“ನಾನು ಅರೆಸ್ಟ್‌ಗೆ ಹೆದರಲ್ಲ, ಬನ್ನಿ ಬಂಧಿಸಿ!”: ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅಭಿಜಿತ್​ ದಿಪ್ಕೆ ಕಿತ್ತಾಟ; ವಿಡಿಯೋ ವೈರಲ್​! Abhijit Dipke Arrest

ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಜೆಪಿ ಮುಖ್ಯಸ್ಥ ಅಭಿಜಿತ್ ದಿಪ್ಕೆ ಸೇರಿ 50 ಮಂದಿ ವಶಕ್ಕೆ. ಮಹಿಳಾ ಪೊಲೀಸ್ ಜೊತೆ ವಾಗ್ವಾದ ನಡೆಸಿದ ವಿಡಿಯೋ ವೈರಲ್; "ನಾನು ಅರೆಸ್ಟ್‌ಗೆ ಹೆದರಲ್ಲ" ಎಂದ ದಿಪ್ಕೆ.
Abhijit Dipke arguing with female police officer at Delhi airport
ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವ ಅಭಿಜಿತ್ ದಿಪ್ಕೆ
Published on: 

ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಆದರೆ, ಪ್ರತಿಭಟನೆಗೆ ಆಗಮಿಸುತ್ತಿದ್ದ ಸಿಜೆಪಿ ಪ್ರಮುಖ ನಾಯಕರಾದ, ಅಭಿಜಿತ್​ ದಿಪ್ಕೆ, ಸೌರವ್​ ದಾಸ್​, ಆಶುತೋಷ್​ ರಾಂಕಾ ಸೇರಿದಂತೆ ಸುಮಾರು 50 ಜನರನ್ನು ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಭಿಜಿತ್​ ದಿಪ್ಕೆ ಹಾಗೂ ದೆಹಲಿ ಪೊಲೀಸರ ನಡುವೆ ವಾಗ್ವಾದ ಜೋರಾಗಿದ್ದು, ಈ ಘಟನೆಯ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಅರೆಸ್ಟ್​ಗೆಲ್ಲಾ ನಾನು ಹೆದರಲ್ಲ!

ಜಂತರ್​-ಮಂತರ್​ನಲ್ಲಿ ಭಾರೀ ಪ್ರತಿಭಟನೆಗೆ ಕರೆಕೊಟ್ಟಿದ್ದ ಅಭಿಜಿತ್​ ದಿಪ್ಕೆ ಸೇರಿ ಸುಮಾರು 50 ಜನರ ಪ್ರತಿಭಟನಾಕಾರರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿಯೇ ವಶಕ್ಕೆ ಪಡೆಯಲಾಗಿದೆ. ತಮ್ಮ ವಿಮಾನದತ್ತ ದೆಹಲಿ ಪೊಲೀಸರು ಆಗಮಿಸುತ್ತಿದ್ದಂತೆ, ಅಭಿಜಿತ್​ ದಿಪ್ಕೆ, ದಯವಟ್ಟು ಬನ್ನಿ, ನಾನು ಅರೆಸ್ಟ್​ ಆಗುವ ಸಲುವಾಗಿಯೇ ಇಲ್ಲಿಗೆ ಬಂದಿದ್ದೇನೆ. ಬನ್ನಿ ನನ್ನನ್ನು ಅರೆಸ್ಟ್​ ಮಾಡಿ ಎಂದು ಅಭಿಜಿತ್ ದಿಪ್ಕೆ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ್ದಾನೆ.

ಇದಕ್ಕೆ ಉತ್ತರಿಸಿದ ದೆಹಲಿ ಪೊಲೀಸರು, ನಾವು ನಿಮ್ಮನ್ನು ಅರೆಸ್ಟ್​ ಮಾಡುತ್ತಿಲ್ಲ, ಅರೆಸ್ಟ್​ ಮಾಡಲೂ ಬಂದಿಲ್ಲ. ದಯವಿಟ್ಟು ನಮಗೆ ಸಹಕರಿಸಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಇತರ ಪ್ರತಿಭಟನಾಕಾರರು, ದೆಹಲಿ ಪೊಲೀಸರು, ತಮ್ಮನ್ನು ವಶಕ್ಕೆ ಪಡೆಯಲು ಬಂದಿದ್ದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಅಭಿಜಿತ್ ದಿಪ್ಕೆಯನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ, ನಾನು ಈ ಅರೆಸ್ಟ್​ಗೆಲ್ಲಾ ಹೆದರುವವನಲ್ಲ, ಎಂದು ಮಹಿಳಾ ಪೊಲೀಸ್​ ವಿರುದ್ಧ ದಿಪ್ಕೆ ಕಿರಿಚುತ್ತಿರುವುದನ್ನು ವೈರಲ್ ವಿಡಿಯೋನಲ್ಲಿ ನೋಡಬಹುದಾಗಿದೆ.

Also Read
CJP ಪ್ರತಿಭಟನೆ ಹಿಂದೆ ರಾಹುಲ್, ಕೇಜ್ರಿವಾಲ್ ಕೈವಾಡ: ವಿದೇಶಿ ಬಾಸ್‌ಗಳನ್ನು ಮೆಚ್ಚಿಸಲು ದೇಶದಲ್ಲಿ ಅಶಾಂತಿ ಸೃಷ್ಟಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಆರೋಪ! Nitin Nabin
Abhijit Dipke arguing with female police officer at Delhi airport

ವಿದೇಶಿ ಬಾಸ್​ಗಳನ್ನು ಮೆಚ್ಚಿಸಲು ಯತ್ನ!

ಶನಿವಾರ (ಅ.10) ದೆಹಲಿಯ ಜಂತರ್​-ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯಲಿರುವ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ಹಿಂದೆ ರಾಹುಲ್​ ಗಾಂಧಿ ಮತ್ತು ಅರವಿಂದ್​ ಕೇಜ್ರಿವಾಲ್​ ಅವರ ಕೈವಾಡವಿದೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್​ ಆರೋಪಿಸಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿದಂತೆ, ಇಂಡಿ ಮೈತ್ರಿಕೂಟ ಹಾಗೂ ನಗರ ನಕ್ಸಲ್​ರ ಗುಂಪು ದೇಶದ ಶಾಂತಿಯನ್ನು ಭಂಗಗೊಳಿಸಿ, ವಿದೇಶದಲ್ಲಿರುವ ತಮ್ಮ ಬಾಸ್​ಗಳನ್ನು ಖುಷಿ ಪಡಿಸುವುದೇ ಇವರ ಗುರಿಯಾಗಿದೆ, ಆದರೆ ಇದನ್ನು ನಡೆಯಲು ಎನ್​ಡಿಎ ಸರ್ಕಾರ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net