ಏತನ್ಮಧ್ಯೆ, ಭಾನುವಾರ ತಡರಾತ್ರಿ ಬಹ್ರೈಚ್‌ನಲ್ಲಿ ಕಾರು ಮತ್ತು ಕಂಬೈನ್ ಹಾರ್ವೆಸ್ಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೇಪಾಳದಿಂದ ಬಹ್ರೈಚ್ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಬ್ರಹ್ಮಿಣಿಪುರದ ದಿಘಾ ಮೋರ್ ಬಳಿ ಗೋಧಿ ಕೊಯ್ಲು ಯಂತ್ರಕ್ಕೆ ಡಿಕ್ಕಿ ಹೊಡೆದಿದೆ. ಎರಡೂ ಅಪಘಾತಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).