

ನವದೆಹಲಿ: ವ್ಯಾಪಾರ, ಹೂಡಿಕೆ, ರಕ್ಷಣೆ ಹಾಗೂ ತಂತ್ರಜ್ಞಾನ ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಸ್ವಿಜರ್ಲೆಂಡ್ ಸೋಮವಾರ (ಅ.5) ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಜರ್ಲೆಂಡ್ ಅಧ್ಯಕ್ಷಗೈ ಪರ್ಮೆಲಿನ್ ನಡುವೆ ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯ ಬಳಿಕ ಈ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ. ಮೂರು ದಿನಗಳ ಭಾರತ ಭೇಟಿಗಾಗಿ ಉನ್ನತ ಮಟ್ಟದ ವಾಣಿಜ್ಯ ಮತ್ತು ಕೈಗಾರಿಕಾ ನಿಯೋಗದೊಂದಿಗೆ ಸೋಮವಾರ ಬೆಳಗ್ಗೆ ಅಧ್ಯಕ್ಷ ಪರ್ಮೆಲಿನ್ ನವದೆಹಲಿಗೆ ಆಗಮಿಸಿದರು.
ಉಭಯ ನಾಯಕರ ಮಾತುಕತೆ ದ್ವಿಪಕ್ಷೀಯ ವಿಚಾರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಯೂಕ್ರೇನ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯ ಕುರಿತಾಗಿಯೂ ಗಂಭೀರ ಚರ್ಚೆ ನಡೆಸಿದರು. ಶಾಂತಿ ಸ್ಥಾಪನೆಯತ್ತ ಸಾಗುವ ಪ್ರತಿಯೊಂದು ಅರ್ಥಪೂರ್ಣ ಪ್ರಯತ್ನಗಳಿಗೂ ಭಾರತ ಬೆಂಬಲ ನೀಡುತ್ತದೆ.
ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆ ತರುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಂಚಾರ ಮತ್ತು ವಲಸೆ ಒಪ್ಪಂದ, ಯುವ ವೃತ್ತಿಪರರ ವಿನಿಮಯ ಯೋಜನೆ ಹಾಗೂ ನಾರಿಗೆ ತಂತ್ರಜ್ಞಾನ ಮತ್ತು ಮೂಲಗಿಸರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರ ಒಪ್ಪಂದಗಳಿಗೆ ಈ ವೇಳೆ ಸಹಿ ಹಾಕಲಾಯಿತು.
ರಕ್ಷಣಾ ಉತ್ಪಾದನೆ ಮತ್ತು ಸೇನಾ ವಿನಿಮಯದಲ್ಲಿನ ಹೊಸ ಸಾಧ್ಯತೆಗಳನ್ನು ಗುರುತಿಸಿರುವ ಉಭಯ ದೇಶಗಳು, ಪರಮಾಣು ಶಕ್ತಿ ಕ್ಷೇತ್ರದಲ್ಲಿಯೂ ಸಹಕಾರವನ್ನು ಆಳವಾಗಿಸಲು ನಿರ್ಧರಿಸಿವೆ. ವಿಮಾನ ನಿಲ್ದಾಣ ಮತ್ತು ಗುಡ್ಡಗಾಡು ಪ್ರದೇಶಗಳ ರೈಲ್ವೆ ಯೋಜನೆಗಳು ಭಾರತ-ಸೈಸ್ ಮೂಲಸೌಕರ್ಯ ಸಹಕಾರದ ಅತ್ಯುತ್ತಮ ಉದಾಹರಣೆಗಳಾಗಿವೆ. ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಲು ಹಾಗೂ ವಿನ್ಯಾಸ ಮತ್ತು ಉತ್ಪಾದನಾ ವಲಯದಲ್ಲಿ ಪಾಲ್ಗೊಳ್ಳಲು ಸ್ವಿಸ್ ಕಂಪನಿಗಳಿಗೆ ನಾವು ಆಹ್ವಾನ ನೀಡುತ್ತೇವೆ ಎಂದು ಮೋದಿ ಹೇಳಿದರು.
ಸಮಾನತೆಯ ಶತ್ವದ ಆಧಾರದ ಮೇಲೆ ಎರಡೂ ದೇಶಗಳ ನಡುವೆ ಸಂಚಾರವನ್ನು ಉತ್ತೇಜಿಸುವುದು ಮತ್ತು ಅಕ್ರಮ ವಲಸೆ ಹಾಗೂ ಮಾನವ ಕಳ್ಳಸಾಗಣೆಯನ್ನು ತಡೆಯುವುದು ಈ ಒಪ್ಪಂದದ ಪ್ರಮುಖ ಉದ್ದೇಶ.
