ಜಗನ್​ಮೋಹನ್ ರೆಡ್ಡಿ v\s ಶರ್ಮಿಳಾ; ಬೆಂಗಳೂರಿನಲ್ಲಿ ಹೈಡ್ರಾಮ: ಯಲಹಂಕ ಬಂಗಲೆಗೆ ಹೋಗದಂತೆ ಶರ್ಮಿಳಾ ತಡೆದ ಪೊಲೀಸರು | Y S Sharmila

ಮಾಜಿ ಸಿಎಂ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್.ಜಗನ್​ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ಶರ್ಮಿಳಾ ರೆಡ್ಡಿ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ನಿನ್ನೆ(ನ. 22) ತಡರಾತ್ರಿ ಬೆಂಗಳೂರಿಲ್ಲಿ ಹೈಡ್ರಾಮ ನಡೆದಿದ್ದು, ಯಲಹಂಕ ಬಂಗಲೆಗೆ ತೆರಳದಂತೆ ಶರ್ಮಿಳಾರನ್ನು ಪೊಲೀಸರು ತಡೆದಿದ್ದಾರೆ.
ಜಗನ್​ಮೋಹನ್ ರೆಡ್ಡಿ v\s ಶರ್ಮಿಳಾ; ಬೆಂಗಳೂರಿನಲ್ಲಿ ಹೈಡ್ರಾಮ: ಯಲಹಂಕ ಬಂಗಲೆಗೆ ಹೋಗದಂತೆ ಶರ್ಮಿಳಾ ತಡೆದ ಪೊಲೀಸರು | Y S Sharmila
Published on: 

ಬೆಂಗಳೂರು: ಮಾಜಿ ಸಿಎಂ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್.ಜಗನ್​ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ಶರ್ಮಿಳಾ ರೆಡ್ಡಿ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ನಿನ್ನೆ(ನ. 22) ತಡರಾತ್ರಿ ಬೆಂಗಳೂರಿಲ್ಲಿ ಹೈಡ್ರಾಮ ನಡೆದಿದ್ದು, ಯಲಹಂಕ ಬಂಗಲೆಗೆ ತೆರಳದಂತೆ ಶರ್ಮಿಳಾರನ್ನು ಪೊಲೀಸರು ತಡೆದಿದ್ದಾರೆ.

ದೇವನಹಳ್ಳಿ ವಿಮಾನ ನಿಲ್ದಾಣದಿಂದ ಯಲಹಂಕ ಬಂಗಲೆಯತ್ತ ತೆರಳುತ್ತಿದ್ದ ಶರ್ಮಿಳಾ ಅವರನ್ನು ನಗರದ 'ಏರ್ ಫೋರ್ಸ್ ಕ್ರಾಸ್' ಬಳಿ ಪೊಲೀಸರು ತಡೆದಿದ್ದಾರೆ. ಮತ್ತು ಈ ಆಸ್ತಿ ಆವರಣಕ್ಕೆ ತೆರಳದಂತೆ ನ್ಯಾಯಾಲಯವು ನೀಡಿದ ತಡೆಯಾಜ್ಞೆ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಶರ್ಮಿಳಾ ಅವರು ನನ್ನ ನಿವಾಸಕ್ಕೆ ಹೋಗುವುದರಲ್ಲಿ ತಪ್ಪೇನು? ಎಂದು ಪೊಲೀಸ್ ಅಧಿಕಾರಿಗಳ ಜೊತೆ ವಾದಿಸಿದ್ದಾರೆ. ಆದರೆ ಪೊಲೀಸರು ಅಲ್ಲಿಗೆ ತೆರಳದಂತೆ ಸಂಪೂರ್ಣವಾಗಿ ನಿರ್ಬಂಧಿಸಿದ್ದರಿಂದ ಬಳಿಕ ಶರ್ಮಿಳಾ ಕುಟುಂಬ ಖಾಸಗಿ ಹೋಟೆಲ್​ನತ್ತ ತೆರಳಿದೆ ಎನ್ನಲಾಗಿದೆ.

Also Read
ಭೀಕರ ರಸ್ತೆ ಅಪಘಾತ: ಕಾರು ಮರಕ್ಕೆ ಡಿಕ್ಕಿ ಹೊಡೆದು 8 ಮಂದಿ ಸಾ*, ಇಬ್ಬರಿಗೆ ಗಾಯ | Accident
ಜಗನ್​ಮೋಹನ್ ರೆಡ್ಡಿ v\s ಶರ್ಮಿಳಾ; ಬೆಂಗಳೂರಿನಲ್ಲಿ ಹೈಡ್ರಾಮ: ಯಲಹಂಕ ಬಂಗಲೆಗೆ ಹೋಗದಂತೆ ಶರ್ಮಿಳಾ ತಡೆದ ಪೊಲೀಸರು | Y S Sharmila

ಈ ಕುರಿತು ಮಾತನಾಡಿರುವ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಿ.ಕೆ. ಮಿಥುನ್ ಕುಮಾರ್, ವೈ.ಎಸ್.ಶರ್ಮಿಳಾ ಅವರು ಅಲ್ಲಿಗೆ ಹೋಗಬಾರದು ಎಂದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆ ಆದೇಶವನ್ನು ತೋರಿಸಿದ ಬಳಿಕ ಅವರು ಅಲ್ಲಿಂದ ತೆರಳಿದರು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸಹೋದರಿ ಶರ್ಮಿಳಾ ಬೆಂಗಳೂರಿನ ಯಲಹಂಕದ ಬಂಗಲೆ ಪ್ರವೇಶಿಸದಂತೆ ತಡೆ ಕೋರಿ ಸಿಲಿಕಾನ್ ಬಿಲ್ಡರ್ಸ್ ಲಿಮಿಟೆಡ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿ ನ. 21ರಂದು ಮಧ್ಯಂತರ ಆದೇಶ ಹೊರಡಿಸಿರುವ ನ್ಯಾಯಾಲಯ, ಶರ್ಮಿಳಾ ಅವರು ವಿವಾದಿತ 'ಯಲಹಂಕ ಬಂಗಲೆ' ಆಸ್ತಿಯೊಳಗೆ ಪ್ರವೇಶಿಸದಂತೆ ಅಥವಾ ಅದರ ಸ್ವಾಧೀನದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ಬಂಧಿಸಿ ಆದೇಶಿಸಿದೆ. ಮತ್ತು ಡಿ. 19ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ (ಏಜೆನ್ಸೀಸ್).