ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿತ; ಮುಂಭಾಗಕ್ಕೆ ಹಾನಿ: ತುರ್ತು ಭೂಸ್ಪರ್ಶ | IndiGo flight

ಬಿಹಾರದ ಪಾಟ್ನಾದಿಂದ ಉತ್ತರ ಪ್ರದೇಶದ ರಾಜಧಾನಿ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬುಧವಾರ(ಅ. 07) 17,000 ಅಡಿ ಎತ್ತರದಲ್ಲಿ ಸಿಡಿಲು ಬಡಿದು ಮುಂಭಾಗ ಹಾನಿಯಾಗಿದ್ದು, ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಇಂಡಿಗೋ ವಿಮಾನದ ಮುಂಭಾಗದಲ್ಲಿ ಹಾನಿಯಾಗಿರುವುದು.
ಇಂಡಿಗೋ ವಿಮಾನದ ಮುಂಭಾಗದಲ್ಲಿ ಹಾನಿಯಾಗಿರುವುದು.
Published on: 

ನವದೆಹಲಿ: ಬಿಹಾರದ ಪಾಟ್ನಾದಿಂದ ಉತ್ತರ ಪ್ರದೇಶದ ರಾಜಧಾನಿ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬುಧವಾರ(ಅ. 07) 17,000 ಅಡಿ ಎತ್ತರದಲ್ಲಿ ಸಿಡಿಲು ಬಡಿದು ಮುಂಭಾಗ ಹಾನಿಯಾಗಿದ್ದು, ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

104 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ನಿಗದಿತ ಸಮಯಕ್ಕಿಂತ ಎಂಟು ನಿಮಿಷಗಳ ಮುಂಚಿತವಾಗಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನದ ಮುಂಭಾಗ ಸ್ವಲ್ಪ ಹಾನಿಗೊಳಗಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಂಡಿಗೋ ವಕ್ತಾರರು, ಅಕ್ಟೋಬರ್ 07ರಂದು ಪಾಟ್ನಾದಿಂದ ಲಖನೌಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6E 625 ಪ್ರತಿಕೂಲ ಹವಾಮಾನವನ್ನು ಎದುರಿಸಿತು. ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಎಲ್ಲಾ ಗ್ರಾಹಕರು ತಮ್ಮ ಮೂಲ ಸ್ಥಳ ಅಂದ್ರೆ ಲಖನೌದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದರು ಎಂದು ತಿಳಿಸಿದ್ದಾರೆ.

Also Read
SIR ವಿರುದ್ಧ ರಣಕಹಳೆ: ಜಂತರ್‌-ಮಂತರ್‌ ಪ್ರತಿಭಟನೆಗೂ ಮುನ್ನವೇ ರಾಹುಲ್‌-ಪ್ರಿಯಾಂಕಾ ಪೊಲೀಸ್ ವಶಕ್ಕೆ! Jantar Mantar Protest
ಇಂಡಿಗೋ ವಿಮಾನದ ಮುಂಭಾಗದಲ್ಲಿ ಹಾನಿಯಾಗಿರುವುದು.

ವಿಮಾನದ ಹಾನಿ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ತಿಳಿಸಲಾಗಿದೆ. ವಿಮಾನವು ಅಗತ್ಯ ನಿರ್ವಹಣೆಗೆ ಒಳಗಾಗುತ್ತದೆ ಮತ್ತು ಸಂಬಂಧಿತ ಅನುಮತಿಗಳನ್ನು ಪಡೆದ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಭಾರತದ ವಾಯುಯಾನ ನಿಯಂತ್ರಕ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಯನ್ನು ಪ್ರಾರಂಭಿಸಿದೆ. ನಿಯಂತ್ರಕ ಅನುಮತಿಯ ನಂತರವೇ ವಿಮಾನವನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net