ಮಗಳಿಗೆ ವಿಚ್ಛೇದನ ಸಿಕ್ಕ ಖುಷಿ; ಕೋರ್ಟ್​ ಮುಂದೆಯೇ ಡೋಲು ಹೊಡಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ತಂದೆ..Daughter Divorce

Daughter Divorce Celebration
Daughter Divorce Celebration
Published on

ಪ್ರಮುಖ ಮುಖ್ಯಾಂಶಗಳು

  • ಮಗಳಿಗೆ ವಿಚ್ಛೇದನ ಸಿಕ್ಕ ಖುಷಿಗೆ ಸಂಭ್ರಮಿಸಿದ ನಿವೃತ್ತ ನ್ಯಾಯಾಧೀಶರು
  • ಮಗಳು ಪ್ರಣೀತಾ ಶರ್ಮಾಗೆ ಡಿವೋರ್ಸ್​ ಸಿಗುತ್ತಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕುಟುಂಬ
  • ನನ್ನ ಮಗಳನ್ನು ನಾನು ಪ್ರೀತಿಸುತ್ತೇನೆ ಎಂದು ಬರೆದಿರುವ ಕಪ್ಪು ಟೀ-ಶರ್ಟ್ ಧರಿಸಿದ್ದ ಕುಟುಂಬಸ್ಥರು
ಮೀರತ್: ಮುದುವೆ ಸಮಾರಂಭಗಳು ಭಾರತೀಯರಿಗೆ ಪ್ರತಿ ಭಾರಿಯೂ ಒಂದು ಸಂಭ್ರಮ.  ವಿವಾಹಕ್ಕೆ ಒಂದು ತಿಂಗಳಿನಿಂದ ತಯಾರಿಗಳು, ಸಂತೋಷ, ಖರೀದಿ ಭರಾಟೆ ಜೋರಾಗಿರುತ್ತದೆ. ರಾತ್ರಿ ಪೂರ್ತಿ ವಧು-ವರರ ಗುಸುಗುಸು ಮಾತು ಹೀಗೆ ಸಾಕಷ್ಟು. ಆದರೆ, ವಿಚ್ಛೇದನ ಎಂದು ಬಂದಾಗ ಅದೊಂದು ಘೋರ ವಿರಸ. ಹಲವರು ಸೋಶಿಯಲ್​ ಮೀಡಿಯಾ ಬಿಟ್ಟು, ದೂರದ ಊರುಗಳಿಗೆ ತೆರಳಿ ಬಿಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಪ್ರವೃತ್ತಿ ಇಲ್ಲ.  ಹೌದು ಇದಕ್ಕೆ ಉದಾಹರಣೆ ಎಂದರೆ, ಮೀರತ್​ ಫ್ಯಾಮಿಲಿ ಕೋರ್ಟ್(Meerut Judge Viral Video)​ ಬಳಿ ನಡೆದ ಘಟನೆ.
ಆಧುನಿಕ ಜಗತ್ತಿನ ಕಾಲಘಟ್ಟದಲ್ಲಿ ವಿಚ್ಛೇದನ ಪಡೆದ ಖುಷಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಘಟನೆ, ಲೀಟರ್​ಗಟ್ಟಲೇ ಹಾಲು ಸುರಿದುಕೊಂಡು ಸ್ನಾನ ಮಾಡಿರುವುದು. ಸ್ವೀಟ್ ಹಂಚಿ ಸಂತಸ ವ್ಯಕ್ತಪಡಿಸುತ್ತಿರುವ ಪ್ರಕರಣಗಳು ಬಹಳ ಇವೆ. ಅದರಂತೆ, ಉತ್ತರ ಪ್ರದೇಶದ ಮೀರತ್‌ನಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಮಗಳ ವಿಚ್ಛೇದನವನ್ನು ಡಿಜೆ, ಡೋಲು ಮತ್ತು ನೃತ್ಯದೊಂದಿಗೆ ಸಂಭ್ರಮಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಎಕ್ಸ್​ ಪೋಸ್ಟ್​ನಲ್ಲಿ ಏನಿದೆ?

