು ವರರ 'ಘುಡ್‌ಚಡಿ' ಮೆರವಣಿಗೆಯು ಈ ಕೋಟಿ ರೂಪಾಯಿಗಳ ನೋಟಿನ ಹಾರದಿಂದಾಗಿ ಇಡೀ ಪ್ರದೇಶದಲ್ಲಿ ಹಾಟ್ ಟಾಪಿಕ್ ಆಗಿ ಬದಲಾಗಿದೆ. ಇಬ್ಬರೂ ವರರು ತಲಾ ಒಂದು ಕೋಟಿ ರೂಪಾಯಿ ಮೌಲ್ಯದ ನೋಟಿನ ಹಾರಗಳನ್ನು ಕೊರಳಿಗೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದ ದೃಶ್ಯಗಳನ್ನು ಕಂಡು ಗ್ರಾಮಸ್ಥರು ಹಾಗೂ ಸಂಬಂಧಿಕರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ವೈರಲ್ ಆಗುತ್ತಿವೆ.

ನಾಗ್ಲಾ ಫೋಂಡಾ ಗ್ರಾಮದ ಯೋಗೇಂದ್ರ ಸಿಂಗ್ ಅವರ ಪುತ್ರ ಪ್ರಶಾಂತ್ ಮತ್ತು ಕುಶಾಲ್‌ಪಾಲ್ ಸಿಂಗ್ ಅವರ ಪುತ್ರ ಕಾನ್ಹಾ ರಾಘವ್ ಅವರ ವಿವಾಹವು ಶನಿವಾರ ಗೋವರ್ಧನದ ಕಲ್ಯಾಣ ಮಂಟಪವೊಂದರಲ್ಲಿ ಮುಡ್ಸೆರಾಸ್ ಗ್ರಾಮದ ಯುವತಿಯರೊಂದಿಗೆ ನಿಗದಿಯಾಗಿತ್ತು. ಮದುವೆಗೂ ಮುನ್ನ ನಡೆದ ಕುದುರೆ ಸವಾರಿ ಶಾಸ್ತ್ರದ ವೇಳೆ, ರಾಜಸ್ಥಾನದ ಕಾಮನ್ ಪ್ರದೇಶದ ನಂದೋಲಾ ಗ್ರಾಮದ ನಿವಾಸಿಯಾಗಿರುವ ಇವರ ಬಾವ ಯೋಗೇಶ್ ಕುಮಾರ್ ಅಲಿಯಾಸ್ ಭೂರಾ ಠಾಕೂರ್ ತಮ್ಮ ಮೈದುನರಿಗೆ ಸ್ಮರಣೀಯ ಉಡುಗೊರೆ ನೀಡಲು ನಿರ್ಧರಿಸಿದರು. ಅದರಂತೆ ಇಬ್ಬರೂ ವರರಿಗೆ ತಲಾ ಒಂದು ಕೋಟಿ ರೂಪಾಯಿ ಮೌಲ್ಯದ ಬೃಹತ್ ನೋಟಿನ ಹಾರಗಳನ್ನು ತೊಡಿಸಿ ಸಂಭ್ರಮಿಸಿದರು.

