ಸೀರೆಯುಟ್ಟು ಎಕೆ-47 ನಿಂದ ಗುಂಡು ಹಾರಿಸಿದ ಐಪಿಎಸ್​ ಅಧಿಕಾರಿ: ಛತ್ತೀಸ್‌ಗಢ ಎಸ್ಪಿ ಅಂಕಿತಾ ಶರ್ಮಾ ವಿಡಿಯೋ ವೈರಲ್! Ankita Sharma IPS

ಸೀರೆಯುಟ್ಟು AK-47 ರೈಫಲ್‌ನಿಂದ ನಿಖರವಾಗಿ ಗುಂಡು ಹಾರಿಸಿದ ಛತ್ತೀಸ್‌ಗಢ ಎಸ್ಪಿ ಅಂಕಿತಾ ಶರ್ಮಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವಿವರಗಳು ಇಲ್ಲಿವೆ.
Chhattisgarh IPS officer Ankita Sharma, dressed in a saree, practicing shooting with an AK-47 rifle.
ಸೀರೆಯುಟ್ಟು AK-47 ಗನ್‌ನಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿರುವ ಛತ್ತೀಸ್‌ಗಢ ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ.
Published on: 

ಛತ್ತೀಸ್​ಗಢ: ವಿಜಯದಶಮಿ ಹಾಗೂ ಆಯುಧ ಪೂಜೆ ಸಂದರ್ಭದಲ್ಲಿ ಮನೆ ಹಾಗೂ ಕಚೇರಿಯಲ್ಲಿರುವ ಆಯುಧಗಳಿಗೆ ಪೂಜೆ ಸಲ್ಲಿಸಿ, ಜೀವನದಲ್ಲಿ ಎದುಗಾರುವ ಸವಾಲಿನ ಸಂದರ್ಭದಲ್ಲಿ ಸಹಕಾರ ನೀಡುವಂತೆ ಕೇಳಿಕೊಂಡು ಅಸ್ತ್ರ-ಶಸ್ತ್ರಗಳಿಗೆ ಗೌರವ ಸಲ್ಲಿಸಲಾಗುತ್ತದೆ.

ಆದರೆ, ಕೆಲ ದಿನಗಳಿಂದ ಛತ್ತೀಸ್​ಗಢದ, ರಾಜ್​ನಂದ್​ಗಾಂವ್​ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಎಕೆ-47 ರೈಫಲ್​ ಜತೆ ಮಾಡಿರುವ ಕೆಲಸವೊಂದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಒಂದಾದ ರಾಜ್​ನಂದ್​ಗಾಂವ್​ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಅಂಕಿತಾ ಶರ್ಮಾ ಅವರು, ವಿಜಯದಶಮಿ ನಿಮಿತ್ತ ಠಾಣೆಯಲ್ಲಿ ಏರ್ಪಡಿಸಲಾಗಿದ್ದ, ಆಯುಧ ಪೂಜೆಗೆ ಸಾಂಪ್ರದಾಯಿಕ ಸೀರೆಯುಟ್ಟು ಬಂದಿದ್ದು, ಸೀರೆಯನ್ನುಟ್ಟು, ಎಕೆ-47 ರೈಫಲ್​ಅನ್ನು ಕೈಗೆತ್ತಿಕೊಂಡು, ಆಕಾಶದತ್ತ ಗುಂಡಿನ ಮಳೆಗೆರೆದಿದ್ದಾರೆ. ಈಗ, ಮಹಿಳಾ ಪೊಲೀಸ್​ ಅಧಿಕಾರಿ ಹೀಗೆ, ರೈಫಲ್​ನಿಂದ ಗುಂಡನ್ನು ಸಿಡಿಸಿರುವುದು ಭಾರೀ ಚರ್ಚೆಯ ಸಂಗತಿಯಾಗಿ ಹೊರಹೊಮ್ಮಿದೆ.

ಇವರದು ಕೇವಲ ಶೋ ಆಫ್!

ಅಂಕಿತಾ ಶರ್ಮಾ ಸೀರೆಯುಟ್ಟು, ಎಕೆ-47 ರೈಫಲ್​ಅನ್ನು ಹಿಡಿದು ಗುಂಡನ್ನು ಸಿಡಿಸಿರುವುದು ಕೆಲವೊಂದಿಷ್ಟು ಜನರ ಕೆಂಗಣ್ಣಿಗೆ ಕಾರಣವಾಗಿದೆ. ಮೊದಲನೇಯದಾಗಿ ಗನ್​ಗಳಿಗೆ ಪೂಜೆ ಸಲ್ಲಿಸಿ, ಅದನ್ನು ಆಪರೇಷನ್​ ಸಂದರ್ಭದಲ್ಲಿ ಬುಲೆಟ್​ಅನ್ನು ಸಿಡಿಸಬೇಕು. ಅದನ್ನು ಬಿಟ್ಟು ಹೀಗೆ ತಮಗೆ ಬೇಕೆಂದಾಗ ಗುಂಡನ್ನು ಸಿಡಿಸಬಾರದು. ಇದು ಕಾನೂನು ಬಾಹಿರವಾಗಿದೆ. ಈ ಅಧಿಕಾರಿ ಶೋ ಆಫ್​ ಮಾಡಲು ಈ ರೀತಿ ಮಾಡಿದ್ದಾರೆಂದು ಒಂದುಷ್ಟು ಜನ ಕಿಡಿಕಾರಿದ್ದಾರೆ.

