ಭಾರತದ ಸಂಸ್ಕೃತಿ ಕೇವಲ ಭವ್ಯ ಸ್ಮಾರಕಗಳಲ್ಲ, ಅದು ಜೀವಂತ ಸಂಸ್ಕೃತಿ: ಪ್ರಧಾನಿ ಮೋದಿ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಭಾರತದ ಸಂಸ್ಕೃತಿ ಕೇವಲ ನಾಸ್ಟಾಲ್ಜಿಯಾ ಆಗಿರಲಿಲ್ಲ, ಬದಲಾಗಿ ಅದು ಜೀವಂತ, ಬೆಳೆಯುತ್ತಿರುವ ನದಿ, ಜ್ಞಾನ, ಸೃಜನಶೀಲತೆ ಹಾಗೂ ಸಮುದಾಯದ ನಿರಂತರ ಪ್ರವಾಹ ಎಂದು ಯುನೆಸ್ಕೋ ಸಭೆಯಲ್ಲಿ ಭಾನುವಾರ(ಡಿ. 07) ಪ್ರಧಾನಿ ನರೇಂದ್ರ ಮೋದಿ(PM Modi) ಹೇಳಿದ್ದಾರೆ.
ಡಿ. 08 ರಿಂದ 13ರವರೆಗೆ ಇದೇ ಮೊದಲ ಬಾರಿಗೆ ಭಾರತವು ಯುನೆಸ್ಕೋ ಸಮಿತಿಯ ಅಧಿವೇಶನವನ್ನು ಆಯೋಜಿಸುತ್ತಿದ್ದು, ಕೆಂಪು ಕೋಟೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಂದೇಶವನ್ನು ಕೇಂದ್ರ ಸಂಸ್ಕೃತಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಓದಿದ್ದಾರೆ.
ಸಂಸ್ಕೃತಿಯು ಸ್ಮಾರಕಗಳು ಅಥವಾ ಹಸ್ತಪ್ರತಿಗಳಿಂದ ಮಾತ್ರವಲ್ಲ, ಹಬ್ಬಗಳು, ಆಚರಣೆಗಳು, ಕಲೆಗಳು ಮತ್ತು ಕರಕುಶಲತೆಯಂತಹ ಜನರ ದೈನಂದಿನ ಅಭಿವ್ಯಕ್ತಿಗಳಲ್ಲಿಯೂ ಸಮೃದ್ಧವಾಗಿದೆ. ಅಮೂರ್ತ ಪರಂಪರೆಯು ಸಮಾಜಗಳ ನೈತಿಕ ಮತ್ತು ಭಾವನಾತ್ಮಕ ನೆನಪುಗಳನ್ನು ಹೊಂದಿದೆ. ಪ್ರಪಂಚದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಲು ಅದರ ಸಂರಕ್ಷಣೆಯನ್ನು ಮಾಡಬೇಕಂದು. ಈ ಪ್ರಮುಖ ಅಧಿವೇಶನವನ್ನು ಭಾರತ ಆಯೋಜಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮುಖ್ಯ ಅತಿಥಿಗಳಾಗಿದ್ದ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಯುನೆಸ್ಕೋ ಮಹಾನಿರ್ದೇಶಕ ಖಲೀದ್ ಎಲ್-ಎನಾನಿ ಹಾಗೂ ವೇದಿಕೆಯ ಮೇಲಿದ್ದ ಇತರ ಗಣ್ಯರಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net