PUBG ಆಡುತ್ತಾ ಮನೆಯಲ್ಲೇ ಇರಬೇಡ ಕೆಲಸಕ್ಕೆ ಹೋಗು ಎಂದ ಹೆಂಡತಿಯನ್ನೇ ಕೊಂದ ಪತಿ | Husband kills wife

ಆರೋಪಿ ಪತಿ ರಂಜಿತ್ ಪಟೇಲ್
ಆರೋಪಿ ಪತಿ ರಂಜಿತ್ ಪಟೇಲ್
Published on
ಭೋಪಾಲ್: ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ PUBG ಆಡುತ್ತಾ ಮನೆಯಲ್ಲೇ ಇರಬೇಡ ಕೆಲಸಕ್ಕೆ ಹೋಗು ಎಂದ ಹೆಂಡತಿಯನ್ನೇ ಆಕೆಯ ಪತಿ ಕತ್ತು ಹಿಸುಕಿ ಕೊಲೆ ಮಾಡಿದ್ದು(Husband kills wife), ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಂಗಳವಾರ(ಡಿ. 02) ವರದಿಯಾಗಿದೆ.
ನೇಹಾ ಪಟೇಲ್(24) ಕೊಲೆಯಾದ ಹೆಂಡತಿ. ರಂಜಿತ್ ಪಟೇಲ್ ಕೊಲೆ ಮಾಡಿದ ಆರೋಪಿ ಪತಿ. ಶನಿವಾರ ತಡರಾತ್ರಿ ಪಬ್​​ಜಿ ಆಟದ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಟವೆಲ್​ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಹೆಂಡತಿಯ ತವರು ಮನೆಗೆ ಕಾಲ್ ಮಾಡಿ ತಿಳಿಸಿ ಪರಾರಿಯಾಗಿದ್ದಾನೆ.
ತಕ್ಷಣ ಮೃತ ಕುಟುಂಬಸ್ಥರು ಮನೆಗೆ ಧಾವಿಸಿದಾಗ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ನೇಹಾಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ವೈದ್ಯರನ್ನು ಕರೆಸಿ ಪರೀಕ್ಷಿಸಿದ್ದು, ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಿಎಸ್​ಪಿ ಉದಿತ್ ಮಿಶ್ರಾ, ಕೊಲೆಯನ್ನು ದೃಢಪಡಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಮನೆಯೊಳಗೆ ಶವ ಪತ್ತೆಯಾಗಿದ್ದು, ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳಿವೆ. ಪತಿ ಪರಾರಿಯಾಗಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ PUBG ವ್ಯಸನದ ಬಗ್ಗೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಬಂಧಿಸುವ ಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ
ಮೃತ ನೇಹಾ ಅವರ ಕುಟುಂಬವು ಆರೋಪಿ ಮತ್ತು ಅವರ ಸಂಬಂಧಿಕರು ನಿಯಮಿತವಾಗಿ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಿದ್ದರು ಎಂದು ಆರೋಪಿಸಿದೆ. ಆರೋಪಿ ಪತಿ ಕಾರುಗಾಗಿ ಬೇಡಿಕೆ ಇಟ್ಟಿದ್ದನು, ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದನು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net