ನಿಕಿತಾ ಕಣ್ಣೀರು ಹಾಕುತ್ತಾ ಘಟನೆಯನ್ನು ನೆನಪಿಸಿಕೊಂಡಿದ್ದು, ನನ್ನ ತಮ್ಮ ಪೊಲೀಸರ ಮುಂದೆ ಕೈಮುಗಿದು ಕ್ಷಮೆ ಕೇಳಿದ. ಆದರೂ ಒಬ್ಬ ಅಧಿಕಾರಿ ಆತನ ಕೆನ್ನೆಗೆ ಬಲವಾಗಿ ಬಾರಿಸಿದರು. ಆ ಏಟು ರಾಜ್‌ನನ್ನು ಅದೆಷ್ಟು ಭಯಭೀತಗೊಳಿಸಿತೆಂದರೆ, ಆತ ನಡುಗುತ್ತಾ ಮನೆಗೆ ಓಡಿ ಬಂದ. ಪೊಲೀಸರು ನನ್ನನ್ನು ಕರೆದುಕೊಂಡು ಹೋಗುತ್ತಾರೆ, ಜೈಲಿಗೆ ಹಾಕುತ್ತಾರೆ ಎಂದು ಕಿರುಚುತ್ತಾ ಅಡಗಿಕೊಳ್ಳಲು ಯತ್ನಿಸಿದ. ನಾವು ಸಮಾಧಾನ ಮಾಡುವಷ್ಟರಲ್ಲಿ ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದೇ ಬಿಟ್ಟ ಎಂದರು.