ಲಭ್ಯವಿರುವ ಮಾಹಿತಿಯ ಪ್ರಕಾರ, ಬಾಮೈದಾರಿಗೆ ತಲಾ 1 ಕೋಟಿ ರೂಪಾಯಿ ಮೌಲ್ಯದ ಹಾರ ಹಾಕಿದ ಬಾವ ಯೋಗೇಶ್ ಕುಮಾರ್ ಅವರು ತಮ್ಮ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದಾರೆ. ಇತ್ತ ವಿವಾಹವಾಗುತ್ತಿರುವ ಇಬ್ಬರು ಬಾಮೈದರು ದೊಡ್ಡ ಮಟ್ಟದ ಮಾರ್ಬಲ್ (ಅಮೃತಶಿಲೆ) ಶೋರೂಮ್ ನಡೆಸುತ್ತಿದ್ದು, ಎರಡೂ ಕುಟುಂಬಗಳು ಆರ್ಥಿಕವಾಗಿ ಅತ್ಯಂತ ಶ್ರೀಮಂತವಾಗಿವೆ. ಆದರೂ ಸಹ, ಬಾವನ ಈ 'ಕೋಟಿ' ಅಭಿಮಾನ ಎಲ್ಲರನ್ನೂ ದಂಗಾಗಿಸಿದ್ದು, ಸುತ್ತಮುತ್ತಲಿನ ಪ್ರತಿ ಮನೆಯಲ್ಲೂ ಇದೇ ವಿಷಯ ಚರ್ಚೆಯಾಗುತ್ತಿದೆ. ಕೆಲವರು "ಬಾವ ಎಂದರೆ ಹೀಗಿರಬೇಕು" ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇಷ್ಟೊಂದು ಬೃಹತ್ ಮೊತ್ತದ ನಗದು ಹಣವನ್ನು ಹೇಗೆ ಸಂಗ್ರಹಿಸಲಾಯಿತು ಮತ್ತು ಇಷ್ಟು ಉದ್ದದ ಹಾರವನ್ನು ಹೇಗೆ ತಯಾರಿಸಲಾಯಿತು ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Also Read
ಹಾವು ಕಚ್ಚಿ 3 ವರ್ಷ ಕಳೆದ್ರೂ ಮಾಯದ ಗಾಯ: ಇಡೀ ಕುಟುಂಬವನ್ನೇ ಬೀದಿಗೆ ತಂದ ಒಂದು ಸಣ್ಣ ನಿರ್ಲಕ್ಷ್ಯ, ಇದೊಂದು ಕಣ್ಣೀರ ಕಥೆ! Snakebite
Mathura Wedding

ಯೋಗೇಶ್ ಕುಮಾರ್ ಅವರು ತಮ್ಮ ಇಬ್ಬರು ಬಾಮೈದರಿಗೆ ಹಾಕಿದ ಪ್ರತಿಯೊಂದು ಹಾರವೂ ಬರೋಬ್ಬರಿ 100 ಅಡಿ ಉದ್ದವಿತ್ತು. ಈ ಎರಡೂ ಹಾರಗಳು ಎಷ್ಟು ಭಾರವಾಗಿದ್ದವು ಎಂದರೆ, ವರರ ಕೊರಳಿಗೆ ಹಾಕಿದ ನಂತರ ಅವು ನೆಲಕ್ಕೆ ತಾಗದಂತೆ ಹಿಡಿದುಕೊಳ್ಳಲು ಹಲವಾರು ಜನರ ಸಹಾಯ ಪಡೆಯಬೇಕಾಯಿತು. ವರರಿಬ್ಬರೂ ಮನೆಯ ಮಹಡಿಯ ಮೇಲೆ ನಿಂತು ಈ ಬೃಹತ್ ಹಾರಗಳನ್ನು ಸ್ವೀಕರಿಸಿದ್ದು, ಕೆಳಗೆ ನಿಂತಿದ್ದ ಜನರು ಹಾರಗಳನ್ನು ಎತ್ತಿ ಹಿಡಿದಿದ್ದರು. ಎರಡೂ ಹಾರಗಳಲ್ಲಿ ಕೇವಲ 500 ರೂಪಾಯಿ ನೋಟುಗಳನ್ನು ಬಳಸಲಾಗಿದ್ದು, ಪ್ರತಿಯೊಂದು ಹಾರದ ಒಟ್ಟು ಮೌಲ್ಯ ತಲಾ 1 ಕೋಟಿ ರೂಪಾಯಿಗಳಾಗಿತ್ತು ಎಂದು ಗ್ರಾಮಸ್ಥ ತೇಜ್‌ವೀರ್ ಸಿಂಗ್ ಖಚಿತಪಡಿಸಿದ್ದಾರೆ, (ಏಜೆನ್ಸೀಸ್​).