<---Microsoft Clarity tracking tag-->

ದೆಹಲಿ ಸಚಿವರಿಂದ ಕಪಾಳಮೋಕ್ಷ ಮಾಡಿಸಿಕೊಂಡವನ ಹಿನ್ನಲೆ ಬಟಾ ಬಯಲು: ಜಾಮೀನಿನ ಮೇಲಿದ್ದ ಈ ಸಾಹಿಬ್ ಸಿಂಗ್ ಮೊದಲು ಹಲ್ಲೆ ಮಾಡಿದ್ದು ಯಾರ ಮೇಲೆ ಗೊತ್ತಾ..? | Slapsman

ನವದೆಹಲಿ: ಭಾನುವಾರ ಇಲ್ಲಿನ ತಿಲಕ್ ನಗರದಲ್ಲಿ ರಸ್ತೆ ಪರಿಶೀಲನೆ ವೇಳೆ ದೆಹಲಿ ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ವರ್ಮಾ ಅವರಿಂದ ಕಪಾಳಮೋಕ್ಷಕ್ಕೊಳಗಾದ (Slapsman) ಸಾಹಿಬ್ ಸಿಂಗ್ ಎಂಬ ವ್ಯಕ್ತಿ, ಈ ಹಿಂದೆ ದೆಹಲಿ ಮಹಾನಗರ ಪಾಲಿಕೆ ನೈರ್ಮಲ್ಯ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದರು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.
ದೆಹಲಿ ಸಚಿವರಿಂದ ಕಪಾಳಮೋಕ್ಷ ಮಾಡಿಸಿಕೊಂಡವನ ಹಿನ್ನಲೆ ಬಟಾ ಬಯಲು
ದೆಹಲಿ ಸಚಿವರಿಂದ ಕಪಾಳಮೋಕ್ಷ ಮಾಡಿಸಿಕೊಂಡವನ ಹಿನ್ನಲೆ ಬಟಾ ಬಯಲು
Published on: 

ನವದೆಹಲಿ: ಭಾನುವಾರ ಇಲ್ಲಿನ ತಿಲಕ್ ನಗರದಲ್ಲಿ ರಸ್ತೆ ಪರಿಶೀಲನೆ ವೇಳೆ ದೆಹಲಿ ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ವರ್ಮಾ ಅವರಿಂದ ಕಪಾಳಮೋಕ್ಷಕ್ಕೊಳಗಾದ (Slapsman) ಸಾಹಿಬ್ ಸಿಂಗ್ ಎಂಬ ವ್ಯಕ್ತಿ, ಈ ಹಿಂದೆ ದೆಹಲಿ ಮಹಾನಗರ ಪಾಲಿಕೆ ನೈರ್ಮಲ್ಯ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದರು, ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.

ಜೂನ್ 2 ರಂದು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಂಸಿಡಿ ನೈರ್ಮಲ್ಯ ನೌಕರ ಧನ್ ಬಹದ್ದೂರ್ ನೀಡಿದ ದೂರಿನ ಆಧಾರದ ಮೇಲೆ ಈ ಹಿಂದಿನ ಪ್ರಕರಣ ದಾಖಲಾಗಿತ್ತು. ವ್ಯಕ್ತಿಗಳ ಗುಂಪೊಂದು ತಮ್ಮನ್ನು ಕಸ ಸಂಗ್ರಹಣೆ ವಾಹನದಿಂದ ಹೊರಗೆ ಎಳೆದು ಹಲ್ಲೆ ನಡೆಸಿದ್ದಾರೆ ಎಂದು ಧನ್ ಬಹದ್ದೂರ್ ದೂರು ನೀಡಿದ್ದರು.

ಇದನ್ನೂ ಓದಿ:ಗೋವುಗಳ ರಕ್ಷಣೆ ನಮ್ಮ ಹೊಣೆ: ಸಾಧು-ಸಂತರನ್ನ ಅವಮಾನಿಸಿದರೆ ಎಣಿಸುವುದು ಖಚಿತ ಎಂದ ಸಿಎಂ ಸುವೇಂದು ಅಧಿಕಾರಿ! | Suvendu Adhikari

