ಭಾರತ-ಸ್ವಿಸ್ ದ್ವಿಪಕ್ಷೀಯ ಬೆಸುಗೆ: ಸ್ವಿಜರ್ಲೆಂಡ್ ಅಧ್ಯಕ್ಷ ಪರ್ಮೆಲಿನ್ ಗೌರವಾರ್ಥ ಔತಣಕೂಟ; ಪಿಎಂ ಮೋದಿ ಸತ್ಕಾರದಲ್ಲಿ ಡಾ. ಆನಂದ ಸಂಕೇಶ್ವರ ಭಾಗಿ! Dr Anand Sankeshwar

ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಗೌರವಾರ್ಥ ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ವಿಆರ್‌ಎಲ್ ಸಮೂಹದ ಡಾ. ಆನಂದ ಸಂಕೇಶ್ವರ ಭಾಗಿ; ಭಾರತ-ಸ್ವಿಸ್ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ವಿವರ ಇಲ್ಲಿದೆ.
Dr. Anand Sankeshwar, MD of VRL Group, with Switzerland's First Lady Caroline Parmelin, Swiss President Guy Parmelin, and Prime Minister Narendra Modi in New Delhi on Monday.
ನವದೆಹಲಿಯಲ್ಲಿ ಸೋಮವಾರ ಸ್ವಿಜರ್ಲೆಂಡಿನ ಪ್ರಥಮ ಮಹಿಳೆ ಕ್ಯಾರೋಲಿನ್ ಪರ್ಮೆಲಿನ್, ಸ್ವಿಸ್ ಅಧ್ಯಕ್ಷ ಗೈ ಪರ್ಮೆಲಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆ ವಿರ್ಆಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ.
Published on: 

ನವದೆಹಲಿ: ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ (ಅ.5) ನವದೆಹಲಿಗೆ ಆಗಮಿಸಿರುವ ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಪರ್ಮೆಲಿನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವ್ಯಾಪಾರ, ಹೂಡಿಕೆ, ಎಐ, ರಕ್ಷಣಾ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಸ್ವಿಜರ್ಲೆಂಡ್ ಮೂಲಭೂತ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಪ್ರಸಕ್ತ ಒಪ್ಪಂದದಿಂದ ಸ್ವಿಜರ್ಲೆಂಡ್ ಮಾರುಕಟ್ಟೆ ಭಾರತಕ್ಕೆ ತೆರೆದುಕೊಳ್ಳಲಿದೆ.
ಗೈ ಪರ್ಮೆಲಿನ್, ಸ್ವಿಜರ್ಲೆಂಡ್ ಅಧ್ಯಕ್ಷ
Also Read
ಫಿಲ್ಮ್​​ ಸಿಟಿಯಲ್ಲಿ ಬೆಂಕಿ ಅವಘಡ: ರಣಬೀರ್​-ಯಶ್​ ನಟನೆಯ 'ರಾಮಾಯಣ' ಸೆಟ್​ ಸುಟ್ಟು ಭಸ್ಮ? ವೈರಲ್​ ವಿಡಿಯೋ ಹಿಂದಿರುವ ಅಸಲಿ ಸತ್ಯವೇನು? Film City Under Fire
Dr. Anand Sankeshwar, MD of VRL Group, with Switzerland's First Lady Caroline Parmelin, Swiss President Guy Parmelin, and Prime Minister Narendra Modi in New Delhi on Monday.
ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತ ಮತ್ತು ಮಾನವ-ಕೇಂದ್ರಿತ ತಂತ್ರಜ್ಞಾನವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವಿಬ್ಬರೂ ಒಟ್ಟಾಗಿ ಸಾಗಲಿದ್ದೇವೆ. ಆರ್ಥಿಕ ಪ್ರಗತಿಯ ಜತೆಗೆ ವಿಶ್ವಾಸಾರ್ಹ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲಾಗುವುದು.
ನರೇಂದ್ರ ಮೋದಿ ಭಾರತದ ಪ್ರಧಾನಿ

ಭಾರತ-ಸ್ವಿಜರ್ಲೆಂಡ್ ನಡುವೆ 2024ರ ಮಾರ್ಚ್‌ ನಲ್ಲಿ ಆಗಿರುವ ಸಮಗ್ರ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದಾಗಿ (ಟಿಎಪಿಎ) ಆರ್ಥಿಕ ಸಹಕಾರದಲ್ಲಿ ಆಗುತ್ತಿರುವ ಏರುಗತಿಯನ್ನು ಉಭಯ ನಾಯಕರು ಉಲ್ಲೇಖಿಸಿದರು. ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಗೌರವಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಆಯ್ದ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಆಹ್ವಾನಿತರಾಗಿ ಭಾಗಿಯಾಗಿದ್ದರು. ಭಾರತದ 13 ಗಣ್ಯರು ಹಾಗೂ ಸ್ವಿಸ್ ನಿಯೋಗ 40 ಪ್ರಮುಖರು ಔತಣಕೂಟದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net