ಈ ಘಟನೆ ನಮಗೆ ಎರಡು ಪಾಠಗಳನ್ನು ಕಲಿಸುತ್ತದೆ. ಒಂದು, ಎಂತಹ ಒತ್ತಡದ ನಡುವೆಯೂ ಮೂಕಪ್ರಾಣಿಗಳ ಬಗ್ಗೆ ದಯೆ ತೋರುವ ಈ ಮಹಿಳೆಯ ಗುಣ ನಿಜಕ್ಕೂ ಅನುಕರಣೀಯ. ಆದರೆ, ಎರಡನೆಯದಾಗಿ, ನಾವು ಮಾಡುವ ಸೇವೆ ಇನ್ನೊಬ್ಬರಿಗೆ ತೊಂದರೆಯಾಗಬಾರದು ಅಥವಾ ಪರಿಸರವನ್ನು ಕೆಡಿಸಬಾರದು ಎಂಬುದು ಅಷ್ಟೇ ಮುಖ್ಯ. ಸೇವೆ ಮತ್ತು ಸ್ವಚ್ಛತೆ ಜೊತೆಜೊತೆಗೆ ಸಾಗಿದಾಗ ಮಾತ್ರ ಆ ಕಾರ್ಯಕ್ಕೆ ಪೂರ್ಣ ಅರ್ಥ ಸಿಗುತ್ತದೆ ಎನ್ನುವುದು ನೆಟ್ಟಿಗರ ಅಭಿಮತವಾಗಿದೆ,(ಏಜನ್ಸೀಸ್).