 2018 ರಲ್ಲಿ ವಿನೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಹಜಹಾನ್​ ಪುರದ ನಿವಾಸಿ ಮೇಜರ್ ಗೌರವ್ ಅಗ್ನಿಹೋತ್ರಿ ಎಂಬುವವರನ್ನು ಮದುವೆಯಾದರು. ಅದಾದ ಕೆಲವೇ ದಿನಕ್ಕೆ ಎಲ್ಲವೂ ಸರಿಯಾಗಿರಲಿಲ್ಲ. ಕಿರುಕುಳ, ದೌರ್ಜನ್ಯದ ಮೇರೆಗೆ ವಿಚ್ಛೇದನಕ್ಕೆ ಯುವತಿ ಅರ್ಜಿ ಸಲ್ಲಿಸಿದರು. 7 ವರ್ಷಗಳ ನಂತರ, ಇತ್ತೀಚೆಗೆ ಏಪ್ರಿಲ್ 4 ರಂದು ಮೀರತ್ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿತು. 
ವಿಚ್ಛೇದನ ಸಿಕ್ಕ ಸಂದರ್ಭದಲ್ಲಿ ಯಾರೇ ಆಗಲಿ ಮೌನವಹಿಸೋದು ಸಾಮಾನ್ಯ. ಅದರೇ ಆಕೆಯ ತಂದೆ ಜ್ಞಾನೇಂದ್ರ ಶರ್ಮಾ  ಹಾಗೂ ಕುಟುಂಬಸ್ಥರು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ನ್ಯಾಯಾಲಯದ ಆವರಣದಲ್ಲಿ  ನೃತ್ಯ ಮತ್ತು ಸಿಹಿತಿಂಡಿಗಳೊಂದಿಗೆ ಆಚರಿಸಿದರು. ಅಲ್ಲಿದ್ದವರು ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ, ಆಕೆ ನನ್ನ ಹೃದಯ, ನನ್ನ ಆತ್ಮ ಎಂದು ಮುದ್ರಿತವಾದ ಟೀ-ಶರ್ಟ್‌ಗಳನ್ನು ಧರಿಸಿದ್ದರು ಎನ್ನುವುದು ಎಕ್ಸ್​ನಲ್ಲಿದೆ.

ನೆಟ್ಟಿಗರು ಏನಂದ್ರು?

'ಇವರು ನವ ಭಾರತದ ಪೋಷಕರು' ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಇಂತಹ ಘಟನೆಗಳಿಗೆ ಪೋಷಕರು ಬೆಂಬಲಿಸೋದು ಕಡಿಮೆ. ಅಲ್ಲದೆ ಸಮಾಜದಲ್ಲಿನ ಜನರು ಸಹ ತಿರಸ್ಕಾರ ಭಾವದಲ್ಲಿ ನೋಡುತ್ತಾರೆ' ಎಂದು ಒಬ್ಬ ನೆಟ್ಟಿಗ ಬೇಸರ ವ್ಯಕ್ತಪಡಿಸಿದ್ದಾರೆ. 'ನಿಮ್ಮ ಹೊಸ ಜೀವನಕ್ಕೆ ಒಳ್ಳೆಯದಾಗಲಿ' ಎಂದು ನಾನು ಆಶಿಸುತ್ತೇನೆ ಎಂದು ಒಬ್ಬ ನೆಟ್ಟಿಗ ಆರ್ಶೀರ್ವದಿಸಿದ್ದಾರೆ. 'ಹೆಣ್ಣು ಮಕ್ಕಳು ಹೊರೆಯಲ್ಲ, ಅವರ ಜೀವನ ವಿಚ್ಛೇದನದಿಂದ ಕೊನೆಯಾಗುವುದಿಲ್ಲ' ಎಂಬ ಸಂದೇಶವನ್ನು ಈ ಕುಟುಂಬ ಸಾರಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net