ಯುರೋಪ್ ಖಂಡದಲ್ಲಿ ಸ್ವಿಜರ್ಲೆಂಡ್ ಭಾರತದ ಪ್ರಮುಖ ಆರ್ಥಿಕ ಪಾಲುದಾರ ದೇಶ. ಪ್ರಸ್ತುತ 330ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಭಾರತದ ಇಂಜಿನಿಯರಿಂಗ್, ಸೇವಾ ವಲಯ, ಮತ್ತು ಔಷಧೀಯ (ಫಾರ್ಮಾ) ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತದ ಐಟಿ, ಫಾರ್ಮಾ ಮತ್ತು ಯಂತ್ರೋಪಕರಣ ಕಂಪನಿಗಳು ಸೈಲೇಂಡ್‌ನಲ್ಲಿ ನೆಲೆ ಕಂಡುಕೊಂಡಿವೆ.
ಭಾರತ ಮತ್ತು ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟದ ನಡುವೆ ಜಾರಿಗೆ ಬಂದಿರುವ ಒಪ್ಪಂದದ ಪ್ರಕಾರ ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸುವುದು ಮತ್ತು 10 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ.
ಜೊತೆಗೆ ವಿಶ್ವಾಸಾರ್ಹ ಪೂರೈಕೆ ಸರಬಳೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೋದಿ ವಿವರಿಸಿದರು. ಭಾರತದ ಕೃಷಿ ಉತ್ಪನ್ನಗಳು, ಔಷರ, ಜವಳಿ ಮತ್ತು ರಂಜಿನಿಯರಿಂಗ್ ವಸ್ತುಗಳಿಗೆ ಸ್ವಿಜರ್ಲೆಂಡ್ ಮಾರುಕಟ್ಟೆಯಲ್ಲಿ ಹೆಚ್ಚು ಅವಕಾಶ ಬಯೋಟೆಕ್, ಜೀವಶಾಸ್ತ್ರ, ಬ್ಯಾಂಕಿಂಗ್, ವಿಮೆ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ.
ಇದರ ಅನ್ವಯ 5 ವರ್ಷಗಳವರೆಗೆ ಮಲ್ಟಿಪಲ್ -ಎಂಟ್ರಿ ವೀಸಾ ನೀಡಲಾಗುತ್ತದೆ. ಪ್ರತಿ ಭೇಟಿಯ ವೇಳೆ ಗರಿಷ್ಠ 6 ತಿಂಗಳ ವಾಸ್ತವ್ಯಕ್ಕೆ ಇದು ಅವಕಾಶ ಕಲ್ಪಿಸುತ್ತದೆ. ನವೀಕರಿಸಬಹುದಾದ ಒಂದು ವರ್ಷದ ವಿದ್ಯಾರ್ಥಿ ಪರ್ಮಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಉಭಯ ದೇಶಗಳ ಯುವಜನತೆಯ ವೃತ್ತಿಪರ ಹಾಗೂ ಭಾಷ ಕೌಶಲ್ಯವನ್ನು ಹೆಚ್ಚಿಸಲು ತಾತ್ಕಾಲಿಕ ಉದ್ಯೋಗದ ಅವಕಾಶ ಕಲ್ಪಿಸುವ ಒಪ್ಪಂದ ಇದಾಗಿದೆ.
ವಿಜ್ಞಾನ ಮತ್ತು ಶಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದ್ದು, ಆರೋಗ್ಯ, ಬಾಹ್ಯಾಕಾಶ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಶೀಘ್ರದಲ್ಲೇ ಜಂಟಿ ಸಂಶೋಧನಾ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಪ್ಪಂದದಿಂದ ಭಾರತಕ್ಕೆ ಬಂಡವಾಳ ಮತ್ತು ತಂತ್ರಜ್ಞಾನ ವರ್ಗಾವಣೆಯಾಗಲಿದೆ. ಜಾಗತಿಕ ವ್ಯಾಪಾರ ಅನಿಶ್ಚಿತತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಭಾರತದೊಂದಿಗೆ ವ್ಯಾಪಾರ ಮಾಡುವುದು ಸ್ವಿಜರ್ಲೆಂಡ್ಗೂ ಲಾಭದಾಯಕವಾಗಿದೆ.
ಹೂಡಿಕೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ 'ಹೂಡಿಕೆ ಸಂರಕ್ಷಣಾ ಒಪ್ಪಂದ ಮತ್ತು 'ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ'ಯ ಕುರಿತು ಚಚೆ ನಡೆಸಲಾಗುವುದು ಎಂದರು. ಬುಧವಾರ ಇಂಡಿಯಾ-ಇಎಫ್ ಟಿಎ ಪ್ರಾಕ್ರೆರಿ ಶೃಂಗಸಭೆ ನಡೆಯಲಿದ್ದು, ಇದು ವ್ಯಾಪಾರ ಒಪ್ಪಂದಗಳನ್ನು ಕರಾರುವಕ್ಕಾಗಿ ಕಾರ್ಯಗತಗೊಳಿಸುವ ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.