ಮಾಯಾವತಿ ಉತ್ತರಾಧಿಕಾರಿಯಾಗಿ ಇಶಾನ್ ಆನಂದ್?: ಬಿಎಸ್​ಪಿ ರಾಷ್ಟ್ರೀಯ ಸಂಯೋಜಕರಾಗಿ ನೇಮಕ|Mayavati

ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ತಮ್ಮ ಉತ್ತರಾಧಿಕಾರಿಯಾಗಿ ಕಿರಿಯ ಸೋದರಳಿಯ ಇಶಾನ್ ಆನಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಬುಧವಾರ(ಸೆ. 23) ಅವರನ್ನು ಬಿಎಸ್​​ಪಿ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ.
Mayavati
ಮಾಜಿ ಸಿಎಂ ಮಾಯಾವತಿ
Published on

ನವದೆಹಲಿ: ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ತಮ್ಮ ಉತ್ತರಾಧಿಕಾರಿಯಾಗಿ ಕಿರಿಯ ಸೋದರಳಿಯ ಇಶಾನ್ ಆನಂದ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಬುಧವಾರ(ಸೆ. 23) ಅವರನ್ನು ಬಿಎಸ್​​ಪಿ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ.

ಮಾಯಾವತಿ ಅವರ ನೇತೃತ್ವದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಎಸ್‌ಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಇಶಾನ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದನ್ನು ಘೋಷಣೆ ಮಾಡಿದ್ದಾರೆ. ಕಿರಿಯ ಸಹೋದರ ಬಿಎಸ್‌ಪಿ ರಾಷ್ಟ್ರೀಯ ಉಪಾಧ್ಯಕ್ಷ ಆನಂದ್ ಕುಮಾರ್ ಅವರ ಪುತ್ರನಾಗಿರುವ ಇಶಾನ್, ಎಲ್‌ಎಲ್‌ಎಂ ಮತ್ತು ಕಾನೂನು ಅಧ್ಯಯನ ಮಾಡಿದ್ದಾರೆ.

ಸಭೆಯಲ್ಲಿ ಮಾತನಾಡಿರುವ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು, ಬಿಎಸ್​ಪಿ ಸಂಸ್ಥಾಪಕ ಕಾನ್ಶಿ ರಾಮ್ ಮತ್ತು ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ತತ್ವಗಳಿಗೆ ಅನುಗುಣವಾಗಿ ಪಕ್ಷವು ವಂಶಪಾರಂಪರ್ಯ ರಾಜಕೀಯದಿಂದ ದೂರವಿರಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

Also Read
ಸಿಇಸಿ ಆಗಲು ಅರ್ಹ ವ್ಯಕ್ತಿಯಲ್ಲ, ತಕ್ಷಣ ಅವರನ್ನು ಬಂಧಿಸಬೇಕು: ಜ್ಞಾನೇಶ್ ಕುಮಾರ್ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ | Mamata Banerjee
Mayavati

ತುಳಿತಕ್ಕೊಳಗಾದವರನ್ನು ಆಳುವ ವರ್ಗವನ್ನಾಗಿ ಪರಿವರ್ತಿಸುವುದು. ಮತ್ತು ಅವರು ಸ್ವಾಭಿಮಾನ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಪಕ್ಷದ ಉದ್ದೇಶವಾಗಿದೆ. ಸಂಬಂಧಿಕರು ಮತ್ತು ನಿಕಟ ಕುಟುಂಬ ಸದಸ್ಯರು ಯಾವುದೇ ಆಪೇಕ್ಷೆಯಿಲ್ಲದೇ ಪಕ್ಷದಲ್ಲಿ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸಂಯೋಜಕರಾಗಿ ನೇಮಕವಾದ ಬಳಿಕ ಮಾತನಾಡಿರುವ ಇಶಾನ್ ಆನಂದ್, ಮಾಯಾವತಿ ತೋರಿಸಿದ ಹಾದಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕನಾಗಿ ದೊಡ್ಡ ಜವಾಬ್ದಾರಿಯನ್ನು ಅವರು ನನಗೆ ವಹಿಸಿದ್ದಾರೆ. ಅದನ್ನು ನಾನು ಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾಭಾವದಿಂದ ನಿರ್ವಹಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net