ಎಫ್‌ಐಆರ್ ಪ್ರಕಾರ, ಬಹದ್ದೂರ್ ಅವರು ವಾರ್ಡ್ 103 ರ ಕಸ ಸಂಗ್ರಹಣೆ ವಾಹನದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾಗ, ಬೆಳಿಗ್ಗೆ 11 ರ ಸುಮಾರಿಗೆ ವಾಹನವು ಕೃಷ್ಣಪುರಿಯನ್ನು ತಲುಪಿತ್ತು. ಮನೆಯೊಂದರ ಎರಡನೇ ಮಹಡಿಯಿಂದ ಹುಡುಗಿಯೊಬ್ಬಳು ಕಸ ಎಸೆಯುತ್ತಿದ್ದಾಗ, ಕೆಳಗೆ ಮೋಟಾರ್ ಸೈಕಲ್ ಹೋಗುತ್ತಿದ್ದುದರಿಂದ ಸ್ವಲ್ಪ ಸಮಯ ಕಸ ಎಸೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದರು. ಬಳಿಕ ವಾಹನವು ಮುಂದೆ ಸಾಗಿತ್ತು. ಆದರೆ ಆ ಮನೆಯ ಯುವಕ ಹಾಗೂ ಇತರ ಕೆಲವರು ವಾಹನವನ್ನು ಹಿಂಬಾಲಿಸಿ ಬಂದು ಬಲವಂತವಾಗಿ ತಡೆದರು ಎಂದು ಬಹದ್ದೂರ್ ಹೇಳಿದ್ದಾರೆ. ಅವರು ತಮ್ಮನ್ನು ಹೊರಗೆ ಎಳೆದು, ಹಲ್ಲೆ ನಡೆಸಿ, ಎರಡು ಮೂರು ಗಲ್ಲಿಗಳ ಆಚೆಗೆ ಕರೆದೊಯ್ದರು, ಅಲ್ಲಿ ತಾವು ಪ್ರಜ್ಞೆ ತಪ್ಪಿದ್ದಾಗಿ ಬಹದ್ದೂರ್ ತಿಳಿಸಿದ್ದಾರೆ.

ದೂರಿನ ಪ್ರಕಾರ, ಬಹದ್ದೂರ್ ಅವರನ್ನು ನಂತರ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಮ್ಮ ಆರಂಭಿಕ ಹೇಳಿಕೆಯಲ್ಲಿ ಕರಣ್ ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದ ಅವರು, ಇತರ ದಾಳಿಕೋರರನ್ನು ಕಂಡರೆ ಗುರುತಿಸುವುದಾಗಿ ಹೇಳಿದ್ದರು. ತರುವಾಯ, ತನಿಖೆಯ ವೇಳೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಸಾಹಿಬ್ ಸಿಂಗ್ ಹಲ್ಲೆಯಲ್ಲಿ ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅವರ ಹೆಸರನ್ನು ತನಿಖೆಯ ಸಮಯದಲ್ಲಿ ಪ್ರಕರಣಕ್ಕೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read
ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್: 3 ದಿನಗಳ ಮುಷ್ಕರ ಮುಂದೂಡಿಕೆ! | Bank Strike
ದೆಹಲಿ ಸಚಿವರಿಂದ ಕಪಾಳಮೋಕ್ಷ ಮಾಡಿಸಿಕೊಂಡವನ ಹಿನ್ನಲೆ ಬಟಾ ಬಯಲು

ಬಹದ್ದೂರ್ ಅವರ ವೈದ್ಯಕೀಯ ದಾಖಲೆಯಲ್ಲಿ ದೈಹಿಕ ಹಲ್ಲೆಯಿಂದ ಉಂಟಾದ ಗಾಯಗಳನ್ನು ನಮೂದಿಸಲಾಗಿತ್ತು. ನಂತರ ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 126(2) ಮತ್ತು 3(5) ರ ಅಡಿಯಲ್ಲಿ ಎಫ್‌ಐಆರ್ ಸಂಖ್ಯೆ 215/2026 ಅನ್ನು ದಾಖಲಿಸಿದ್ದಾರೆ. ಆ ಪ್ರಕರಣದ ಆರೋಪಗಳು ಇನ್ನೂ ನ್ಯಾಯಾಲಯದಿಂದ ನಿರ್ಧಾರವಾಗಿಲ್ಲ.

