ಭೀಕರ ರಸ್ತೆ ಅಪಘಾತ: ಕಾರು ಮರಕ್ಕೆ ಡಿಕ್ಕಿ ಹೊಡೆದು 8 ಮಂದಿ ಸಾ*, ಇಬ್ಬರಿಗೆ ಗಾಯ | Accident

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಭಾನುವಾರ(ನ. 22) ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೀಕರ ರಸ್ತೆ ಅಪಘಾತ: ಕಾರು ಮರಕ್ಕೆ ಡಿಕ್ಕಿ ಹೊಡೆದು 8 ಮಂದಿ ಸಾ*, ಇಬ್ಬರಿಗೆ ಗಾಯ | Accident
Published on: 

ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಭಾನುವಾರ(ನ. 22) ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಂಬುನಾಥಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕೊಥುರ್ಪಟ್ಟಿ ಫೋರ್ ರೋಡ್ ಬಳಿ ಸಂಜೆ 4.05ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನಾಮಕ್ಕಲ್ ಜಿಲ್ಲೆಯ ಎರುಮಪಟ್ಟಿಯಲ್ಲಿ ನಡೆದ ಕಿವಿ ಚುಚ್ಚುವ ಸಮಾರಂಭದಲ್ಲಿ ಭಾಗವಹಿಸಿ ತಂಜಾವೂರು ಜಿಲ್ಲೆಯ ತಿರುಕಟ್ಟುಪಲ್ಲಿಗೆ ಹಿಂತಿರುಗುತ್ತಿದ್ದಾಗ ಈ ಅವಘಡ ನಡೆದಿದೆ.

Also Read
ಮಿಲಿಟರಿ ತರಬೇತಿ ಸಮಯದಲ್ಲಿ ಅವಘಡ: ಆಕಸ್ಮಿಕವಾಗಿ ಸೇನಾ ಟ್ಯಾಂಕ್ ಹರಿದು ಇಬ್ಬರು ಸೈನಿಕರು ದುರ್ಮರಣ | army tank
ಭೀಕರ ರಸ್ತೆ ಅಪಘಾತ: ಕಾರು ಮರಕ್ಕೆ ಡಿಕ್ಕಿ ಹೊಡೆದು 8 ಮಂದಿ ಸಾ*, ಇಬ್ಬರಿಗೆ ಗಾಯ | Accident

ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಮೂವರು ಮುಸಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ತಿರುಕಟ್ಟುಪಲ್ಲಿಯ ಮಹಾರಾಜಪುರಂ ನಿವಾಸಿಗಳಾದ ಮಾಣಿಕ್ಕಂ, ಮುರುಗನ್, ರಾಜೇಶ್, ಶಕ್ತಿವೇಲ್ (42) ಹಾಗೂ ಸುಬ್ರಮಣಿ, ತಂಜಾವೂರು ಜಿಲ್ಲೆಯ ಸಾತನೂರಿನ ಸಂಗಿಲಿ ಮತ್ತು ಪವಾಡೈ (50), ವಿಲ್ಲುಪುರಂ ಜಿಲ್ಲೆಯ ಸೀತಾರಾಮನ್ ಎಂದು ಗುರುತಿಸಲಾಗಿದೆ

ಸಾತನೂರಿನ ನಿವಾಸಿಗಳಾದ ರಾಮಲಿಂಗಂ ಮತ್ತು ರಾಮರ್ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದು, ಮುಸಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ (ಏಜೆನ್ಸೀಸ್).