ಪ್ರಧಾನಿ ಮೋದಿ(PM Modi) ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಅವರು, ಕೇರಳದ ಜನರನ್ನು ದಾರಿ ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಇಲ್ಲಿನ ಜನರು ನಿಮ್ಮ ಮಾತಿಗೆ ಮರಳು ಹೋಗುವವರಲ್ಲ. ಬಹಳ ಬುದ್ಧಿವಂತರು ಮತ್ತು ವಿದ್ಯಾವಂತರು. ಮೋದಿ ಜೀ ಮತ್ತು ವಿಜಯನ್ ಅವರೇ, ನೀವು ಗುಜರಾತ್ ಅಥವಾ ಇತರ ಕಡೆಗಳಲ್ಲಿ ಇರುವ ಅನಕ್ಷರಸ್ಥರನ್ನು ಮರುಳು ಮಾಡಬಹುದು, ಆದರೆ ಕೇರಳದ ಜನರನ್ನಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿರುವುದು ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮಾತಿನ ತಿಕ್ಕಾಟಕ್ಕೆ ಕಾರಣವಾಗಿದೆ.