
---Microsoft Clarity tracking tag-->

ಕೋಲ್ಕತ್ತಾ: ರಾಜ್ಯದಲ್ಲಿ ವಾತಾವರಣ ಬದಲಾಗಿದ್ದು, ಗೋಸಂರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಸಾಧು-ಸಂತರಿಗೆ ಅವಮಾನ ಮಾಡುವವರನ್ನು ಜೈಲಿಗಟ್ಟುವುದು ನಿಶ್ಚಿತ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ನೇತಾಜಿ ಇಂಡೋರ್ ಕ್ರೀಡಾಂಗಣದಲ್ಲಿ ಬಾಂಗುರ್ ಜಾಗರಣ ಮಂಚ ಆಯೋಜಿಸಿದ್ದ ಭಗವದ್ಗೀತೆ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅಧಿಕಾರಿ, ಧರ್ಮವನ್ನು ಅನುಸರಿಸುವಾಗ ಅಥವಾ ಪ್ರಚಾರ ಮಾಡುವಾಗ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
ಯಾವುದೇ ಹಿಂಜರಿಕೆಯಿಲ್ಲದೆ ಭಗವದ್ಗೀತೆಯನ್ನು ಪಠಿಸಿ ಮತ್ತು ಹಂಚಿ, ಹನುಮಾನ್ ಚಾಲೀಸಾವನ್ನು ಹಂಚಿ. ಹರೇ ಕೃಷ್ಣ ಮಂತ್ರವನ್ನು ಜಪಿಸಿ, ಶಂಖಗಳನ್ನು ಊದಿ, ಹೆದರಬೇಕಾದದ್ದು ಏನೂ ಇಲ್ಲ. ವಾತಾವರಣ ಬದಲಾಗಿದೆ. ಟೀಕೆ, ಸಿಖಾ (ಜುಟ್ಟು), ಧೋತಿ, ತುಳಸಿಯ ಸರ್ಕಾರ ಬಂದಿದೆ. ಗೋಮಾತೆ'ಯನ್ನು ರಕ್ಷಿಸುವ ಸರ್ಕಾರ ಇಲ್ಲಿದೆ ಎಂದು 11,000 ಜನರು ಒಟ್ಟಾಗಿ ಭಗವದ್ಗೀತೆಯನ್ನು ಪಠಿಸಿದ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇತ್ತೀಚೆಗೆ ಬಂಗಾಳಕ್ಕೆ ನೀಡಿದ ಭೇಟಿಯನ್ನು ಉಲ್ಲೇಖಿಸಿದ ಅಧಿಕಾರಿ, ಸಂತರು ಮತ್ತು ಧಾರ್ಮಿಕ ಮುಖಂಡರು ತಮ್ಮ ನಂಬಿಕೆಗಳನ್ನು ಪ್ರಚಾರ ಮಾಡಲು ಮುಕ್ತವಾಗಿರಬೇಕು ಎಂದು ಹೇಳಿದ್ದಲ್ಲದೆ, ರಾಜ್ಯದಲ್ಲಿ ಶಾಸ್ತ್ರಿ ಅವರ ಭಾವಚಿತ್ರಗಳು ಮತ್ತು ಪ್ರತಿಕೃತಿಗಳನ್ನು ಸುಟ್ಟವರ ವಿರುದ್ಧ ತಮ್ಮ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ:ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್: 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ! | Bank Strike
ಕಾಶ್ಮೀರ ಮಾಂಗೆ ಆಜಾದಿ (ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು) ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಆರೋಪಿಸಿ, ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆದವರ ವಿರುದ್ಧ ಜನರು ಒಗ್ಗಟ್ಟಿನಿಂದ ಮತ್ತು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ ಅಧಿಕಾರಿ, ಖಂಡಿತವಾಗಿಯೂ ಭಯಪಡಬೇಡಿ, ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಧೈರ್ಯ ತುಂಬಿದರು.
ಶನಿವಾರ ಶ್ರೀರಾಮಪುರದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ ಆಜಾದಿ ಹೇಳಿಕೆಯ ಕುರಿತು ವ್ಯಂಗ್ಯವಾಡಿದ ಸಿಎಂ ಅಧಿಕಾರಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಅವರು ಇಂತಹ ಹೇಳಿಕೆಗಳನ್ನು ನೀಡಿದರೆ, ರಾಷ್ಟ್ರವಾದಿಗಳು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎನ್ನುತ್ತಾ, ತಾವು ಒಬ್ಬ ಮುಖ್ಯಮಂತ್ರಿಯಾಗಿ ಅಲ್ಲ, ಬದಲಾಗಿ ಒಬ್ಬ ಸನಾತನಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಅಧಿಕಾರಿ ಹೇಳಿದರು.
ಹಿಂದಿನ ಗೀತಾ ಪಾರಾಯಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅಧಿಕಾರಿ, ಕಳೆದ ವರ್ಷ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸುಮಾರು ಒಂದು ಲಕ್ಷ ಜನರು ಹಾಗೂ ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 50,000 ಜನರು ಭಾಗವಹಿಸಿದ್ದರು ಎಂದು ಹೇಳಿದರು. ಇದೇ ವೇಳೆ, ಡಿಸೆಂಬರ್ 29 ಕ್ಕೆ ಸುಮಾರು 10 ಲಕ್ಷ ಜನರು ಭಾಗವಹಿಸುವ ಮತ್ತೊಂದು ಬೃಹತ್ ಪಾರಾಯಣ ಕಾರ್ಯಕ್ರಮ ನಿಗದಿಯಾಗಿದ್ದು, ಇದರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಆಧ್ಯಾತ್ಮಿಕ ನಾಯಕ ಜಗದ್ಗುರು ರಾಂಭದ್ರಾಚಾರ್ಯ ಅವರು ಮುಂದಿನ ವರ್ಷದ ಮಕರ ಸಂಕ್ರಾಂತಿಯ ವೇಳೆಗೆ ಬಂಗಾಳಕ್ಕೆ ಭೇಟಿ ನೀಡಿ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಬೃಹತ್ ಧಾರ್ಮಿಕ ಸಭೆ ನಡೆಸಲು ಇಚ್ಛಿಸಿದ್ದಾರೆ ಎಂದು ಹೇಳಿದ ಸಿಎಂ, ಕುರುಕ್ಷೇತ್ರದಲ್ಲಿ ನಡೆಯಲಿರುವ ಗೀತಾ ಮಹೋತ್ಸವದಲ್ಲೂ ರಾಜ್ಯ ಸರ್ಕಾರವು ವಿಶೇಷ ಮಂಟಪ ಹೊಂದಿರಲಿದೆ ಎಂದು ತಿಳಿಸಿದರು(ಏಜೆನ್ಸೀಸ್).