Also Read
ಓಮನ್ ಕಡಲತೀರದಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ 'ಪಿಂಕ್​ ಡಾಲ್ಫಿನ್': ಈ ವಿಸ್ಮಯ ಜೀವಿ ಹಿಂದಿನ ಅಸಲಿ ಸತ್ಯ ಇಲ್ಲಿದೆ! Pink Dolphin
Chhattisgarh IPS officer Ankita Sharma, dressed in a saree, practicing shooting with an AK-47 rifle.

ಈಕೆ ಲೇಡಿ ಸಿಂಗಂ!

ಇನ್ನು ಕೆಲವೊಂದಿಷ್ಟು ಜನರು ಈ ಅಂಕಿತಾ ಶರ್ಮಾ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ತಮ್ಮ ಖಡಕ್​ ಪೊಲೀಸಿಂಗ್​ ಹಾಗೂ ಕೂಂಬಿಂಗ್​ ಮೂಲಕ ನಕ್ಸಲಿಸಂಗೆ ಕಡಿವಾಣ ಹೇರಿದ್ದಾರೆ. ಇವರು ಪೂಜೆ ಮಾಡುತ್ತಿರುವ ಗನ್​ಗಳನ್ನು ಠಾಣೆಯಲ್ಲಿ ಸುಮ್ಮನೆ ನೇತು ಹಾಕುವುದಿಲ್ಲ. ಅದನ್ನು ನಿರಂತರವಾಗಿ ಬಳಸಲಾಗುತ್ತದೆ. ವಾಹನ ಗಳಿಗೆ ಪೂಜೆ ಸಲ್ಲಿಸಿದ ನಂತರ ಲಿಂಬೆಹಣ್ಣನ್ನು ಒತ್ತಿಸಿ, ವಾಹನವನ್ನು ಒಂದು ಸುತ್ತು ಚಲಾಯಿಸಿದಂತೆ, ಇವರು ಪೂಜೆ ಸಲ್ಲಿಸಿದ ರೈಫಲ್​ನಿಂದ ಗುಂಡನ್ನು ಸಿಡಿಸಿದ್ದಾರೆಂದು ಇನ್ನೊಂದಿಷ್ಟು ಜನ ಹೇಳಿದ್ದಾರೆ.

ಯಾರು ಈ ಅಂಕಿತಾ ಶರ್ಮಾ?

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಅಧಿಕಾರಿ ಅಂಕಿತಾ ಶರ್ಮಾ, ಇಕೆ 2018 ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ಇವರು ಮೂಲತಃ ಛತ್ತೀಸ್​ಗಢ ರಾಜ್ಯದವರೇ ಆಗಿದ್ದಾರೆ. 2018 ರಲ್ಲಿ ಹೊರಬಿದ್ದ ಫಲಿತಾಂಶದಲ್ಲಿ ಅಂಕಿತಾ ಶರ್ಮಾ ದೇಶಕ್ಕೆ 203 ನೇ ಶ್ರೇಣಿಯನ್ನು ಪಡೆದು ತವರು ಜಿಲ್ಲೆಯಲ್ಲಿಯೇ ಸೇನೆ ಆರಂಭಿಸಿದರು.

ಛತ್ತೀಸ್​ಗಢ ನಕ್ಸಲ್​ ಪೀಡಿತ ರಾಜ್ಯವಾಗಿರುವ ಕಾರಣ ಈ ಅಂಕಿತಾ ಶರ್ಮಾ ತಮ್ಮ ಖಡಕ್​ ಅಧಿಕಾರದ ಮೂಲಕ ಬಕ್ಸಾರ್​ ಸೇರಿದಂತೆ ರೆಡ್​ ಕಾರಿಡಾರ್​ ಪ್ರದೇಶದಲ್ಲಿದ್ದ ಕೆಂಪಗಿದಳವನ್ನು ಬಗ್ಗುಬಡಿಯುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆನ್ನಲಾಗುತ್ತದೆ. ಅಂತಯೇ ಇವರು ರೈಫಲ್​ಅನ್ನು ಹೆಗಲಿಗೇರಿಸಿಕೊಂಡು ಕಾಡಿನಲ್ಲಿ ಕೂಂಬಿಂಗ್​ ನಡೆಸುವ ವಿಡಿಯೋಗಳು ಈ ಮೊದಲು ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗಿದ್ದವು. 2022 ರಲ್ಲಿ ಇವರು ಖೈರಾಗಢದ ಎಸ್​ಪಿ ಆಗಿ ಅಧಿಕಾರ ವಹಸಿಕೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net