ರಸ್ತೆ ಪರಿಶೀಲನೆ ವೇಳೆ ಸಾಹಿಬ್ ಸಿಂಗ್‌ಗೆ ಕಪಾಳಮೋಕ್ಷ

ಭಾನುವಾರ ತಿಲಕ್ ನಗರದಲ್ಲಿ ರಸ್ತೆ ಪರಿಶೀಲನೆ ವೇಳೆ ಸಚಿವ ವರ್ಮಾ ಅವರೊಂದಿಗೆ ಸಾಹಿಬ್ ಸಿಂಗ್ ಗಲಾಟೆಯಲ್ಲಿ ತೊಡಗಿದ ನಂತರ ಈ ಹಿಂದಿನ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದೆ. ರಸ್ತೆಯ ನಿರ್ಮಾಣದ ಗುಣಮಟ್ಟದ ಕುರಿತು ಸಚಿವ ವರ್ಮಾ ಅವರು ಸ್ಥಳೀಯ ಆಪ್ ಶಾಸಕ ಜರ್ನೈಲ್ ಸಿಂಗ್ ಅವರೊಂದಿಗೆ ವಾಗ್ದಾಳಿ ನಡೆಸುತ್ತಿದ್ದಾಗ ರಸ್ತೆಯನ್ನು ಪರಿಶೀಲಿಸುತ್ತಿದ್ದರು. ಶಾಸಕರೊಂದಿಗೆ ಕೆಲಸ ಮಾಡುವ ಸಾಹಿಬ್ ಸಿಂಗ್ ಈ ವಾಗ್ವಾದವನ್ನು ರೆಕಾರ್ಡ್ ಮಾಡುತ್ತಿದ್ದರು.

ಘಟನೆಯ ವೀಡಿಯೊದಲ್ಲಿ ವರ್ಮಾ ಅವರು ಸಾಹಿಬ್ ಸಿಂಗ್ ಅವರ ಫೋನ್ ಅನ್ನು ಕೆಳಗೆ ತಳ್ಳಿ ಕಪಾಳಕ್ಕೆ ಬಾರಿಸಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸುವ ಮೊದಲು ಅವರಿಬ್ಬರು ಪರಸ್ಪರ ಮುಖಾಮುಖಿಯಾಗುವುದು ಕಂಡುಬರುತ್ತದೆ.

ಘಟನೆಯ ಬಗ್ಗೆ ಸಾಹಿಬ್ ಸಿಂಗ್ ಹೇಳಿದ್ದೇನು..?

ಜರ್ನೈಲ್ ಸಿಂಗ್ ಅವರ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ತಾವು ಈ ವಾಗ್ವಾದವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದಾಗಿ ಸಾಹಿಬ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ. ರೆಕಾರ್ಡಿಂಗ್ ನಿಲ್ಲಿಸಲು ವರ್ಮಾ ತಮ್ಮ ಕೆನ್ನೆಗೆ ಹೊಡೆದಿದ್ದಾರೆ ಎಂದು ಅವರು ಹೇಳಿದರು ಮತ್ತು ಸಚಿವರ ಭದ್ರತಾ ಸಿಬ್ಬಂದಿ ಕೂಡ ತಮ್ಮನ್ನು ತಳ್ಳಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಭಾನುವಾರದ ಘಟನೆಗೆ ಸಂಬಂಧಿಸಿದಂತೆ ಸಾಹಿಬ್ ಸಿಂಗ್ ದೂರು ದಾಖಲಿಸಿದ್ದಾರೆ.

ಸಚಿವ ವರ್ಮಾ ಪ್ರತಿಕ್ರಿಯೆ ಹೀಗಿದೆ!...

ಆಪ್ ಶಾಸಕರ ಬೆಂಬಲಿಗರೊಬ್ಬರು ತಮ್ಮ ಕುಟುಂಬವನ್ನು ನಿಂದಿಸಿದ್ದರಿಂದ ತಾವು ಕೋಪದಿಂದ ಪ್ರತಿಕ್ರಿಯಿಸಿದ್ದಾಗಿ ವರ್ಮಾ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಈ ಘಟನೆ ನಡೆಯಬಾರದಿತ್ತು ಎಂದು ಸಚಿವರು ಹೇಳಿದ್ದಾರೆ. ಈ ಸಂಘರ್ಘ ರಾಜಕೀಯ ವಲಯದಲ್ಲಿ ಹೊಸ ಆರೋಪ ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದ್ದು, ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರು ವರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸದ್ಯ ಎರಡು ಕಡೆಗಾಳಿಂದ ದೂರುಗಳು ಬಂದಿದ್ದು, ಘಟನೆಗೆ ಕಾರಣವಾದ ಸನ್ನಿವೇಶಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net